ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಕರ ಪಾತ್ರ ಮುಖ್ಯ

| Published : Jan 14 2025, 01:02 AM IST

ಸಾರಾಂಶ

ಹಿರಿಯೂರು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಕಾರ್ಯಕ್ರಮ ಆಚರಿಸಿ ನಂತರ ಅವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಸ್ವಾಮಿ ವಿವೇಕಾನಂದರ 162ನೇ ಜಯಂತಿ ಕಾರ್ಯಕ್ರಮದಲ್ಲಿ ಯೋಗೀಶ್‌ ಹೇಳಿಕೆಕನ್ನಡಪ್ರಭ ವಾರ್ತೆ ಹಿರಿಯೂರು

ಸದೃಢ ಭಾರತದ ನಿರ್ಮಾಣದಲ್ಲಿ ಯುವಕರ ಪಾಲು ಅತಿ ಮುಖ್ಯವಾದದ್ದು ಎಂದು ಎಬಿವಿಪಿ ಹಿರಿಯ ಕಾರ್ಯಕರ್ತ ಯೋಗೀಶ್ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾಭಿಮಾನವಿಟ್ಟುಕೊಂಡು ದೇಶ ಕಂಡ ಅಪ್ರತಿಮ ನಾಯಕರನ್ನು ಸ್ಮರಿಸುವ ಹಾಗೂ ಅವರ ಆದರ್ಶಗಳನ್ನು ಪಾಲಿಸುವ ಜವಾಬ್ದಾರಿ ನಮ್ಮದಾಗಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಲೇಪಾಕ್ಷಿ ಮಾತನಾಡಿ, ವಿವೇಕಾನಂದರು ಯುವಕರ ಸ್ಫೂರ್ತಿಯಾಗಿದ್ದು ಯುವಕರ ಏಳ್ಗೆಗೆ ಅವರ ಆದರ್ಶಗಳು ಮೂಲ ಹಾದಿಗಳಿದ್ದಂತೆ ಎಂದರು.

ಈ ಸಂದರ್ಭದಲ್ಲಿ ಎಬಿವಿಪಿ ಪ್ರಾಂತ್ಯ ಕಾರ್ಯದರ್ಶಿ ಪ್ರವೀಣ್ ಎಚ್.ಕೆ, ವ್ರತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಚಂದ್ರಕಾಂತ್, ಅಭಿನಂದನ್, ಮುರುಳಿ, ಹರೀಶ್, ನಾಗೇಂದ್ರ, ಜಿಲ್ಲಾ ಸಂಚಾಲಕ್ ಕನಕರಾಜ್, ನಗರಾಧ್ಯಕ್ಷ ರಾಮು, ನಗರ ಕಾರ್ಯದರ್ಶಿ ಬಾಲಾಜಿ, ಸುದೀಪ್, ರಶ್ಮಿ, ಅಂಕಿತಾ, ಶ್ರೀಹರಿ, ಮಂಜುನಾಥ್, ಶ್ರೀನಿವಾಸ್, ಧನುಷ್, ವಿನುತಾ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದ ನಂತರ ನಗರದ ಪ್ರಮುಖ ಬೀದಿಗಳಲ್ಲಿ ತಿರಂಗ ಯಾತ್ರೆ ನಡೆಸಿ ದೇಶಭಕ್ತಿ ಗೀತೆಗಳನ್ನು ಸಾರುತ್ತಾ ಸ್ವಾಮಿ ವಿವೇಕಾನಂದರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.