ಬುದ್ಧಿಮಾಂದ್ಯ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಳಕ್ಕೆ ಶಿಕ್ಷಕರ ಪಾತ್ರ ಮಹತ್ವದ್ದು

| Published : Sep 23 2024, 01:18 AM IST

ಬುದ್ಧಿಮಾಂದ್ಯ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಳಕ್ಕೆ ಶಿಕ್ಷಕರ ಪಾತ್ರ ಮಹತ್ವದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧಿ ಮಾಂದ್ಯ ವಿಶೇಷ ಮಕ್ಕಳ ಬೌಧ್ಧಿಕ ಮಟ್ಟವು ಹೆಚ್ಚಳಗೊಂಡು ಸಾಮಾನ್ಯರಂತೆ ಬದುಕಲು ಇಲ್ಲಿನ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹಾವೇರಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಚ ನೀಲಪ್ಪ ಚಾವಡಿ ಹೇಳಿದರು.

ಸವಣೂರು: ಬುದ್ಧಿ ಮಾಂದ್ಯ ವಿಶೇಷ ಮಕ್ಕಳ ಬೌದ್ಧಿಕ ಮಟ್ಟವು ಹೆಚ್ಚಳಗೊಂಡು ಸಾಮಾನ್ಯರಂತೆ ಬದುಕಲು ಇಲ್ಲಿನ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹಾವೇರಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ನೀಲಪ್ಪ ಚಾವಡಿ ಹೇಳಿದರು. ಪಟ್ಟಣದ ಹಾವಣಗಿ ಬಡಾವಣೆಯಲ್ಲಿರುವ ಶ್ರೀ ಸಾಯಿ ಬುದ್ಧಿ ಮಾಂದ್ಯ ವಿಶೇಷ ಮಕ್ಕಳ ವಸತಿ ರಹಿತ ಶಾಲೆಯಲ್ಲಿ ಬಿಜೆಪಿ ಹಾವೇರಿ ಜಿಲ್ಲಾ ಒಬಿಸಿ ಮೋರ್ಚಾ ಹಾಗೂ ಸವಣೂರ ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿರವರ ಹುಟ್ಟು ಹಬ್ಬದ ಪ್ರಯುಕ್ತ ಕೈಗೊಳ್ಳಲಾದ ಸೇವಾ ಪಾಕ್ಷಿಕ ನಿಮಿತ್ತ ಮಕ್ಕಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ದೇಶ ಕಂಡತಹ ಮಹಾನ ನಾಯಕರವರ ಹುಟ್ಟು ಹಬ್ಬವನ್ನು ಈ ಬಾರಿ ವಿಶೇಷ ಚೇತನರಿಗೆ ಹಣ್ಣು ಹಂಪಲವನ್ನು ವಿತರಿಸಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು ಎಂದರು.ಕಾರ್ಯಕ್ರಮದ ಅನ್ವಯ ಶ್ರೀ ಸಾಯಿ ಬುದ್ಧಿ ಮಾಂದ್ಯ ವಿಶೇಷ ಮಕ್ಕಳ ವಸತಿ ರಹಿತ ಶಾಲೆಯ ಅಧ್ಯಕ್ಷ ರವಿ ಕಬಾಡೆಯವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹನಮಂತಗೌಡ ಮುದಿಗೌಡ್ರ, ಒಬಿಸಿ ಮೋರ್ಚಾ ಅಧ್ಯಕ್ಷ ಹೊನ್ನಪ್ಪ ಕೊಳವರ, ಟಿಎಪಿಎಂಎಸ್ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ., ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಸವರಾಜ ಸವುರ, ಮಂಡಲ ಕಾರ್ಯರ್ಶಿಗಳಾದ ಅಶೋಕ ಎಲಿಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಹುಲಗೂರ, ಗಜಾನನ ರಾಶಿನಕರ, ವಿನಯ ತಳಗೇರಿ ಪದಾಧಿಕಾರಿಗಳಾದ ಮಂಜುನಾಥ ಕೊಪ್ಪದ, ಚನ್ನಬಸಯ್ಯ ದುರ್ಗದಮಠ, ಚಂದ್ರಶೇಖರ ನಾಗಪ್ಪನವರ, ಮಹೇಶ ಮುದಗಲ, ಶಂಬುಲಿಂಗ ಕಣವಿ, ಪರಶುರಾಮ ಛಬ್ಬಿ, ರಾಮಣ್ಣ ಲಮಾಣಿ, ಕಾಳಪ್ಪ ಲಮಾಣಿ ಹಾಗೂ ಶ್ರೀ ಸಾಯಿ ಬುದ್ಧಿ ಮಾಂದ್ಯ ವಿಶೇಷ ಮಕ್ಕಳ ವಸತಿ ರಹಿತ ಶಾಲೆಯ ಸಿಬ್ಬಂದಿಗಳು ಇದ್ದರು.