ಡೆಂಘೀ ನಿಯಂತ್ರಿಸುವಲ್ಲಿ ಜನತೆ ಪಾತ್ರ ಮುಖ್ಯ

| Published : May 18 2025, 01:20 AM IST

ಸಾರಾಂಶ

ಶಿಡ್ಲಘಟ್ಟದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ, ಡೆಂಘೀ ಜ್ವರದ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ, ಡೆಂಘೀ ನಿಯಂತ್ರಿಸಲು ಸಾರ್ವಜನಿಕರ ಪಾತ್ರ ಮಹತ್ವದ ಬಗ್ಗೆ ಘೋಷ ವಾಕ್ಯಗಳೊಂದಿಗೆ ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡುವುದರ ಮುಖಾಂತರ ಡೆಂಘೀ ಜ್ವರ ನಿಯಂತ್ರಣ ಕ್ರಮಗಳು ಕುರಿತು ಅರಿವು ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ನಗರದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಜಾಥಾ ಗೆ ತಹಸೀಲ್ದಾರ್ ಬಿ.ಎನ್ ಸ್ವಾಮಿ ಹಾಗೂ ಇಒ ಹೇಮಾವತಿ ಚಾಲನೆ ನೀಡಿದರು.

ಈ ವೇಳೆ ಜನ ಜಾಗೃತಿ ಜಾಥಾ ನಗರದ ಕಾರ್ಮಿಕ ನಗರ 1, 2, 3 ಹಾಗೂ ರಹಮತ್ ನಗರ ವಾರ್ಡ್ ಗಳಲ್ಲಿ ಸಂಚರಿಸಿ ಜನರಿಗೆ ಡೆಂಘೀ ಜ್ವರಗಳ ಬಗ್ಗೆ ಮಾಹಿತಿ ನೀಡಲಾಯಿತು ಹಾಗೂ ರಹಮತ್ ನಗರದಲ್ಲಿ ತಹಸೀಲ್ದಾರ್ ಕೆಲವು ಮನೆಗಳಿಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ಪರಿಶೀಲನೆ ಮಾಡಿ ಜನರಿಗೆ ಮಾಹಿತಿ ನೀಡಿದರು. ಡೆಂಘೀ ಅರಿವು ಮೂಡಿಸಲು ಜಾಥಾ

ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ, ಡೆಂಘೀ ಜ್ವರದ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ, ಡೆಂಘೀ ನಿಯಂತ್ರಿಸಲು ಸಾರ್ವಜನಿಕರ ಪಾತ್ರ ಮಹತ್ವದ ಬಗ್ಗೆ ಘೋಷ ವಾಕ್ಯಗಳೊಂದಿಗೆ ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡುವುದರ ಮುಖಾಂತರ ಡೆಂಘೀ ದಿನಾಚರಣೆ ಮತ್ತು ಡೆಂಘೀ ಜ್ವರ ನಿಯಂತ್ರಣ ಕ್ರಮಗಳು ಕುರಿತು ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಂಬಿಕ.ಎಂ.ಎಸ್, ಆಡಳಿತ ವೈದ್ಯಾಧಿಕಾರಿಗಳು ಡಾ.ಮನೋಹರ್, ನಗರಸಭೆಯ ಪೌರಾಯುಕ್ತ ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲಕ್ಷ್ಮಿದೇವಮ್ಮ, ಪೋಲೀಸ್ ಇಲಾಖೆಯ ವೇಣುಗೋಪಾಲ್, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್ ದೇವರಾಜ್, ಹಿರಿಯ ಪ್ರಾ.ಆ.ಸುರಕ್ಷಾಧಿಕಾರಿ ಸಿ.ಮುನಿರತ್ನಮ್ಮ ಮತ್ತಿತರರು ಇದ್ದರು.