ಸಾರಾಂಶ
ಪ್ರತಿಯೊಬ್ಬ ಶಿಕ್ಷಕನ ಪರಮ ಗುರಿ ಉತ್ತಮ ಬೋಧನೆ ನೀಡಿ, ವಿದ್ಯಾರ್ಥಿಗಳ ಬದುಕನ್ನು ಉಜ್ವಲಗೊಳಿಸುವುದಾಗಿದೆ. ತಂದೆ, ತಾಯಿ ಜನ್ಮ ನೀಡಿದ ನಂತರ ಶಾಲೆಗೆ ಸೇರಿಸಿ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ಮಾಡುವುದು ಸ್ವಾಭಾವಿಕ. ಆದರೆ, ಮಕ್ಕಳಿಗೆ ತಿದ್ದಿ ಬುದ್ದಿ ಹೇಳುವಲ್ಲಿ ಶಿಕ್ಷಕನ ಜವಾಬ್ದಾರಿ ಹೆಚ್ಚು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ತಿಳಿಸಿದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಪ್ರತಿಯೊಬ್ಬ ಶಿಕ್ಷಕನ ಪರಮ ಗುರಿ ಉತ್ತಮ ಬೋಧನೆ ನೀಡಿ, ವಿದ್ಯಾರ್ಥಿಗಳ ಬದುಕನ್ನು ಉಜ್ವಲಗೊಳಿಸುವುದಾಗಿದೆ. ತಂದೆ, ತಾಯಿ ಜನ್ಮ ನೀಡಿದ ನಂತರ ಶಾಲೆಗೆ ಸೇರಿಸಿ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ಮಾಡುವುದು ಸ್ವಾಭಾವಿಕ. ಆದರೆ, ಮಕ್ಕಳಿಗೆ ತಿದ್ದಿ ಬುದ್ದಿ ಹೇಳುವಲ್ಲಿ ಶಿಕ್ಷಕನ ಜವಾಬ್ದಾರಿ ಹೆಚ್ಚು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ತಿಳಿಸಿದರು.ಅವರು, ತಾಲೂಕಿನ ತಳಕು ಶ್ರೀಮತಿ ಗೌರಮ್ಮ ತಿಪ್ಪೇಸ್ವಾಮಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 1989-90ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹಮಿಲನದ ವತಿಯಿಂದ ಆಯೋಜಿಸಿದ್ದ ತಮ್ಮ ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗುರುಗಳ ಸಾಧನೆಯನ್ನು ಯಾವುದೇ ಅಳತೆಗೋಲಿನಿಂದ ಅಳೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಗುರುಗಳಾದ ಜಿ. ಕೃಷ್ಣಮೂರ್ತಿ, ಕೆ. ಲಿಂಗಪ್ಪರೆಡ್ಡಿ, ಎನ್. ಕೃಷ್ಣಮೂರ್ತಿ, ಎನ್.ಕೆ. ಭೀಮರಾವ್ ಅವರನ್ನು ಸನ್ಮಾನಿಸಿ ಶಿಷ್ಯವೃಂದದಿಂದ ನೆನಪಿನ ಕಾಣಿಕೆ ನೀಡಲಾಯಿತು. ವಿಶೇಷವೆಂದರೆ ತಮಗೆ ವಿದ್ಯಾದಾನ ಮಾಡಿದ ಗುರುಗಳನ್ನು ಬೆಳ್ಳಿ ರಥದಲ್ಲಿ ಕೂರಿಸಿ, ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ತಮ್ಮ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಎಟಿ ಕುಮಾರ್ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಹಳೇ ವಿದ್ಯಾರ್ಥಿಗಳಾದ ಎನ್. ಮಾರಣ್ಣ, ಟಿ. ರುದ್ರಮುನಿ, ರಫೀ, ಕಾಟಯ್ಯ, ಕೆ. ಶ್ರೀನಿವಾಸ್, ಎಸ್.ಒ. ಓಬಣ್ಣ, ಕಾಟಂಲಿಂಗಯ್ಯ, ಎಂ.ಆರ್. ರೇವಣ್ಣ, ತಿಪ್ಪೇಸ್ವಾಮಿ, ಜಗದೀಶ್, ಪ್ರಕಾಶ್, ನರೇಂದ್ರಚಾರಿ, ಟಿ.ಎಂ. ವಿಜಯಕಲಾ, ಬಸಪ್ಪ, ಗೌರಮ್ಮ, ಎಸ್.ಆರ್. ನಾಗಮಣಿ, ಜಿ. ಯಶೋಧ, ಲೀಲಾವತಿ, ಹಯಾತ್ ಬಿ, ವಾಣಿ, ಫಾತೀಮನೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.