ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಭಿವೃದ್ಧಿಗೆ ಯಾವಾಗಲೂ ಒಂದು ಕಡೆ ವಿರೋಧ ಇನ್ನೊಂದು ಕಡೆ ಬೆಂಬಲ ಇದ್ದೇ ಇರುತ್ತದೆ. ಇದಾವುದಕ್ಕೂ ಆಡಳಿತಗಾರ ಕಿವಿಗೊಡದೆ ಜನರ ಏಳಿಗೆ ಬಯಸಬೇಕು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.ಪಟ್ಟಣದ ನಂದಿನಿ ಭವನದಲ್ಲಿ ಏರ್ಪಡಿಸಲಾಗಿದ್ದ ತುಮುಲ್ ನಿರ್ದೇಶಕ ಬಿ.ಎಸ್.ಶಿವಪ್ರಕಾಶ್ ರವರ ಅಭಿನಂಧನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುಣಾವಣೆಯಲ್ಲಿ ಗೆದ್ದಾಗ ಮೊದಲು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ವ್ಯಕ್ತಿಗಳ ಕೆಲಸಕ್ಕೆ ಹೆಚ್ಚು ಒತ್ತು ನೀಡಿದರೆ ಸಾಮಾಜಿಕ ಹಿತಾಸಕ್ತಿಗೆ ಭಂಗ ಉಂಟಾಗುತ್ತದೆ. ಡಿಂಕನಹಳ್ಳಿ ಪ್ರದೇಶದ 40ಎಕರೆ ಜಾಗದಲ್ಲಿ ಸುಮಾರು 400ಕ್ಕೂ ಹೆಚ್ಚಿನ ವೆಚ್ಚದಲ್ಲಿ 400ಕೆವಿ ಸಾಮರ್ಥ್ಯವುಳ್ಳ ಬೃಹತ್ ವಿದ್ಯುತ್ ಘಟಕವನ್ನ ನಿರ್ಮಿಸಲು ಚಿಂತನೆ ನಡೆದಿತ್ತು, ಅದರ ಜೊತೆಗೆ 220ಕೆವಿಯನ್ನು ಅಳವಡಿಸಲಾಗುತ್ತಿತ್ತು. 37 ಎಕರೆಯನ್ನು ರೈತರು ತಮ್ಮ ಜಮೀನನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ಬಿಟ್ಟುಕೊಡಲು ಒಪ್ಪಿದ್ದರೂ ಆದರೆ ಒಂದಿಬ್ಬರು ತರ್ಲೆ ಮಾಡಿ ಕೋರ್ಟಿಗೆ ಹೋಗಿದ್ದಾರೆ. ಸದ್ಯ ಆ ಕೆಲಸ ನೆನಗುದಿಗೆ ಬಿದ್ದಿದೆ. ಈ ಘಟಕ ಆಗಿದ್ದರೆ 5 ಜಿಲ್ಲೆಗೆ ಉಪಯೋಗವಾಗುತ್ತಿತ್ತು. ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗುತ್ತಿತ್ತು ಎಂದರು.ನಾನು ಯಾರನ್ನೂ ದ್ವೇಶಮಾಡುವುದಿಲ್ಲ ತುಮುಲ್ ಕ್ಷೇತ್ರದಲ್ಲಿ ಹಳೇಮನೆ ಶಿವನಂಜಪ್ಪ ಉತ್ತಮ ಕೆಲಸಮಾಡಿದ್ದು ನಂದಿನಿ ಭವನದ ಕಟ್ಟಡವನ್ನು ಸ್ವತಃ ತಾವೇ ಮುಂದೆ ನಿಂತು ಕಟ್ಟಿಸಿದ್ದಾರೆ. ತಾಂತ್ರಿಕ ಲೋಪದೋಷದಿಂದ ತುಮುಲ್ ಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಶಿವಪ್ರಕಾಶ್ ನೀತಿ ನಿಯಮದ ಅನುಸಾರವಾಗಿ ಅರ್ಹತೆ ಹೊದಿದ್ದರಿಂದ ಚುಣಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಹಾಲು ಉತ್ಪಾದಕರುˌ ಮತ್ತು ಸಂಘದ ಕಾರ್ಯದರ್ಶಿ ಮತ್ತು ಸಿಬ್ಬಂದಿಯವರಿಗೆ ಏನಾದರು ಸಮಸ್ಯೆಗಳು ಬಂದಾಗ ನೇರವಾಗಿ ನನ್ನ ಬಳಿ ಬಂದು ಮುಕ್ತವಾಗಿ ಮಾತನಾಡಿ ಅದಕ್ಕೆ ಸ್ಪಂದಿಸಿ ಪರಿಹಾರ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ.ಎಸ್.ಬುಳ್ಳೇನಹಳ್ಳಿ ಶಿವಪ್ರಕಾಶ್ ಮಾತನಾಡಿ ತುಮುಲ್ ಮಾಜಿ ಅಧ್ಯಕ್ಷ ಶಿವನಂಜಪ್ಪರವರ ಮೇಲೆ ನನಗೆ ಅಪಾರವಾದ ಗೌರವವಿದೆ. ಈ ಸಮಾರಂಭಕ್ಕೆ ಅವರನ್ನೂ ಆಹ್ವಾನಿಸಿ ಎಂದು ಅಧಿಕಾರಿಗಳಿಗೆ ಹೇಳಲಾಗಿತ್ತು ಎಂದರು. ಕೆಎಂಎಫ್ ಛೇರ್ಮನ್ ಆಗಿ ಕೆಲಸಮಾಡಿದ ಜೆಸಿಎಂ ಶಾಸಕರಾದ ನಂತರ ಒಕ್ಕೂಟದ ಅಧಿಕಾರಕ್ಕೆ ಆಸೆ ಪಡದೆ ಕಾರ್ಯಕರ್ತರನ್ನು ಬೆಳೆಸಲು ತುಮುಲ್ ಗೆ ಶ್ರಮಹಾಕಿ ಕಳುಹಿಸುತ್ತಿದ್ದಾರೆ. ನಿಜಕ್ಕೂ ಅವರಿಗೆ ನಮ್ಮ ಅವಶ್ಯಕತೆ ಇಲ್ಲದಿದ್ದರು ಕ್ಷೇತ್ರದ ಅಭಿವೃದ್ಧಿಗೆ ಅವರ ಅವಶ್ಯಕತೆ ನಮಗೆಲ್ಲರಿಗೂ ಇದೆ. ಹಾಗಾಗಿ ಕ್ಷೇತ್ರದ ಜನತೆ ಮುಂಬರುವ ಚುಣಾವಣೆಯಲ್ಲಿ ಗೆಲ್ಲಿಸಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಖಡಿತವಾಗಿಯೂ ರಾಜ್ಯದ ಸಿಎಂ ಆಗುತ್ತಾರೆ ಎಂದರು.
ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಟಿ.ಶಂಕರಲಿಂಗಯ್ಯˌ ಮಾಜಿ ಎಪಿಎಂಸಿ ಅಧ್ಯಕ್ಷ ಅಗಸರಹಳ್ಳಿ ಶಿವರಾಜ್ˌ ಕೃಷಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮನಗೊಂಡನಹಳ್ಳಿ ಗಂಗಾಧರಯ್ಯ ಇತರರಿದ್ದರು.