ಸಾರಾಂಶ
The role of teachers in everyone's life is immense: Sagara
-ಶಹಾಪುರದ ನಗರದ ಗೋಕುಲ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
-----ಕನ್ನಡಪ್ರಭ ವಾರ್ತೆ ಶಹಾಪುರ
ಮನುಷ್ಯರ ವ್ಯಕ್ತಿತ್ವ ನಿರ್ಮಾಣದ ನಿಜವಾದ ಶಿಲ್ಪಿಗಳು ಶಿಕ್ಷಕರು. ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಕರ ಪಾತ್ರ ಅಪಾರ. ಶಿಕ್ಷಕರು ನಮ್ಮಲ್ಲಿರುವ ಅಜ್ಞಾನವೆಂಬ ಅಂಧಕಾರವ ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಬೀರುವವರು. ಶಿಕ್ಷಕರ ಸಮಾಜದ ಶ್ರೇಷ್ಠ ಸ್ಥಾನದಲ್ಲಿರಿಸಿ ಗೌರವಿಸಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ತಿಳಿಸಿದರು.ನಗರದ ಗೋಕುಲ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಶಿಕ್ಷಕರ ಶ್ರಮ ಇರುತ್ತದೆ. ಶಿಕ್ಷಕ ಕೇವಲ ಉದ್ಯೋಗಿ ಅಲ್ಲ. ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಶಿಲ್ಪಿ ಎಂದರು.
ಉಪನ್ಯಾಸಕರಾದ ಡಿ.ಪಿ. ಸಜ್ಜನ್ ಮಾತನಾಡಿ, ನಮ್ಮ ಸಂಸ್ಥೆಯ ಹೆಸರು ಉನ್ನತ ಮಟ್ಟಕ್ಕೇರಲು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಶ್ರಮದಿಂದ ಸಾಧ್ಯವಾಗಿದೆ. ಶಿಕ್ಷಕರು ಕೊಟ್ಟ ಶಿಕ್ಷಣವನ್ನು ವಿದ್ಯಾರ್ಥಿಗಳು ಜೀವನದುದ್ದಕ್ಕೂ ಅಳವಡಿಸಿಕೊಳ್ಳಲು ತಿಳಿಸಿದರು.ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಎಳ್ಳಷ್ಟೂ ಕಪ್ಪು ಚುಕ್ಕೆ ಇಲ್ಲದೆ ಅನವಶ್ಯಕವಾಗಿ ರಜೆಗಳನ್ನು ತೆಗೆದುಕೊಳ್ಳದೆ ವರ್ಷದ ಎಲ್ಲ ಶಾಲಾ ದಿನಗಳಲ್ಲಿ ಸದಾ ಹಾಜರಾತಿ ಇರುವ ಪ್ರಾಮಾಣಿಕ ಶಿಕ್ಷಕರು ಸಮಾಜದಲ್ಲಿ ಅದೆಷ್ಟೋ ಜನರಿದ್ದಾರೆ. ಅವರನ್ನು ಗೌರವಿಸಿ, ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಪ್ರಭುಗೌಡ ಪಾಟೀಲ್ ವಹಿಸಿದ್ದರು. ಪ್ರಾಂಶುಪಾಲ ಎಂ.ಡಿ. ಇಮ್ರಾನ್, ಉಪನ್ಯಾಸಕರಾದ ಪರಶುರಾಮ, ಶರಣಮ್ಮ, ಕಾಶಿಂಸಾಬ, ಚನ್ನಬಸಪ್ಪ, ಶಶಿಕುಮಾರ, ಶರಣ ಬಸ್ಸಪ್ಪ, ಅಣ್ಣಾರಾವ, ಮಹೇಶ, ಅಡಿವೆಪ್ಪ, ಜ್ಯೋತಿ ಸೇರಿದಂತೆ ಇತರರಿದ್ದರು. ಸಾಕ್ಷಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಹೇಶ ಸ್ವಾಗತಿಸಿದರು. ಸಾನಿಯಾ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.------
8ವೈಡಿಆರ್4: ಶಹಾಪುರದ ನಗರದ ಗೋಕುಲ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.------