ಸಮಾಜದ ಪ್ರಗತಿಗೆ ಶಿಕ್ಷಕರ ಪಾತ್ರ ಮುಖ್ಯ: ಪಡಗೂರು ಶ್ರೀ

| Published : Sep 09 2024, 01:35 AM IST / Updated: Sep 09 2024, 01:36 AM IST

ಸಮಾಜದ ಪ್ರಗತಿಗೆ ಶಿಕ್ಷಕರ ಪಾತ್ರ ಮುಖ್ಯ: ಪಡಗೂರು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಪ್ರಗತಿ ಮತ್ತು ಶಕ್ತಿ ಶಾಲಿ ರಾಷ್ಟ್ರ ಕಟ್ಟಲು ಶಿಕ್ಷಕರ ಪಾತ್ರ ಅಪಾರ ಎಂದು ಪಡುಗೂರು ಅಡವಿ ಮಠದ ಪೀಠಾಧ್ಯಕ್ಷ ಶಿವಲಿಂಗೆಂದ್ರ ಸ್ವಾಮೀಜಿ ಪ್ರಶಂಶಿಸಿದರು. ಗುಂಡ್ಲುಪೇಟೆಯಲ್ಲಿ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರ ದಿನ, ಗುರುವಂದನೆ

ಗುಂಡ್ಲುಪೇಟೆ: ಸಮಾಜದ ಪ್ರಗತಿ ಮತ್ತು ಶಕ್ತಿ ಶಾಲಿ ರಾಷ್ಟ್ರ ಕಟ್ಟಲು ಶಿಕ್ಷಕರ ಪಾತ್ರ ಅಪಾರ ಎಂದು ಪಡುಗೂರು ಅಡವಿ ಮಠದ ಪೀಠಾಧ್ಯಕ್ಷ ಶಿವಲಿಂಗೆಂದ್ರ ಸ್ವಾಮೀಜಿ ಪ್ರಶಂಶಿಸಿದರು.

ಪಟ್ಟಣದ ಶ್ರೀ ಮದ್ದಾನೇಶ್ವರ ಪ್ರೌಢ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಅನಾದಿಕಾಲದಿಂದಲೂ ಶಿಕ್ಷಕರನ್ನು ಗುರುಗಳ ಸ್ಥಾನದಲ್ಲಿ ನೋಡಲಾಗಿದೆ ಎಂದು ಹೇಳಿದರು.

ಮಕ್ಕಳ ಮುಗ್ಧ ಮಗುವಿನ ಮನಸ್ಸು ಅರ್ಥ ಮಾಡಿಕೊಂಡು ಶಿಕ್ಷಣ ಹೇಳುವ ಕೆಲಸವಾಗುತ್ತಿದೆ ಅಲ್ಲದೆ ಮಕ್ಕಳೀಗೆ ಉತ್ತಮ ಸಂಸ್ಕಾರ ಹೇಳಿ ಕೊಡಲಾಗುತ್ತಿದೆ ಈ ಕಾರಣದಿಂದಲೇ ಶಿಕ್ಷಕರಿಗೆ ಅಪಾರ ಗೌರವ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನ ನೀಡಲಾಗಿದೆ. ಇಂದಿನ ಕಾಲದಲ್ಲಿ ಗುರುಕುಲದಲ್ಲಿ ನಡೆಯುತ್ತಿದ್ದ ಶಿಕ್ಷಣ ಕಾಲಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ ಎಂದರು.

ಶಿಕ್ಷಣ ತಜ್ಞ ಡಾ.ಸರ್ವಪಲ್ಲಿ ರಾಧಾಕೃಷ್ಣರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡುತ್ತಿದ್ದೇವೆ. ಭಾರತದ ಎರಡನೇ ರಾಷ್ಟ್ರಪತಿ, ಮೊದಲ ಉಪ ರಾಷ್ಟ್ರಪತಿಯಾಗಿದ್ದರು ಎಂದರು.

ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತ ಶಿಕ್ಷಕರಾದ ಗುರುಲಿಂಗಪ್ಪ, ಲೀಲಾವತಿ, ನಂಜಪ್ಪ, ಶಿವ ವೀರಭದ್ರಪ್ಪ, ಆನಂದಮೂರ್ತಿ, ನವೀನಕುಮಾರಗೆ ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿ ಸನ್ಮಾನಿಸಿದರು.

ಕಳೆದ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದ ಶಾಲೆಯ ವಿದ್ಯಾರ್ಥಿಗಳನ್ನು ಸಹ ಗೌರವಿಸಿ ಸನ್ಮಾನಿಸಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್‌,ನಿವೃತ್ತ ಉಪನ್ಯಾಸಕ ಬಸವರಾಜು, ಪ್ರಾಂಶುಪಾಲ ನಟರಾಜು, ಮುಖ್ಯ ಶಿಕ್ಷಕರಾದ ಪ್ರಕಾಶ್, ಸೋಮಶೇಖರ್, ಶಿಕ್ಷಕರಾದ ಮಹೇಶಪ್ಪ, ಮೋಹನ್, ಅನಿಲ್ ಕುಮಾರ್, ರಾಜೇಶ್, ಶಿವಪ್ರಕಾಶ್, ಪ್ರಭುಸ್ವಾಮಿ, ಮಲ್ಲೇಶ್, ನಾಗಪ್ಪ, ಸ್ವಾಮಿ, ಗೋವಿಂದರಾಜು, ಮಧುಕಿರಣ್, ಸೌಮ್ಯ, ನಾಗವೇಣಿ, ದಿವ್ಯ ರಾಣಿ, ಮಹಾಲಕ್ಷ್ಮಿ, ನಂದೀಶ್, ಮಂಜುಳ, ಪೂರ್ಣಿಮಾ ಇದ್ದರು.