ಅಂದಿನ ಸ್ವಾಭಿಮಾನ, ಛಲ ಇಂದು ಸಮುದಾಯದಲ್ಲಿ ಉಳಿದಿಲ್ಲ: ಎಂ.ಶೇಷಪ್ಪ

| Published : Jan 02 2025, 12:32 AM IST

ಅಂದಿನ ಸ್ವಾಭಿಮಾನ, ಛಲ ಇಂದು ಸಮುದಾಯದಲ್ಲಿ ಉಳಿದಿಲ್ಲ: ಎಂ.ಶೇಷಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

೨೦ ಸಾವಿರ ಅಶ್ವದಳ, ೮ ಸಾವಿರ ಕಾಲ್ದಳ ಮತ್ತು ಫಿರಂಗಿ ಸಿಡಿಸುವ ಪಡೆ ಹೊಂದಿದ್ದ ಪೇಶ್ವೆಗಳ ಸೈನ್ಯವನ್ನು ಕೇವಲ ೫೦೦ ಸೈನಿಕರು ಮೆಟ್ಟಿ ನಿಂತು ಗೆಲವು ಸಾಧಿಸಬೇಕಾದರೆ ಆ ಸೈನಿಕರಲ್ಲಿದ್ದ ಸ್ವಾಭಿಮಾನ ಹಾಗೂ ಛಲದ ಮನಸ್ಥಿತಿಯೇ ಕಾರಣ.

ಮಾಲೂರು: ಮನಸ್ಸಿನಲ್ಲಿ ಗೆಲ್ಲುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭೀಮ್‌ ಕೋರೆಗಾಂವ್‌ ವಿಜಯವೇ ಸಾಕ್ಷಿಯಾಗಿದೆ. ಆದರೆ ಅಂದಿನ ಛಲ, ಸ್ವಾಭಿಮಾನ ಇಂದು ಇಲ್ಲದಿರುವುದು ಬೇಸರದ ಸಂಗತಿ ಎಂದು ದಸಂಸ ತಾಲೂಕು ಸಂಚಾಲಕ ಎಂ.ಶೇಷಪ್ಪ ಹೇಳಿದರು.

ಪಟ್ಟಣದ ದಸಂಸ ಕಚೇರಿಯಲ್ಲಿ ಭೀಮಾ ಕೋರೆಗಾಂವ್‌ ವಿಜಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ೨೦ ಸಾವಿರ ಅಶ್ವದಳ, ೮ ಸಾವಿರ ಕಾಲ್ದಳ ಮತ್ತು ಫಿರಂಗಿ ಸಿಡಿಸುವ ಪಡೆ ಹೊಂದಿದ್ದ ಪೇಶ್ವೆಗಳ ಸೈನ್ಯವನ್ನು ಕೇವಲ ೫೦೦ ಸೈನಿಕರು ಮೆಟ್ಟಿ ನಿಂತು ಗೆಲವು ಸಾಧಿಸಬೇಕಾದರೆ ಆ ಸೈನಿಕರಲ್ಲಿದ್ದ ಸ್ವಾಭಿಮಾನ ಹಾಗೂ ಛಲದ ಮನಸ್ಥಿತಿಯೇ ಕಾರಣ ಎಂದರು.

ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ್‌ ನಾಗವಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉಪನ್ಯಾಸ ಕಾವೇರಪ್ಪ ಅವರು ಭೀಮಾ ಕೋರೆಗಾಂವ್‌ ಯುದ್ಧದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸಮುದಾಯದ ಸಾಧಕರಾದ ಉಪನ್ಯಾಸಕ ಕಾವೇರಪ್ಪ, ಹಸಾಂಡಹಳ್ಳಿ ಕೃಷ್ಣಪ್ಪ ,ಬನಹಳ್ಳಿ ನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು. ದೂಡ್ಡಿ ಮುನಿಯಪ್ಪ, ಇಂದುಮಂಗಲ ಶ್ರೀನಿವಾಸ್‌, ಚಿಕ್ಕೋಟಪ್ಪ, ಸೋಮಶೇಖರ್‌, ಬೈಚಪ್ಪ, ಹಾಡುಗಾರ ನಾರಾಯಣಸ್ವಾಮಿ, ಇಜುವನಹಳ್ಳಿ ರಾಜಣ್ಣ , ಬಂಟಳ್ಳಿ ಶಿವಪ್ಪ , ಮಾಸ್ತಿ ಬಸವರಾಜು, ಗೋಪಾಲ್‌, ಫಯಾಜ್‌ ಅಹ್ಮದ್‌ , ಶಂಭಣ್ಣ, ಹೊಸಳ್ಳಿ ತಿಮ್ಮರಾಯಪ್ಪ, ಹೊಸಕೋಟೆ ಶ್ರೀನಿವಾಸ್‌ ಇನ್ನಿತರರು ಇದ್ದರು.

ಲಕ್ಕೂರು ಹೋಬಳಿ ಸಂಚಾಲಕ ಹರೀಶ್‌ ಸ್ವಾಗತಿಸಿದರು. ಅದಿಮ ಹರೀಶ್‌ ಕಾರ್ಯಕ್ರಮ ನಿರೂಪಿಸಿದರು. ದಿನ್ನೇರಿ ಶಿವಣ್ಣ ವಂದಿಸಿದರು.