ಸಾಹಿತ್ಯ ಭವನಗಳ ನಿರ್ಮಾಣದಲ್ಲಿ ಅಂಗಡಿ ಪಾತ್ರ ಬಹುಮುಖ್ಯ: ರವೀಂದ್ರ ಬಾಕಳೆ

| Published : Mar 26 2024, 01:03 AM IST

ಸಾಹಿತ್ಯ ಭವನಗಳ ನಿರ್ಮಾಣದಲ್ಲಿ ಅಂಗಡಿ ಪಾತ್ರ ಬಹುಮುಖ್ಯ: ರವೀಂದ್ರ ಬಾಕಳೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ತಾವರಗೇರಾ, ಗುಮಗೇರಾ ಹಾಗೂ ಹನಮಸಾಗರದಲ್ಲಿ ಒಟ್ಟು ಮೂರು ಸಾಹಿತ್ಯ ಭವನ ನಿರ್ಮಾಣವನ್ನು ಮಾಡಿದ್ದು, ಈ ಕಾರ್ಯದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಅವರ ಪಾತ್ರ ಪ್ರಮುಖವಾದುದು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ತಾವರಗೇರಾ, ಗುಮಗೇರಾ ಹಾಗೂ ಹನಮಸಾಗರದಲ್ಲಿ ಒಟ್ಟು ಮೂರು ಸಾಹಿತ್ಯ ಭವನ ನಿರ್ಮಾಣವನ್ನು ಮಾಡಿದ್ದು, ಈ ಕಾರ್ಯದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಅವರ ಪಾತ್ರ ಪ್ರಮುಖವಾದುದು ಎಂದು ಕಸಾಪ ಮಾಜಿ ಅಧ್ಯಕ್ಷ ರವೀಂದ್ರ ಬಾಕಳೆ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ಕುಷ್ಟಗಿ ಕಸಾಪ ವತಿಯಿಂದ ನಡೆದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಗಡಿ ಕನ್ನಡದ ಕಾರ್ಯಕ್ರಮಗಳನ್ನು ಮಾಡುವಲ್ಲಿ ತುಂಬಾ ಹಠವಾದಿಯಾಗಿದ್ದರು. ಅಂದುಕೊಂಡ ಕಾರ್ಯವನ್ನು ಸಂಪೂರ್ಣವಾಗಿ ಮುಗಿಸುವತನಕ ಬಿಡುವ ವ್ಯಕ್ತಿಯಲ್ಲ, ಇವರು ಕನ್ನಡ ಕಟ್ಟುವ ಕಟ್ಟಾಳುಗಳಾಗಿ ಕೆಲಸ ಮಾಡಿದ್ದಾರೆ ಎಂದರು. ಅವರ ನೇತೃತ್ವದಲ್ಲಿ ನಮ್ಮ ತಾಲೂಕಿನಲ್ಲಿ ಮೂರು ಕಸಾಪ ಭವನ ನಿರ್ಮಾಣವಾಗಿವೆ. ಆಜೀವ ಸದಸ್ಯರನ್ನು ಹೆಚ್ಚು ಮಾಡುವಲ್ಲಿ ತುಂಬಾ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದರು.

ಸಾಹಿತಿ ಹನುಮೇಶ ಗುಮಗೇರಿ ಮಾತನಾಡಿ, ಅಂಗಡಿ ಸಾಹಿತ್ಯ ಬರೆದ ವ್ಯಕ್ತಿ ಅಲ್ಲ, ನೂರಾರು ಕವಿಗಳಿಗೆ ಸಾಹಿತಿಗಳಿಗೆ ಅವಕಾಶ ಒದಗಿಸಿಕೊಟ್ಟು ಸಾಹಿತ್ಯವನ್ನು ಸಂರಕ್ಷಣೆ ಮಾಡಲು ಮುಂದಾಗಿದ್ದ ಶ್ರೇಷ್ಟ ಹಾಗೂ ಸರಳ ಸಜ್ಜನಿಕೆಯ ಸಂಘಟಕ ಎಂದರು.

ಕೇಂದ್ರ ಕಸಾಪ ಸಂಘ-ಸಂಸ್ಥೆ ಪ್ರತಿನಿಧಿ ನಬಿಸಾಬ ಕುಷ್ಟಗಿ, ಹಿರಿಯ ಆಜೀವ ಸದಸ್ಯ ಟಿ. ಬಸವರಾಜ, ಶಿಕ್ಷಕ ನಟರಾಜ ಸೋನಾರ, ಉಮೇಶ ಹಿರೇಮಠ, ಜಾನಪದ ಕಲಾವಿದ ಶರಣಪ್ಪ ವಡಗೇರಿ, ತಾಜುದ್ದಿನ ದಳಪತಿ, ಹ.ಯು. ಈಟಿ, ಶಿವಪ್ಪ ನೀರಾವರಿ, ಕುಮಾರಸ್ವಾಮಿ ಹಿರೇಮಠ, ಡಾ. ಜೀವನಸಾಬ ಬಿನ್ನಾಳ ಇತರರು ಮಾತನಾಡಿದರು.

ಕುಷ್ಟಗಿ ಕಸಾಪ ಘಟಕದ ವತಿಯಿಂದ ರಾಜಶೇಖರ ಅಂಗಡಿ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು ಎಂದು ನಿರ್ಣಯಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ ವಹಿಸಿದ್ದರು. ಕಾರ್ಯದರ್ಶಿ ಮಹೇಶ ಹಡಪದ, ಶರಣಪ್ಪ ಲೈನದ, ಪರಶಿವಮೂರ್ತಿ ದೋಟಿಹಾಳ, ಬಸವರಾಜ ದೇವರಮನಿ, ರವೀಂದ್ರ ಬಳಿಗಾರ, ರಹೀಮಾನ ಸಾಬ್ ದೋಟಿಹಾಳ, ವೀರೇಶ ಕರಡಿ ಸೇರಿದಂತೆ ಇತರರು ಇದ್ದರು.