ಸಾರಾಂಶ
ಗದುಗಿನ ಆದರ್ಶ ಶಿಕ್ಷಣ ಸಮಿತಿಯು ಹೆಸರಿಗೆ ತಕ್ಕ ಹಾಗೆ ಆದರ್ಶಮಯವಾಗಿ ಕಾರ್ಯಕ್ರಮ
ಗದಗ: ಸಮುದಾಯದ ಸ್ವಚ್ಛತೆಯಲ್ಲಿ ಯುವಕರ ಪಾತ್ರ ಬಹು ದೊಡ್ಡದು ಎಂದು ಹಿಂದುಳಿದ ವರ್ಗ ಹಾಗೂ ಕಲ್ಯಾಣ ಇಲಾಖೆಯ ವಿಸ್ತರಣಾ ಅಧಿಕಾರಿ ಡಾ. ಬಸವರಾಜ ಬಳ್ಳಾರಿ ಹೇಳಿದರು.
ನಗರದ ಎ.ಎಸ್.ಎಸ್ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದಿಂದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗದುಗಿನ ಆದರ್ಶ ಶಿಕ್ಷಣ ಸಮಿತಿಯು ಹೆಸರಿಗೆ ತಕ್ಕಹಾಗೆ ಆದರ್ಶಮಯವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಸಂಸ್ಥೆ ಆದರ್ಶಮಯವಾಗಿದೆ. ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕವು ಅತ್ಯುತಮ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುತ್ತಿದೆ. ದೇಶದಲ್ಲೆಡೆ ಸ್ವಚ್ಛ ಹಿ ಸೇವಾ ಅಭಿಯಾನ ನಡೆಯುತ್ತಿದೆ. ಪ್ರತಿಯೊಬ್ಬ ಯುವಕರು ಇದರ ಬಗ್ಗೆ ಅರಿತುಕೊಂಡು ಈ ಜಾಗೃತಿ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಮಹಾವಿದ್ಯಾಲಯದ ಪ್ರಾ. ಪ್ರೊ.ಕೆ. ಗಿರಿರಾಜಕುಮಾರ ಮಾತನಾಡಿದರು. ಉಪ ಪ್ರಾ.ಡಾ. ವಿ.ಟಿ. ನಾಯ್ಕರ, ಪ್ರೊ.ಬಿ.ಪಿ. ಜೈನರ್, ಮನೋಜ ದಲಬಂಜನ ಹಾಗೂ ಮಹಾವಿದ್ಯಾಲಯದ ಸ್ವಯಂ ಸೇವರು ಇದ್ದರು.