ಸಾರಾಂಶ
ಜಮಖಂಡಿ ತಾಲೂಕಿನಲ್ಲಿ ಸೋಮುವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಜಂಬಗಿ ಬಿ.ಕೆ.ಗ್ರಾಮದ ಸರ್ಕಾರಿ ಪೌಢಶಾಲೆಯ (ಆರ್‌ಎಂಎಸ್‌ಎ) ತಗಡಿನ ಮೇಲ್ಛಾವಣಿ ಹಾರಿಹೋಗಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನಲ್ಲಿ ಸೋಮುವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಜಂಬಗಿ ಬಿ.ಕೆ.ಗ್ರಾಮದ ಸರ್ಕಾರಿ ಪೌಢಶಾಲೆಯ (ಆರ್‌ಎಂಎಸ್‌ಎ) ತಗಡಿನ ಮೇಲ್ಛಾವಣಿ ಹಾರಿಹೋಗಿದೆ. ಎರಡು ಕೊಠಡಿಗಳ ತಗಡಿನ ಶೆಡ್‌ಗಳು ಹಾನಿಯಾಗಿವೆ.ಈ ಶಾಲೆಯಲ್ಲಿ ಒಟ್ಟು 5 ಕೊಠಡಿಗಳಿದ್ದು, ಅದರಲ್ಲಿ 4 ತಡಗಿನ ಮೇಲ್ಛಾವಣಿ ಹೊಂದಿವೆ. ಈ ಹಿಂದೆ ಏ.7ರಂದು ಬಿರುಗಾಳಿ ಮಳೆಗೆ ಮೇಲ್ಛಾವಣಿ ತಗಡುಗಳು ಹಾರಿಹೋಗಿದ್ದವು. ಸ್ಥಳೀಯರ ನೆರವಿನಿಂದ ದುರಸ್ತಿಗೊಳಿಸಲಾಗಿತ್ತು. ಪುನಃ ಘಟನೆ ಮರುಕಳಿಸಿರುವುದು ವಿದ್ಯಾರ್ಥಿಗಳ ಆತಂಕ ಹೆಚ್ಚಿಸಿದೆ.