ಶಿಕ್ಷಕ ವೃತ್ತಿ ಪವಿತ್ರವಾದುದು. ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಪರಿಣಾಮ ಹಳೆಯ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ಶಿರಹಟ್ಟಿ: ಭರತ ಭೂಮಿ ಪವಿತ್ರ ಋಷಿಗಳ ನಾಡು. ಮೊದಲು ಶಿಕ್ಷಣ ಆರಂಭಗೊಂಡಿರುವುದೇ ಆಶ್ರಮ, ಮಠಮಾನ್ಯಗಳಿಂದ. ಅಲ್ಲಿ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಲಾಗುತ್ತಿತ್ತು. ಅದರ ಪರಿಣಾಮದಿಂದ ಇಂದಿಗೂ ಸಮಾಜದಲ್ಲಿ ಗುರು ಪರಂಪರೆಗೆ ಹೆಚ್ಚಿನ ಮೌಲ್ಯವಿದೆ ಎಂದು ಮಣಕವಾಡ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.ಭಾನುವಾರ ಪಟ್ಟಣದ ಉತ್ಸವ ಗಾರ್ಡನ್ ಹಾಲ್‌ನಲ್ಲಿ ಎಫ್.ಎಂ. ಡಬಾಲಿ ಹಾಗೂ ಎಂ.ಎಫ್. ಡಬಾಲಿ ಪ್ರೌಢಶಾಲೆಯಲ್ಲಿ ೨೦೦೪- ೦೫ನೇ ಸಾಲಿನಲ್ಲಿ ಕಲಿತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಳಗದಿಂದ ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿಕ್ಷಕ ವೃತ್ತಿ ಪವಿತ್ರವಾದುದು. ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಪರಿಣಾಮ ಹಳೆಯ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.ಉತ್ತಮ ಶಿಕ್ಷಕ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡುವ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಸಾಧ್ಯ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಾಲೆ ಶಿಕ್ಷಕರ ಪಾತ್ರ ಅತ್ಯಮೂಲ್ಯವಾದದ್ದು. ಶಿಕ್ಷಕರ ವೃತ್ತಿ ಜೀವನದ ಸಾಧನೆ ಏನು ಎಂಬುದು ಅವರ ನಿವೃತ್ತಿ ದಿನ ಅವರಿಗೆ ಸಲ್ಲುವ ಅಭಿನಂದನೆಯಲ್ಲಿ ತಿಳಿಯುತ್ತದೆ. ಶಿಕ್ಷಕರು ಜೀವನದುದ್ದಕ್ಕೂ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಉತ್ತಮ ಸಾಧಕರನ್ನು ಸೃಷ್ಟಿಸುತ್ತಾರೆ. ಶಿಕ್ಷಕರ ಸಾಧನೆ, ಸಂಯಮ ಅಪಾರ ಎಂದರು. ನಾರಾಯಣ ಮಹೇಂದ್ರಕರ, ಎಂ.ಕೆ. ಲಮಾಣಿ, ಗಂಗಮ್ಮ ಕರಕಣ್ಣವರ, ಜಯತೀರ್ಥ ಕುಲಕರ್ಣಿ, ಚನ್ನಪ್ಪ ಸಂಕದಾಳ, ಪದ್ಮರಾಜ ಬಸ್ತಿ, ಶಶಿಕಲಾ ಹೊಸಮನಿ, ಶಂಕರ್ ಕುಂದಿ, ಎಸ್.ಎಸ್. ಪಾಟೀಲ, ಎಂ.ಎಂ. ಹುಡೇದಮನಿ, ಲಾಲಪ್ಪ ನಾಯಕ್, ಬಸವರಾಜ ಚಿಂಚಲಿ, ಬಿ.ಬಿ. ಬಾಬುಖಾನರ, ರಮೇಶ್ ಬಟಗುರ್ಕಿ, ಶಿವಯೋಗಿ ಶೆಟ್ಟರ್, ನಿಂಗಪ್ಪ ಉಡಚಗೊಂಡ ಇದ್ದರು. ಎಲ್ಲ ಶಿಕ್ಷಕರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿದರು.

ಫಕ್ಕಿರೇಶ ರಟ್ಟಿಹಳ್ಳಿ, ಚಂದ್ರಕಾಂತ ಸ್ವಾಮಿ, ಗೂಳಪ್ಪ ಕರಿಗಾರ, ಉಮೇಶ ಅತ್ತಿಗೇರಿ, ಮಂಜುನಾಥ್ ರಿತ್ತಿ, ಉದಯ ಹಣಗಿ, ನಿಂಗಪ್ಪ ಬಜನಿ, ಶ್ರೀನಿವಾಸ ಕಪಟಕರ, ವಿಠ್ಠಲ ಬಿಡವೆ, ಮುತ್ತು ತೆಗ್ಗಿನಹಳ್ಳಿ, ಸಂತೋಷ ಕೋಳಿ, ಪರಶುರಾಮ ಗಾಡಿ, ಪ್ರವೀಣ ಮೊಹರೇಕರ, ಸಿದ್ದಪ್ಪ ಪೂಜಾರ, ಫಕೀರೇಶ ನಿಟ್ಟಲಿ, ಫಕೀರೇಶ ಸಂಶಿಮಠ, ವಿಠಲ ಪರಭತ, ಇಬ್ರಾಹಿಂ ಮನಿಯಾರ, ವೀರೇಶ ಭೋರಶೆಟ್ಟರ್, ವಿಶಾಲ ಮುದೋಳಕರ, ಮೆಹಬೂಬ್‌ಸಾಬ ತಹಶೀಲ್ದಾರ, ಸವಿತಾ ಬಸ್ತಿ, ವಿಜಯಲಕ್ಷ್ಮಿ ಮಜ್ಜಗಿ, ಮಂಗಳಗೌರಿ ಹೂಗಾರ, ಶಬಾನ್ ಕಾರಬೂದಿ, ರೂಪಾ ಜಾಧವ ಇದ್ದರು.