500 ಮಹಾರ್ ಸೈನಿಕರನ್ನು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ

ಕಾರಟಗಿ: ಭಾರತದಲ್ಲಿ 207 ವರ್ಷಗಳ ಹಿಂದೆ ನಡೆದ ಭೀಮಾ ಕೋರೆಗಾಂವ್ ಹೋರಾಟ ಇತಿಹಾಸವನ್ನು ಸೃಷ್ಟಿಸಿದೆ, ಮಹಾರ್ ಯೋಧರ ತ್ಯಾಗ ವ್ಯರ್ಥವಾಗಲು ಬಿಡಬಾರದು ಎಂದು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ನಾಯಕ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಬಳಗದಿಂದ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಮಾತನಾಡಿದರು.

500 ಮಹಾರ್ ಸೈನಿಕರನ್ನು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು-ಕೀಳುಗಳ ವಿರುದ್ಧ ನಿಂತು ಮಾನವೀಯ ವೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟವಾಗಿದೆ, ಅವರ ಸಮಾನತೆಯ ಕನಸು ನನಸಾಗಿಸುವುದು ನಮ್ಮ ಗುರಿಯಾಗಬೇಕು ಎಂದರು.

ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ, ಉಪನ್ಯಾಸಕರಾದ ನಾಗರಾಜ್ ಹುಡೇದ್, ಹನುಮಂತಪ್ಪ ಚಂದಲಾಪೂರ, ರೈತ ಸಂಘದ ಮರಿಯಪ್ಪ ಸಾಲೋಣಿ, ಎಸ್.ಡಿ.ಪಿ.ಐ. ಅಧ್ಯಕ್ಷ ಅಜ್ಮೀರ್ ಸಿಂಗನಾಳ, ಖಾಜಾ ಹುಸೇನ್ ಮುಲ್ಲಾ, ಶಿವಕುಮಾರ ಬೂದಗುಂಪಾ ಮಾತನಾಡಿದರು.

ಈ ವೇಳೆ ಪ್ರಗತಿಪರ ಹೋರಾಟಗಾರ ಸಿರಾಜ್ ಹುಸೇನ್ ಸಿದ್ದಾಪುರ, ದಲಿತ ಸಂಘಟನೆಯ ಲಕ್ಷ್ಮಣ ಮ್ಯಾಗಡಮನಿ, ದೊಡ್ಡ ಗಾಳೇಶ ಕೆಂಗೇರಿ. ದ್ಯಾವಣ್ಣ ಗುಂಡೂರು, ತಿಮ್ಮಣ್ಣ ಬೂದುಗುಂಪ, ತಿಮ್ಮಣ್ಣ ಗುಂಡೂರು, ಮೌನೇಶ ಭಜರಂಗಿ, ಬಸವರಾಜ್ ಬಸವಣ್ಣ ಕ್ಯಾಂಪ್, ವೆಂಕೋಬ ಚಲುವಾದಿ, ಅಮ್ರುಲ್ ಹುಸೇನ್, ಶರಣಪ್ಪ ಕಾಯಿಗಡ್ಡಿ, ಅಲಿ ಹುಸೇನ್, ಅಂಬಣ್ಣ ಬುಡಗಜಂಗಮ, ಶಿವು ಮಾಸ್, ಶಿವಶಂಕರ ಹಾಸ್ಟೆಲ್, ಅನಂತ್ ಜೂರಟಗಿ, ವೆಂಕಟೇಶ್ ಬೂದಿ, ತಿಮ್ಮಣ್ಣ ನಾಯಕ, ನಾಗರಾಜ್ ಮೈನಳ್ಳಿ, ಡಾ. ರಾಮಣ್ಣ ಚಲುವಾದಿ, ವಿರೂಪಾಕ್ಷಿ ದೇಶನೂರು, ಶ್ಯಾಮಸುಂದರ್ ಎಂಜಿನಿ ಸೇರಿದಂತೆ ಇನ್ನಿತರರು ಇದ್ದರು.

ಶಿವರಾಜಕುಮಾರ ಬೆನ್ನೂರು ಮತ್ತು ಮಹಿಬೂಬ್ ಕಿಲ್ಲೇದಾರ್ ಕಾರ್ಯಕ್ರಮ ನಿರ್ವಹಿಸಿದರು.