ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಜೋಳಿಗೆ ಹಿಡಿದು ಮಠವನ್ನು ಕಟ್ಟಿದ್ದಾರೆ. ಸಣ್ಣದೊಂದು ಮಠವನ್ನು ಮಹಾವೃಕ್ಷವಾಗಿ ಬೆಳೆಸಿದ್ದಾರೆ. ರೈತರ ಮಕ್ಕಳ ಜ್ಞಾನಾರ್ಜನೆಗೆ ದೊಡ್ಡ ಕೊಡುಗೆ ನೀಡಿದ್ದು, ತ್ರಿವಿಧ ದಾಸೋಹದ ಮೂಲಕ ಚುಂಚನಗಿರಿ ಮಠ ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರುನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಶ್ರೀಮಠ ಅಭೂತಪೂರ್ವ ಸಾಧನೆ ಮಾಡಿದೆ. ಇಡೀ ದೇಶವ್ಯಾಪಿ ಚುಂಚನಗಿರಿ ಮಠಕ್ಕೆ ಒಳ್ಳೆಯ ಹೆಸರಿದೆ. ಬಡ ಮಕ್ಕಳಿಗೆ ವಿದ್ಯಾದಾನ ಮಾಡಿರುವ ಕೀರ್ತಿ ಶ್ರೀಗಳಿಗೆ ಇದೆ ಎಂದು ತಿಳಿಸಿದರು. ಶ್ರೀ ಬಾಲಗಂಗಾಧರರು ಜೀವಿತ ಅವಧಿಯುದ್ದಕ್ಕೂ ಅವಿತರ ಶ್ರಮ, ಸಾಧನೆ ಮೂಲಕ ಅಜರಾಮರರಾಗಿದ್ದಾರೆ. ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ, ಸಸ್ಯಕ್ಷೇತ್ರದಲ್ಲಿ ಮೌನಕ್ರಾಂತಿ ಮಾಡಿದರು. ಶ್ರೀಮಠವನ್ನು ವಿಶ್ವವ್ಯಾಪಿಗೊಳಿಸಿ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಬಣ್ಣಿಸಿದರು.ಜೋಳಿಗೆ ಹಿಡಿದು ಮಠ ಕಟ್ಟಿದ ಶ್ರೀಗಳು: ಕುಮಾರಸ್ವಾಮಿ
ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಶ್ರೀಮಠ ಅಭೂತಪೂರ್ವ ಸಾಧನೆ ಮಾಡಿದೆ. ಇಡೀ ದೇಶವ್ಯಾಪಿ ಚುಂಚನಗಿರಿ ಮಠಕ್ಕೆ ಒಳ್ಳೆಯ ಹೆಸರಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
