ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಹನೂರು ತಾಲೂಕಿನ ಬಂಡಳ್ಳಿ ಗ್ರಾಮಕ್ಕೆ ಮಂಜೂರಾಗಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವನ್ನು ಬಂಡಳ್ಳಿಯಲ್ಲಯೇ ಪ್ರಾರಂಭಿಸಬೇಕು ಹನೂರಿಗೆ ಸ್ಥಳಾಂತರಗೊಳಿಸಬಾರದು ಎಂದು ಆದಿವಾಸಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹನೂರು ತಾಲೂಕಿನ ಬಂಡಳ್ಳಿ, ಮಣಗಳ್ಳಿ, ಶಾಗ್ಯ, ತೆಳ್ಳನೂರು, ಕೊತ್ತನೂರು ಗ್ರಾಪಂಗಳ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಂಡಳ್ಳಿ ಗ್ರಾಮದಲ್ಲಿ ₹೪.೫ ಕೋಟಿ ವೆಚ್ಚದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರಾರಂಭಿಸಲು ಅನುಮೋದನೆ ನೀಡಲಾಗಿದ್ದು ಇದರಿಂದ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ನಾಯಕ ಸಮಾಜ ಹಾಗೂ ಕಾಡಂಚಿನ ಆದಿವಾಸಿ ಜನಾಂಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ ಎಂದರು.ಅಧಿಕಾರಿಗಳ ತಪ್ಪಿನಿಂದ ಈಗ ಕೇವಲ ೧೬ ವಿದ್ಯಾರ್ಥಿಗಳು ಇರುವುದರಿಂದ ಬಂಡಳ್ಳಿ ಗ್ರಾಮಕ್ಕೆ ವಸತಿ ನಿಲಯ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದು, ಹನೂರು ಪಟ್ಟಣಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದರು. ಬಂಡಳ್ಳಿ ಗ್ರಾಮದಲ್ಲಿ ಹೆಂಚಿನ ಮನೆಯಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿಲ್ಲ. ಬಂಡಳ್ಳಿ ಪ್ರೌಢಶಾಲೆಯಲ್ಲಿ ೧೫೩ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಗ್ರಾಮದಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಿದರೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಾಲಾಗುತ್ತಾರೆ ಎಂದರು.ಯಾವುದೇ ಕಾರಣಕ್ಕೂ ಬಂಡಳ್ಳಿ ಗ್ರಾಮಕ್ಕೆ ಮಂಜೂರಾಗಿರುವ ವಿದ್ಯಾರ್ಥಿ ನಿಲಯವನ್ನು ಹನೂರಿಗೆ ಸ್ಥಳಾಂತರಿಸದೇ ಬಂಡಳ್ಳಿಯಲ್ಲಿ ಪ್ರಾರಂಭಿಸಬೇಕು, ಈಗಾಗಲೇ ಜಿಲ್ಲಾಧಿಕಾರಿ, ಎಸಿ ಅವರಿಗೆ ಮನವಿ ಸಲ್ಲಿಸಿದ್ದೇವೆ, ಒಂದು ವೇಳೆ ಸ್ಥಳಾಂತರಿಸಿದರೆ ಆದಿವಾಸಿ ಹಿತಾರಕ್ಷಣಾ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್, ಮಹದೇವ, ಚಿಕ್ಕಮಾದು ಮಹದೇವ್ ಇದ್ದರು.