ಸಾರಾಂಶ
ಚಿತ್ರದುರ್ಗ ನಗರದ ಕೋಟೆ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವೃತ್ತಿ ದಿಕ್ಸೂಚಿ ಜಿಲ್ಲಾ ಹಂತದ ಮೇಳದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿಯನ್ನು ಬಿಇಓ ನಾಗಭೂಷಣ್ ವೀಕ್ಷಿಸಿದರು.
ವೃತ್ತಿ ದಿಕ್ಸೂಚಿ ಮೇಳದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಅನನ್ಯವಾಧುದು ಎಂದು ಚಿತ್ರದುರ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.ಕರ್ನಾಟಕ ಮಾದರಿ ಶಾಲಾ ಮಾರ್ಗದರ್ಶಿ ಕಾರ್ಯಕ್ರಮದಡಿ ಉದ್ಯಮ್ ಲರ್ನಿಂಗ್ ಫೌಂಡೇಶನ್ ಮತ್ತು ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್ ವತಿಯಿಂದ ನಗರದ ಕೋಟೆ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉದ್ಯಮಶೀಲತೆಯ ಮನಸ್ಥಿತಿಯ ಪಠ್ಯಕ್ರಮ ಮತ್ತು ವೃತ್ತಿ ದಿಕ್ಸೂಚಿ ಜಿಲ್ಲಾ ಹಂತದ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಇಲಾಖೆಯ ಜತೆಗೆ ಸ್ವಯಂ ಸೇವಾ ಸಂಸ್ಥೆಗಳು ಶೈಕ್ಷಣಿಕ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿರುವುದು ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಿಗೆ ವರದಾನವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಹೊಸ ಆವಿಷ್ಕಾರ ಅಗತ್ಯ. ಪ್ರೌಢಶಾಲೆಯ ವಿದ್ಯಾರ್ಥಿಗಳು ಸೃಜನಶೀಲತೆ ಪ್ರದರ್ಶಿಸಿರುವುದು ಸಂತಸದ ವಿಷಯವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಗುಣಗಳನ್ನು ಬೆಳೆಸಬೇಕು ಇದರಿಂದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.ಡಿವೈಪಿಸಿ ವೆಂಕಟೇಶಪ್ಪ ಮಾತನಾಡಿ, ಕೆಎಂಎಸ್ ಪಿಪಿ ವತಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 100 ಶಾಲೆಗಳು ಆಯ್ಕೆಯಾಗಿದ್ದು, ಐಎಲ್.ಪಿ ಸಂಸ್ಥೆಯಿಂದ ಪ್ರತಿ ಶಾಲೆಗೆ ಉತ್ತಮ ಶೌಚಾಲಯ, ಮಕ್ಕಳ ಸ್ನೇಹಿ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ವಿಜ್ಞಾನ ಕಿಟ್ ಸೌಲಭ್ಯ ಒದಗಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಡಿವೈಪಿಸಿ ಹನುಮಂತಪ್ಪ, ಡಯಟ್‍ನ ಹಿರಿಯ ಉಪನ್ಯಾಸಕ ಎಸ್.ಸಿ.ಪ್ರಸಾದ್, ನೋಡಲ್ ಅಧಿಕಾರಿ ಸಿ.ಎಸ್.ಲೀಲಾವತಿ, ಉಪನ್ಯಾಸಕ ಆರ್.ನಾಗರಾಜು, ಎಸ್.ಬಸವರಾಜು, ಮುಖ್ಯ ಶಿಕ್ಷಕಿ ಸೌಮ್ಯಕುಮಾರಿ, ಐಎಲ್ ಪಿ ಪ್ರಾಜೆಕ್ಟ್ ಮ್ಯಾನೇಜರ್ ಮಂಜುನಾಥ್ ಬೆಸ್ತಾರ, ಸತ್ವ ಫೌಂಡೇಶನ್ ಕನ್ಸಲ್ಟೆಂಟ್ ರಕ್ಷಿತ್, ಉದ್ಯಮ್ ಫೌಂಡೇಶನ್‍ನ ಹರೀಶ್, ನಿಶಾ, ವರತಾ, ಕುಮಾರ್ ಇದ್ದರು.