ಅನೇಕ ಮಹನೀಯರ ತ್ಯಾಗ, ಬಲಿದಾನ ಸ್ಮರಣೀಯ: ಆನಂದ್‌

| Published : Aug 16 2024, 12:49 AM IST

ಸಾರಾಂಶ

ಕಡೂರು, ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಪಟೇಲ್, ಗೋಖಲೆ ಸೇರಿದಂತೆ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನ ಸ್ಮರಣೀಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡೂರಿನ ಡಾ.ಬಿ.ಆರ್.ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 78 ನೇ ಸ್ವಾತಂತ್ರೋತ್ಸವ

ಕನ್ನಡ ಪ್ರಭ ವಾರ್ತೆ, ಕಡೂರು

ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಪಟೇಲ್, ಗೋಖಲೆ ಸೇರಿದಂತೆ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನ ಸ್ಮರಣೀಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡೂರಿನ ಡಾ.ಬಿ.ಆರ್.ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 78 ನೇ ಸ್ವಾತಂತ್ರೋತ್ಸವದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ಪಡೆದ 78 ವರ್ಷಗಳ ಅವಧಿಯಲ್ಲಿ ಅಳಿದ ಸರ್ಕಾರಗಳು ಭಾರತದ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿರುವ ಕಾರಣ ಇಂದು ಭಾರತ ಪ್ರಪಂಚದ ಶಕ್ತಿಶಾಲಿ ರಾಷ್ಟ್ರಗಳ ಜೊತೆ ಗುರುತಿಸಿಕೊಂಡಿದೆ. ಸಾಮಾಜಿಕ, ಶಿಕ್ಷಣ ಮತ್ತು ಆರೋಗ್ಯ ಮಾಹಿತಿ ತಂತ್ರಜ್ಞಾನ ಕೃಷಿ ಕ್ಷೇತ್ರಗಳಲ್ಲೂ ಕೂಡ ಮಂಚೂಣಿಯಲ್ಲಿದೆ. ಈ ದೇಶದ ಸಂರಕ್ಷಣೆ ಮಾಡ ಬೇಕಿರುವುದು ನಮ್ಮೆ ಲ್ಲರ ಕರ್ತವ್ಯ ಎಂದರು.ಸ್ವಾತಂತ್ರದ ಹೋರಾಟದಲ್ಲಿ ಕಡೂರು ತಾಲೂಕು ಕೂಡ ಮುಂಚೂಣಿಯಲ್ಲಿ ಎಂಬುದಕ್ಕೆ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ತಾಲೂಕಿನ ನಿಡಘಟ್ಟ ಗ್ರಾಮಕ್ಕೆ ಮತ್ತು ಸುಭಾಷ್ ಚಂದ್ರಬೋಸ್ ಕಡೂರಿಗೆ ಆಗಮಿಸಿ ತಮ್ಮ ಹೆಬ್ಬೆಟ್ಟಿನಿಂದ ರಕ್ತ ತೆಗೆದು ಸ್ವಾತಂತ್ರದ ಹೋರಾಟಕ್ಕೆ ಕರೆ ನೀಡಿದ್ದರು. ಅಲ್ಲದೆ ಗಾಂಧೀಜಿ ನಿಧನದ ಸಂದರ್ಭದಲ್ಲಿ ನಿಡಘಟ್ಟ ಗ್ರಾಮದಲ್ಲಿ ಮೊದಲ ದೇವಸ್ಥಾನ ನಿರ್ಮಾಣ ಮಾಡಿದ್ದರು ಎಂದರು. ಕರ್ನಾಟಕ ಕೂಡ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು ಶೇ. 80 ರಷ್ಟು ಸಾಕ್ಷರತೆ ಸಾಧಿಸಿದೆ. ನಮ್ಮ ಕಾಂಗ್ರೆಸ್ ಸರ್ಕಾರದಿಂದ ರಾಜ್ಯವನ್ನು ಬಡತನದಿಂದ ಜನರಿಗೆ ಸ್ವಾತಂತ್ರ್ಯ ಸಿಗುವಂತೆ ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಬಡವರಿಗೆ ನಿಜವಾದ ಸ್ವಾತಂತ್ರ್ಯ ಸಿಗಬೇಕೆಂಬ ನಿಟ್ಟಲ್ಲಿ ಸುಮಾರು 65,000 ಕೋಟಿ ರು.ಗಳನ್ನು ವಿವಿಧ ಗ್ಯಾರೆಂಟಿಗಳ ಮೂಲಕ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ನಾಗರಿಕ ಸನ್ಮಾನ ಸ್ವೀಕರಿಸಬೇಕಾದ ಐಎಫ್ಎಸ್ ಮಾಡಿದ ಕಾವ್ಯಶ್ರೀ ಈ ತಾಲೂಕಿನ ಹೆಣ್ಣುಮಗಳಾಗಿದ್ದು ಅವಳ ಸಾಧನೆ ಮತ್ತು ದೇಶಾಭಿಮಾನ ನಿಮ್ಮಲ್ಲೂ ಮೂಡಲಿ ಎಂದು ಮಕ್ಕಳಿಗೆ ಕರೆ ನೀಡಿದರು. ದ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಸಿ ಎಸ್ ಪೂರ್ಣಿಮಾ ಮಾತನಾಡಿ ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕರ ತ್ಯಾಗ, ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ. ನಮ್ಮ ರೈತರ, ಸೈನಿಕರ ವಿಜ್ಞಾನಿಗಳ ಪರಿಶ್ರಮದಿಂದ ರಾಷ್ಟ್ರ ಪ್ರಗತಿಯತ್ತ ಸಾಗಿದೆ. ಶಿಕ್ಷಣ, ಆರೋಗ್ಯ ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಿಗುವಂತೆ ಮಾಡುವಲ್ಲಿ ಭಾರತ ಪ್ರಗತಿಯತ್ತ ಸಾಗಿದೆ. ಜಾತಿ, ಮತ, ಮೀರಿ ದೇಶ ಅಭಿವೃದ್ಧಿಯತ್ತ ಸಾಗುವಂತೆ ಪ್ರತಿಯೊಬ್ಬರೂ ಕೈ ಜೋಡಿಸಿ ನಮ್ಮ ದೇಶದ ಶಕ್ತಿ ಗೌರವ ಕಾಪಾಡಬೇಕು ಎಂದು ಕರೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಆ. 15 ಸ್ವಾತಂತ್ರ್ಯದ ಅಭಿಮಾನದ ದಿನ. ಮಹಾತ್ಮ ಗಾಂಧೀಜಿ ಹೇಳಿದಂತೆ ಅಹಿಂಸಾ ಹೋರಾಟದಿಂದ ಸ್ವಾತಂತ್ರ ಪಡೆಯೋಣ ಎಂಬ ಸಂದೇಶದಿಂದ ಭಾರತ ದಾಸ್ಯಮುಕ್ತವಾಯಿತು. ಅಂತ ನಾಯಕನನ್ನು ಸ್ಮರಿಸುವ ಮೂಲಕ ಗೌರವಿಸುವ ದಿನ ಇದಾಗಿದೆ. ಎಲ್ಲೆಡೆ ಉತ್ತಮ ಮಳೆಯಿಂದ ರೈತರಲ್ಲಿ ಹರ್ಷ ಮೂಡಿದೆ. ಶಾಸಕ ಆನಂದ್ ರವರ ಜೊತೆ ಅಧಿಕಾರಿಗಳು ನಾವು ಸೇರಿ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ಮನವಿ ಮಾಡಿದರು. ತಾಲೂಕು ಪಂಚಾಯಿತಿ ಇ.ಒ ಸಿಆರ್ ಪ್ರವೀಣ್, ಪೊಲೀಸ್ ವೃತ್ತ ನಿರೀಕ್ಷಕ ದುರ್ಗಪ್ಪ, ಬಿಇಒ ಸಿದ್ದರಾಜು ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್. ಬಸವರಾಜನಾಯ್ಕ, ಮುಖಂಡರಾದ ಆಸಂದಿ ಕಲ್ಲೇಶ್, ಪುರಸಭೆ ಸದಸ್ಯಈರಳ್ಳಿ ರಮೇಶ್,ಜಿ. ಅಶೋಕ್ , ಎನ್.ಬಶೀರ್ ಸಾಬ್, ರವಿಕುಮಾರ್, ಲಿಂಗರಾಜ್ ಮತ್ತಿತರರು ಇದ್ದರು.

-- ಬಾಕ್ಸ್‌ ಸುದ್ದಿಗೆ--

ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವೈದ್ಯಕೀಯ ಕ್ಷೇತ್ರದಿಂದ ಡಾ.ಉಮೇಶ್ ರಾವ್, ಪತ್ರಿಕಾ ಕ್ಷೇತ್ರದಿಂದ ಕೆ.ಎನ್.ಕೃಷ್ಣಮೂರ್ತಿ (ಕನ್ನಡಪ್ರಭ), ಕೃಷಿ ಕ್ಷೇತ್ರದಿಂದ ಶ್ರೀಮತಿ ಗೀತಾ, ಮಾದರಿ ಕೃಷಿಕ, ನಂದೀಶ್, ಪೌರ ಕಾರ್ಮಿಕರು ಗಂಗಣ್ಣನವರು ಸೇರಿದಂತೆ ವಿವಿಧ ಸಾಧಕರಿಗೆ ನಾಗರೀಕ ಸನ್ಮಾನ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.15ಕೆಕೆಡಿಯು1.ಕಡೂರಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ 78ನೇ ಸ್ವಾತಂತ್ರೋತ್ಸವದಲ್ಲಿ ವಿವಿಧ ಸಾಧಕರಿಗೆ ನಾಗರೀಕ ಸನ್ಮಾನ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.