ಮಕ್ಕಳು ಉನ್ನತ ಸ್ಥಾನಕ್ಕೇರುವಲ್ಲಿ ಶಿಕ್ಷಕರ ಪಾತ್ರ ಅಪಾರ: ಡಾ. ವಿ.ಕೆ. ಸಂಕನಗೌಡರ

| Published : Aug 07 2024, 01:05 AM IST

ಮಕ್ಕಳು ಉನ್ನತ ಸ್ಥಾನಕ್ಕೇರುವಲ್ಲಿ ಶಿಕ್ಷಕರ ಪಾತ್ರ ಅಪಾರ: ಡಾ. ವಿ.ಕೆ. ಸಂಕನಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಮುಂದಿನ ಭವಿಷ್ಯವೇ ಮಕ್ಕಳಾಗಿರುವುದರಿಂದ ಅವರಿಗೆ ಉತ್ತಮ ಶಿಕ್ಷಣ, ಸಂಸ್ಕಾರದ ಅವಶ್ಯವಿದ್ದು, ಅಂತಹ ವಾತಾವರಣ ರಾಮೇನಹಳ್ಳಿ ಶಾಲೆಯಲ್ಲಿನ ಮಕ್ಕಳಿಗೆ ದೊರೆಯುತ್ತಿದೆ.

ಮುಂಡರಗಿ:

ಮಕ್ಕಳಲ್ಲಿರುವ ಕನಸುಗಳಿಗೆ ಅಕ್ಷರಾಭ್ಯಾಸ ಎನ್ನುವ ರೆಕ್ಕೆಪುಕ್ಕ ಹಚ್ಚುವ ಮೂಲಕ ಅವರು ಉನ್ನತ ಸ್ಥಾನಕ್ಕೇರುವಲ್ಲಿ ವಿದ್ಯ ಕಲಿಸಿದ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಸಾಹಿತಿ, ಖ್ಯಾತ ವೈದ್ಯ ಡಾ. ವಿ.ಕೆ. ಸಂಕನಗೌಡರ ಹೇಳಿದರು.

ಸೋಮವಾರ ಪಟ್ಟಣದ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ 70ನೇ ವರ್ಷದ ಜನ್ಮದಿನದ ಅಂಗವಾಗಿ ಮಕ್ಕಳಿಗೆ ನೋಟ್ ಬುಕ್‌ ಮತ್ತು ಪೆನ್ನುಗಳನ್ನು ವಿತರಿಸಿ ಮಾತನಾಡಿದರು.

ದೇಶದ ಮುಂದಿನ ಭವಿಷ್ಯವೇ ಮಕ್ಕಳಾಗಿರುವುದರಿಂದ ಅವರಿಗೆ ಉತ್ತಮ ಶಿಕ್ಷಣ, ಸಂಸ್ಕಾರದ ಅವಶ್ಯವಿದ್ದು, ಅಂತಹ ವಾತಾವರಣ ರಾಮೇನಹಳ್ಳಿ ಶಾಲೆಯಲ್ಲಿನ ಮಕ್ಕಳಿಗೆ ದೊರೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು.

ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ ಮಾತನಾಡಿ, ಶ್ರಮದಿಂದ ಸಾಧನೆಯ ಮೆಟ್ಟಿಲನ್ನೇರಿದ ಡಾ. ವಿ.ಕೆ. ಸಂಕನಗೌಡರ ಅವರು ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎನ್ನುವ ಉದ್ದೇಶದಿಂದ ಈ ಶಾಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ನೊಂದವರ ಹಾಗೂ ಬಡವರ ಧ್ವನಿಯಾಗಿರುವ ಡಾ. ಸಂಕನಗೌಡರ ಅವರಿಂದ ಮುಂದೆ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಗಳಾಗಲಿ ಎಂದರು.ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, ಡಾ. ವಿ.ಕೆ. ಸಂಕನಗೌಡರ ಕೇವಲ ವೈದ್ಯರಷ್ಟೆ ಅಲ್ಲ. ಅಮ್ಮನ ಸೆರಗು ಮತ್ತು ಅಪ್ಪನಕೊಡೆ ಎಂಬ ಎರಡು ವಿಶೇಷ ಕವನಗಳುಳ್ಳ ಸಂಕಲನ ಪ್ರಕಟಿಸಿದ್ದಾರೆ. ಇನ್ನು ಐದಾರು ಕವನ ಸಂಕಲಗಳಾಗುವಷ್ಟು ಕವನಗಳು ಅವರ ಬಳಿ ಇವೆ. ಬಿಡುವಿಲ್ಲದ ತಮ್ಮ ವೈದ್ಯ ವೃತ್ತಿಯ ಜತೆಗೆ ಸಿಕ್ಕ ಸಮಯವನ್ನು ವ್ಯರ್ಥ ಮಾಡದೇ ಇಂತಹ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕು ಶಸಾಪ ಅಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್‌ ಪಾಟೀಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪಿ.ಎಂ. ಲಾಂಡೆ, ಎಂ.ಆರ್. ಗುಗ್ಗರಿ, ಪಿಎಚ್. ಹಲವಾಗಲಿ, ಪಿ.ಆರ್. ಗಾಡದ, ಶಿವಲೀಲಾ ಅಬ್ಬಿಗೇರಿ, ಎ.ವಿ. ಹಳ್ಳಿಕೇರಿ, ಸುರೇಶ ಭಾವಿಹಳ್ಳಿ, ದೇವಪ್ಪ ಇಟಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.