ರಟ್ಟೀಹಳ್ಳಿ: 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಹಡಪದ ಅಪ್ಪಣ್ಣನವರು ವಚನ ಮೂಲಕ ಸಮಾಜದ ಅಂಕು-ಕೊಂಡು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪಪಂ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಹೇಳಿದರು.

ಪಪಂ ಹಾಗೂ ಹಡಪದ ಸಮಾಜದ ಮುಖಂಡರ ಸಹಯೋಗದಲ್ಲಿ ಪಪಂ ಆವರಣದಲ್ಲಿ ನಡೆದ ಹಡಪದ ಅಪ್ಪಣ್ಣನವರ 892ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಶಿವಶರಣ ಹಡಪದ ಅಪ್ಪಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಕಲ್ಯಾಣ ಕಾಂತ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಜಗಜ್ಯೋತಿ ಬಸವಣ್ಣನವರ ಪರಮಾಪ್ತರಾಗಿದ್ದ ಅಪ್ಪಣ್ಣ ಅವರ ಜತೆಗೆ ಸಾಹಿತ್ಯ ಮತ್ತು ಜ್ಞಾನ ರಕ್ಷಿಸುವಲ್ಲಿ ಅವರ ಧರ್ಮಪತ್ನಿ ಲಿಂಗಮ್ಮ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಹಡಪದ ಅಪ್ಪಣ್ಣ ಸಮಾಜದ ತಾಲೂಕಾಧ್ಯಕ್ಷ ಹಾಲಸಿದ್ದಪ್ಪ ಕಾಯಕದ ಮಾತನಾಡಿ, ಹಡಪದ ಅಪ್ಪಣ್ಣನವರು ನಮ್ಮ ಸಮಾಜದ ಶ್ರೇಷ್ಠ ಶಿವಶರಣರಾಗಿದ್ದು, ಅವರ ತತ್ವ-ಆದರ್ಶಗಳು ಇಂದಿಗೂ ಅನನ್ಯವಾಗಿದೆ ಎಂದರು.

ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ವೀರೇಶ ಕಾಯಕದ, ಕುಮಾರ ಕಾಯಕದ, ಗಣೇಶ ಕಾಯಕದ, ಮಂಜುನಾಥ ಕಾಯಕದ, ನಾಗರಾಜ ಕಟ್ಟಿಮನಿ, ಪ್ರಕಾಶ ಕಾಯಕದ, ಜಯಪ್ಪ ಕಾಯಕದ, ಮಂಜು ಮಾಸೂರ, ಉಜನೆಪ್ಪ ಹೊಸಮನಿ, ಪಪಂ ನೌಕರರಾದ ರಾಜಕುಮಾರ ಹೇಂದ್ರೆ, ಗದಿಗೇಶ ಶಿರ್ಶಿ, ಮಂಜು ಸುಣಗಾರ, ಬಸವರಾಜ ಕವಲೆತ್ತು, ಸಂತೋಷ ಬಿಳಚಿ, ನಿಖೀಲ್ ಅರ್ಕಾಚಾರಿ, ಚಂದನಕುಮಾರ ಇದ್ದರು.

ತಹಸೀಲ್ದಾರ ಕಚೇರಿ: ಪಟ್ಟಣದ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷೆ, ತಹಸೀಲ್ದಾರ್‌ ಶ್ವೇತಾ ಅಮರಾವತಿ ಹಾಗೂ ಸಮಾಜದ ಮುಖಂಡರ ಸಹಯೋಗದಲ್ಲಿ ಮಹಾನ್ ಶಿವಶರಣ ಹಡಪದ ಅಪ್ಪಣ್ಣನವರ 892ನೇ ಜಯಂತಿಯನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.


ಆನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷೆ ಶ್ವೇತಾ ಅಮರಾವತಿ, 12ನೇ ಶತಮಾನದ ವಚನಕಾರರು, ಬಸವಣ್ಣನವರ ಆಪ್ತ ಒಡನಾಡಿ ಹಾಗೂ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಸಾಮಾಜಿಕ ಸಮಾನತೆ ಮತ್ತು ಕಾಯಕದ ತತ್ವಗಳು ನಮಗೆಲ್ಲ ದಾರಿದೀಪವಾಗಿದೆ ಎಂದರು.

ಗ್ರೇಡ್-2 ತಹಸೀಲ್ದಾರ್‌ ಜೈರಾಮ್, ಸಮಾಜದ ಅಧ್ಯಕ್ಷ ಹಾಲಸಿದ್ದಪ್ಪ ಕಾಯಕದ, ವೀರೇಶ ಕಾಯಕದ, ಕುಮಾರ ಕಾಯಕದ, ಗಣೇಶ ಕಾಯಕದ, ಮಂಜುನಾಥ ಕಾಯಕದ, ನಾಗರಾಜ ಕಟ್ಟಿಮನಿ, ಪ್ರಕಾಶ ಕಾಯಕದ, ಜಯಪ್ಪ ಕಾಯಕದ ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.