ಸಾರಾಂಶ
ವಸ್ತು ಪ್ರದರ್ಶನ ಆವರಣದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ
ಕನ್ನಡಪ್ರಭ ವಾರ್ತೆ ಮೈಸೂರು
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿರುವ ನಾಡಕುಸ್ತಿ ಪಂದ್ಯಾವಳಿಯು ಎರಡನೇ ದಿನವಾದ ಶುಕ್ರವಾರ ರೋಚಕ ಪಂದ್ಯಗಳಿಗೆ ಸಾಕ್ಷಿಯಾಯಿತು.ವಸ್ತು ಪ್ರದರ್ಶನ ಆವರಣದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ಈ ಕುಸ್ತಿ ಪಂದ್ಯಾವಳಿಯಲ್ಲಿ ಸಿದ್ದು ಮತ್ತು ದೀಕ್ಷಿತ್ ನಡುವಿನ ಪಂದ್ಯಾವಳಿಯು ವಿಶೇಷ ಗಮನ ಸೆಳೆಯಿತು. 15 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಸಿದ್ದು ಪರಾಭವಗೊಂಡು, ದೀಕ್ಷಿತ್ ಗೆಲುವು ಸಾಧಿಸಿದರು. ಆರಂಭದಿಂದಲೂ ಇಬ್ಬರೂ ಸಮಬಲ ಸಾಧಿಸುತ್ತ ಬಂದರಾದರೂ ಕೊನೆಯ ಗಳಿಗೆಯಲ್ಲಿ ದೀಕ್ಷಿತ್‌ಕೈ ಮೇಲಾಗತೊಡಗಿತು.
ದರ್ಶನ್‌ಮತ್ತು ಎಚ್.ಸಿ. ಸೂರಜ್ ನಡುವಿನ ಪಂದ್ಯಾವಳಿಯಲ್ಲಿ ಸೂರಜ್‌ದರ್ಶನ್‌ಅವರನ್ನು ಮಣಿಸಿದರು. ಕುತೂಹಲ ಕೆರಳಿಸಿದ್ದ ಈ ಪಂದ್ಯಾವಳಿಯಲ್ಲಿ ಅಂತಿಮವಾಗಿ ಸೂರಜ್ ಜಯಗಳಿಸಿದರು.ಕೌಸ್ತುಬ್, ಮೊಹಮ್ಮದ್ ನೌಮಾದ್ ಅವರನ್ನು ಕೇವಲ ಒಂದೇ ನಿಮಿಷದಲ್ಲಿ ಸೋಲಿನ ದಡ ಸೇರಿಸಿದರೆ, ಶಶಾಂಕ್‌ಗೆ ಕೆ.ಎ. ಮೋಹಿತ್‌ಸೋಲಿನ ರುಚಿ ತೋರಿಸಿದರು. ರಾಯನ್‌ನೂರ್‌ಇಮ್ರಾನ್‌ವಿರುದ್ಧ ಸಿ. ಚೇತನ್ ಗೆಲುವು ಸಾಧಿಸಿದರು.
ಎಸ್. ರವಿಕುಮಾರ್‌ಅವರು ಪುನೀತ್‌ಅವರನ್ನು ಕೇವಲ 40 ಸೆಕೆಂಡಿನಲ್ಲಿ ಸೋಲಿಸಿದರೆ, ಎನ್.ಆರ್. ಸುಹಾಸ್‌ಗೌಡ ಅವರು, ಎಚ್. ನಾರಾಯಣ್‌ಅವರನ್ನು 42 ಸೆಕೆಂಡಿನಲ್ಲಿ ಪರಾಭವಗೊಲಿಸಿದರು. ಸುಯೇಂದರ್ ಗೌಡ ಅವರು, ಮಹದೇವಸ್ವಾಮಿ ಅವರನ್ನು ಕೇವಲ 20 ಸೆಕೆಂಡಿನಲ್ಲಿ ಸೋಲಿಸಿದರು.