ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ಮಾಡಿದ ರಾಜರು ಹಾಗೂ ಕಮಿಷನರ್‌ಗಳು ರಾಜ್ಯಕ್ಕೆ ಆಪಾರವಾದ ಕೊಡುಗೆ ನೀಡಿದ್ದಾರೆ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಎಂ.ಜಿ. ರಸ್ತೆ) ಸಹಾಯಕ ಪ್ರಾಧ್ಯಾಪಕ ಎಚ್.ವಿ. ಪುರುಷೋತ್ತಮ್ ಅಭಿಪ್ರಾಯಪಟ್ಟರು.ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮೈಸೂರು ಸಂಸ್ಥಾನದ ಅಭಿವೃದ್ಧಿಯಲ್ಲಿ ಕಮಿಷನರ್ ಆಳ್ವಿಕೆ ಎಂಬ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಕೊನೆಯ ರಾಜ ಮನೆತನವಾದ ಮೈಸೂರಿನ ರಾಜ ವಂಶಸ್ಥರಾದ ಕೃಷ್ಣರಾಜರು ಮತ್ತು ಚಿಕ್ಕ ದೇವರಾಜ ಒಡೆಯರ್ ಹಾಗೂ ರಾಣಿ ಲಕ್ಷ್ಮಮ್ಮಣಿ ಅವರು ಮೈಸೂರು ಸಂಸ್ಥಾನದ ಉಳಿವಿಗೆ ಶ್ರಮ ವಹಿಸಿ ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದರು. ಮೊದಲಿನಿಂದಲೂ ಮೈಸೂರು ಸಂಸ್ಥಾನದ ಅಭಿವೃದ್ಧಿಯಲ್ಲಿ ಕಮಿಷನರ್ ಆಳ್ವಿಕೆ ಮತ್ತು ಪ್ರಾಮಾಣಿಕತೆ, ಪ್ರಮುಖವಾದ ಪಾತ್ರ ವಹಿಸುತ್ತದೆ.
ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ, ರೈತವಾರಿ ಪದ್ಧತಿ, ಸಹಾಯಕ ಸೈನ್ಯ ಪದ್ಧತಿ, ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಇವುಗಳ ಬಗ್ಗೆ ಮೈಸೂರು ಸಂಸ್ಥಾನ ಮತ್ತು ಕಮಿಷನರ್‌ನ ಪಾತ್ರ ಪ್ರಚಲಿತವಾದುದು. ಮೈಸೂರು ಸಂಸ್ಥಾನದ ಅವಧಿಯಲ್ಲಿ ಕಮಿಷನರ್ ಆಗಿ ಸೇವೆ ಪ್ರತಿಯೊಬ್ಬರು ಒಂದಿಲ್ಲೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದಲ್ಲದೇ ಕಾನೂನು ಸುವ್ಯವಸ್ಥೆ, ನ್ಯಾಯಾಲಯಗಳ ಸ್ಥಾಪನೆ, ಶಿಕ್ಷಣ ಕ್ರಾಂತಿ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಈಗಲೂ ನಮ್ಮಲ್ಲಿ ಬ್ರಿಟೀಷರು ಬಿಟ್ಟು ಹೋದ ಅನೇಕ ಕಾನೂನು, ವ್ಯವಸ್ಥೆಗಳನ್ನೇ ಬಳಸಿಕೊಂಡು ಹೋಗಲಾಗುತ್ತಿದೆ. ಶಿಕ್ಷಣ ಪದ್ಧತಿಯಲ್ಲೂ ಸಹ ಅವರುಗಳು ಜಾರಿಗೆ ತಂದ ಹೊಸ ಕಾನೂನುಗಳನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕೃತಿ ಸಾಹಿತ್ಯದ ಬಗ್ಗೆ ಅಪಾರ ಗೌರವವನ್ನು ವಹಿಸುವುದರ ಜೊತೆಗೆ ಇತಿಹಾಸವನ್ನು ಆಳವಾಗಿ ಓದಬೇಕು. ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಮೈಸೂರಿನ ಸಂಸ್ಥಾನದ ಕಲಾಕೃತಿ ಮತ್ತು ವಾಸ್ತುಶಿಲ್ಪದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಿ.ಎಲ್. ಶಿವಕುಮಾರ್, ಐ.ಕ್ಯೂ.ಎ.ಸಿ. ಸಂಚಾಲಕ ಜಿ.ಆರ್. ಮೋಹನ್ ಕುಮಾರ್, ಉಪನ್ಯಾಸಕ ತಿಮ್ಮ ಶೆಟ್ಟಿ ಹಾಜರಿದ್ದರು.;Resize=(128,128))
;Resize=(128,128))