ಸಾರಾಂಶ
ಕನ್ನಡಪ್ರಭವಾರ್ತೆ ಚನ್ನಗಿರಿವಿದ್ಯಾರ್ಥಿಗಳಲ್ಲಿನ ತಪ್ಪುಗಳನ್ನು ತಿದ್ದಿ, ತೀಡಿ ಉತ್ತಮವಾಗಿ ರೂಪಿಸುವಂತವರು ಗುರುಗಳಾಗಿದ್ದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ವದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.ಶನಿವಾರ ಪಟ್ಟಣದ ಮರಾಠ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಡಾ.ದಾದಾಪೀರ್ ನವೀಲೆಹಾಳ್ ಅವರೊಂದಿಗೆ ಓಡನಾಡಿಗಳ ಮನದ ಮಾತು, ನಡೆದ ಹೆಜ್ಜೆಯ ನೆನಪು ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದಲ್ಲಿ ಉತ್ತಮ ಮಾತುಗಾರಿಕೆಯನ್ನು ಪ್ರಗತಿ ಪರ ಚಿಂತನೆ ಹೊಂದಿರುವ ಡಾ.ದಾದಾಪೀರ್ ನವೀಲೆಹಾಳ್ ಇವರು ರಾಜ್ಯದ ಹಲವು ಕಾಲೇಜುಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿಯನ್ನು ನಿರ್ವಹಿಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಮೂಡಿಸಿದವರು ಎಂದು ಹೇಳಿದರು.ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಡಾ.ದಾದಾಪೀರ್ ನವೀಲೆಹಾಳ್ ಒಬ್ಬ ಮುಸ್ಲಿಂ ಧರ್ಮದವರಾದರೂ ಕೂಡ ಕನ್ನಡ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ವಿಚಾರಗಳನ್ನು ತಿಳಿಸುತ್ತಾ ಇವರು ಬರೆದಿರುವ ಕನ್ನಡದ 5ಕೃತಿಗಳೂ ಕೂಡ ಉತ್ತಮ ಮೌಲ್ಯ ಉಳ್ಳದ್ದಾಗಿದೆ ಎಂದರು.
ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ, ವಿದ್ಯೆ ಎನ್ನುವುದು ವಿದ್ಯೆಯಾಗಿ ಉಳಿದಿಲ್ಲ ಕೇವಲ ವಿಷಯ ಸಂಗ್ರಹಣೆಗಾಗಿಯೇ ಇದ್ದು, ಪ್ರಸ್ತುತ ಸಂದರ್ಭದಲ್ಲಿ ನಿಜವಾದ ಗುರುಗಳು ತುಂಬಾ ವಿರಳವಾಗಿದ್ದಾರೆ ಎಂದು ಹೇಳುತ್ತಾ ದಾದಾಪೀರ್ ನವೀಲೆಹಾಳ್ ಅವರಂತಹ ಕನ್ನಡ ಭಾಷಾ ಪ್ರೇಮಿಗಳು ಹೆಚ್ಚು ಹೆಚ್ಚಾಗಿ ಬರಬೇಕಾಗಿದೆ ಎಂದರು. ಈ ವೇಳೆ ರೈತ ಮುಖಂಡ ತೇಜಸ್ವಿ ಪಟೇಲ್, ಬಾನುದಾದಾಪೀರ್ ಉಪಸ್ಥಿತರಿದ್ದರು.