ಸಾರಾಂಶ
ಗದಗ: ಬಸವಣ್ಣನವರು ಸಮಾನತೆ, ಸತ್ಯ, ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ್ದರು, ಅದರಂತೆ ಕಾರ್ಮಿಕರು ಕಾಯಕಕ್ಕೆ ಹೆಚ್ಚಿನ ಒತ್ತು ನೀಡಿ ತನ್ಮೂಲಕ ಆರ್ಥಿಕವಾಗಿ ಸುಧಾರಣೆಗೊಂಡು ಅವರ ಬದುಕು ಸುಂದರವಾಗಿ ರೂಪುಗೊಳ್ಳಲಿ ಎಂದು ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.
ಅವರು ನಗರದ ಲಯನ್ಸ್ ಸಭಾಂಗಣದಲ್ಲಿ ಕಾರ್ಮಿಕ ಕಲ್ಯಾಣ ಸಂಸ್ಥೆ ಏರ್ಪಡಿಸಿದ್ದ ವಿಶ್ವ ಸಂಶೋಧಕರ ದಿನಾಚರಣೆ, ಸಾಧಕ ಕಾರ್ಮಿಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಕಾರ್ಮಿಕ ವರ್ಗದ ಶ್ರಮ ಮೆಚ್ಚಲೇಬೇಕು ಎಂದರಲ್ಲದೆ, ಕಾರ್ಮಿಕರ ಮಕ್ಕಳು ಕಾರ್ಮಿಕರಾಗದೇ ಒಳ್ಳೆಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಪಡೆದು ಉನ್ನತ ಹುದ್ದೆ ಪಡೆಯಲು ಮುಂದಾಗಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಮುಂತಾದವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಹ್ಮದ್‌ಇರ್ಫಾನ್ ಡಂಬಳ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹನುಮಾನಸಿಂಗ್ ಜಮಾದಾರ, ಎಲೆಕ್ಟ್ರೀಕಲ್ ಎಂಜಿನಿಯರ್ ರಾಜಣಸಾ ಪವಾರ ಅವರನ್ನು ಸನ್ಮಾನಿಸಲಾಯಿತು.ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಪತ್ರಕರ್ತ ಹನುಮಾನಸಿಂಗ್ ಜಮಾದಾರ, ಪತ್ರಿಕೋದ್ಯಮದಲ್ಲಿ ನಾನೂ ಒಬ್ಬ ಕಾರ್ಮಿಕನಿದ್ದಂತೆ. ಕಾರ್ಮಿಕ ಸಂಘಟನೆ ನನಗೆ ಸನ್ಮಾನಿಸಿರುವದು ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ರಾಜಣಸಾ ಪವಾರ, ಸಾಧಕ ಕಾರ್ಮಿಕರಾದ ಮಲ್ಲಪ್ಪ ಅಂಗಡಿ, ಶಂಕ್ರಪ್ಪ ಕಮ್ಮಾರ, ಮಲ್ಲಪ್ಪ ಜೀವಣ್ಣವರ, ಮಾರುತಿ ಮೂಲಿಮನಿ, ರಫೀಕ್ ಅಂಗಡಿ, ಗಂಗಾಧರ ಚುಳಕಿ ಅವರಿಗೆ ವಿಶ್ವಕ್ಕೆ ಬೆಳಕು ನೀಡಿದ ಥಾಮಸ್ ಅಲ್ವಾ ಎಡಿಷನ್ ಜನ್ಮದಿನಾಚರಣೆಯ ಅಂಗವಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯ ಮೇಲೆ ಸಂಸ್ಥೆಯ ನಿರ್ದೇಶಕ ಅಪ್ಪುರಾಜ ಭದ್ರಕಾಳಮ್ಮನಮಠ ಉಪಸ್ಥಿತರಿದ್ದರು. ಅಂಬುಜಾ ಪವಾರ ಪ್ರಾರ್ಥಿಸಿದರು. ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು, ಝಡ್.ಡಿ. ಬೇಲೇರಿ ಪರಿಚಯಿಸಿದರು, ನಾಶೀರ್ ಚಿಕೇನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಯುಸೂಫ್ ಬೇಪಾರಿ ವಂದಿಸಿದರು.
ಶಹಬ ಇಲಾಳ, ಖಾಜಾಸಾಬ್ ಗಬ್ಬೂರ, ಸಿ.ಕೆ.ಪಾಟೀಲ, ಚಾಂದಸಾಬ್ ಅಬ್ಬಿಗೇರಿ, ಅಡಿವೆಪ್ಪ, ಎಚ್.ಎಸ್.ಪಾಟೀಲ,ರಾಮು ಬಾಗಲಕೋಟಿ, ಶಬ್ಬೀರ ತಹಸೀಲ್ದಾರ, ಅಶೋಕ ಕ್ಷೀರಸಾಗರ, ಪರಶುರಾಮ ಶಿಂಧೆ, ಜಿಲಾನಿ ಗುಳಗುಂದಿ, ಜಾವೀದ್ ಹರ್ಲಾಪೂರ, ಶಿದ್ಧಿ ಮುಳಗುಂದ, ರಫೀಕ್ ಕರೇಕಾಯಿ, ಸಾಧಿಕ್ ಧಾರವಾಡ, ಜಬೀವುಲ್ಲಾ ಬೋದ್ಲೇಕಾನ್, ಅಲ್ಲಾಭಕ್ಷ ದೊಡ್ಡಮನಿ, ಅಸ್ಪಾಕ್ ಕೊಪ್ಪಳ, ಮೆಹಬೂಬ ಮೋಮಿನ್, ಅನ್ವರ್ ಬಳ್ಳಾರಿ, ವೈ.ಎನ್. ಗೌಡರ, ದುರಗಪ್ಪ ಗುಡಿಮನಿ, ಪ್ರಭಯ್ಯ ಹಿರೇಮಠ, ಮಲ್ಲಿಕಾರ್ಜುನ ಬೆಟಗೇರಿ, ಇಮಾಮಸಾಬ್ ಕದಡಿ, ಮೈನುದ್ದೀನ್ ಗುಜಮಾಗಡಿ, ಮೇಘರಾಜ ತುಳಸಿಮನಿ, ಖಾದರ್ ಬಳ್ಳಾರಿ, ಮುಸ್ತಾಕ ಮುಲ್ಲಾ, ಚಂದ್ರಕಾಂತ ಲಾಡ್ ಮುಂತಾದವರಿದ್ದರು.