ಪ.ಪಂ. ಆಡಳಿತ ಕಾಂಗ್ರೆಸ್ ತೆಕ್ಕೆಗೆ: ನೂತನ ಅಧ್ಯಕ್ಷರಾಗಿ ಕೆ.ವೆಂಕಟೇಶ್ ಆಯ್ಕೆ

| Published : Mar 02 2025, 01:20 AM IST

ಪ.ಪಂ. ಆಡಳಿತ ಕಾಂಗ್ರೆಸ್ ತೆಕ್ಕೆಗೆ: ನೂತನ ಅಧ್ಯಕ್ಷರಾಗಿ ಕೆ.ವೆಂಕಟೇಶ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆ, ಪಟ್ಟಣ ಪಂಚಾಯ್ತಿಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಗೆ ಬಿಜೆಪಿಯಿಂದ ಸದಸ್ಯೆ ಆಶಾ ಮೋಹನ್, ಕಾಂಗ್ರೆಸ್‌ನಿಂದ ಕೆ.ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 7 ಮತ ಪಡೆಯುವ ಮೂಲಕ ಕಾಂಗ್ರೆಸ್ ಸದಸ್ಯ ಕೆ.ವೆಂಕಟೇಶ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ರಾಜಶೇಖರ್ ಮೂರ್ತಿ ಕರ್ತವ್ಯ ನಿರ್ವಹಿಸಿದರು.

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಪಟ್ಟನ ಪಂಚಾಯ್ತಿಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಗೆ ಬಿಜೆಪಿಯಿಂದ ಸದಸ್ಯೆ ಆಶಾ ಮೋಹನ್, ಕಾಂಗ್ರೆಸ್‌ನಿಂದ ಕೆ.ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 7 ಮತ ಪಡೆಯುವ ಮೂಲಕ ಕಾಂಗ್ರೆಸ್ ಸದಸ್ಯ ಕೆ.ವೆಂಕಟೇಶ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ರಾಜಶೇಖರ್ ಮೂರ್ತಿ ಕರ್ತವ್ಯ ನಿರ್ವಹಿಸಿದರು.11 ಮಂದಿ ಸದಸ್ಯ ಬಲವಿರುವ ಪ.ಪಂನಲ್ಲಿ ಕಾಂಗ್ರೆಸ್‌ಗೆ 4 ಸ್ಥಾನವಿತ್ತು. ಶಾಸಕಿ ನಯನಾ ಮೋಟಮ್ಮ ಪ.ಪಂ. ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಳ್ಳಲು ಪ್ಲಾನ್‌ ರೂಪಿಸಿದರು. ಅದರಂತೆ ಕಳೆದ 5 ತಿಂಗಳ ಹಿಂದೆ ಪ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಧರ್ಮಪಾಲ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಲು ಮುಂದಾದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಸದಸ್ಯೆ ಗೀತಾ ರಂಜನ್ ಅಜಿತ್ ಕುಮಾರ್ 5 ತಿಂಗಳ ಅವಧಿಗೆ ಪ.ಪಂ. ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಆಂತರಿಕ ಒಪ್ಪಂದದಂತೆ ಗೀತಾ ಅವರು ಫೆ.3ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಾರಿಯೂ ಧರ್ಮಪಾಲ್ ಅವರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದು, ಶಾಸಕಿ ನಯನಾ ಮೋಟಮ್ಮ ಸೇರಿ ಪ.ಪಂ.ನಲ್ಲಿ ಕಾಂಗ್ರೆಸ್‌ಗೆ 7 ಮತದ ಬಲವಿತ್ತು. ಬಿಜೆಪಿಯಲ್ಲಿ 5 ಮಂದಿ ಸದಸ್ಯರಿದ್ದು, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ವಿಧಾನಪರಿಷತ್‌ನ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಸೇರಿ 7 ಮತವಿತ್ತು. ಆದರೆ, ಪ.ಪಂ.ಕಾಂಗ್ರೆಸ್ ಸದಸ್ಯ ಕೆ.ವೆಂಕಟೇಶ್ ಮತ್ತು ಬಿಜೆಪಿ ಸದಸ್ಯೆ ಕಮಲಮ್ಮ ಅವರ ನಡುವೆ ನಡೆದ ಮೊಬೈಲ್ ಸಂಭಾಷಣೆ ವೈರಲ್ ಆದ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಅಲ್ಲದೇ ಬಿಜೆಪಿ ಸದಸ್ಯ ಪಿ.ಜಿ.ಅನುಕುಮಾರ್ ಚುನಾವಣೆಗೆ ಗೈರು ಹಾಜರಾಗಿದ್ದರು.

ಬಿಜೆಪಿ ಆಂತರಿಕ ಕಿತ್ತಾಟದಿಂದ ಪ.ಪಂ. ಅಧಿಕಾರವನ್ನು ಮೊತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಳ್ಳುವಂತಾಯಿತು. ಚುನಾವಣೆ ಬಳಿಕ ನಡೆದ ಅಭಿನಂದನೆ ಸಮಾರಂಭದಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಕಾಂಗ್ರೆಸ್ ನಿರಂತರ ವಾಗಿ ಪ.ಪಂ. ಆಡಳಿತ ಚುಕ್ಕಾಣಿ ಹಿಡಿಯುತ್ತಿದೆ. ಇದೀಗ ಅನುಭವಿ ಹಿರಿಯ ಸದಸ್ಯ ಕೆ.ವೆಂಕಟೇಶ್ ಅಧ್ಯಕ್ಷ ರಾಗಿದ್ದು, ಪ.ಪಂ ನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಸಲಹೆ ನೀಡಿದರು.

ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಪ.ಪಂ. ಉಪಾಧ್ಯಕ್ಷ ರಮೇಶ್, ಸದಸ್ಯರಾದ ಗೀತಾ ರಂಜನ್ ಅಜಿತ್ ಕುಮಾರ್, ಹಂಜಾ, ಕುರ್ಷಿದ್‌ಬಾನು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್. ಜಯರಾಮ್ ಸೇರಿದಂತೆ ಕಾಂಗ್ರೆಸ್‌ನ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಪೋಟೋ ಫೈಲ್‌ ನೇಮ್‌ 1 ಕೆಸಿಕೆಎಂ 5ಮೂಡಿಗೆರೆ ಪ.ಪಂ. ನೂತನ ಅಧ್ಯಕ್ಷರಾಗಿ ಕೆ.ವೆಂಕಟೇಶ್ ಆಯ್ಕೆಯಾದರು. ಶಾಸಕಿ ನಯನಾ ಮೋಟಮ್ಮ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಡಾ. ಅಂಶುಮಂತ್‌, ಜಯರಾಮ್‌ ಇದ್ದರು.------------------------------