ಸಾರಾಂಶ
ಮುಂಡರಗಿ ಮಠಕ್ಕೆ ಬಳ್ಳೊಳ್ಳಿ ಜಗದ್ಗುರುಗಳ ಸೇವೆ ಅಪಾರ. ಅವರ ಕಾರ್ಯವನ್ನ ಸದಾಕಾಲವೂ ಸ್ಮರಣೆ ಮಾಡುವ ಕಾರ್ಯ ನಡೆಯಬೇಕು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಮುಂಡರಗಿ ಮಠಕ್ಕೆ ಬಳ್ಳೊಳ್ಳಿ ಜಗದ್ಗುರುಗಳ ಸೇವೆ ಅಪಾರ. ಅವರ ಕಾರ್ಯವನ್ನ ಸದಾಕಾಲವೂ ಸ್ಮರಣೆ ಮಾಡುವ ಕಾರ್ಯ ನಡೆಯಬೇಕು ಎಂದು ಮುಂಡರಗಿ ಅನ್ನದಾನೀಶ್ವರ ಮಠದ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು.ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನೂತನ ಅನ್ನದಾನೀಶ್ವರ ಶಾಖಾಮಠ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ಈ ಭಾಗದ ಭಕ್ತರ ಬಹುದಿನಗಳ ಬೇಡಿಕೆಯಾಗಿದ್ದ ಶಾಖಾಮಠವನ್ನ ಬೆಟಗೇರಿ ಭಕ್ತರು ಕುಕನೂರ ಶ್ರೀಗಳ ಸಹಕಾರದಲ್ಲಿ ನಿರ್ಮಾಣ ಮಾಡಿದ್ದು ಅತ್ಯಂತ ಸಂತೋಷ ತಂದಿದೆ. ಗ್ರಾಮಗಳಲ್ಲಿ ಮಠಗಳ ನಿರ್ಮಾಣದಿಂದ ಆ ಗ್ರಾಮ ಸಂಸ್ಕಾರ ಹೊಂದಲು ಸಾಧ್ಯ. ಬೆಟಗೇರಿ ಗ್ರಾಮದಲ್ಲಿ 1970ರಿಂದ ಪ್ರಸಾದ ನಿಲಯ ಕಾರ್ಯ ಮಾಡಿದ್ದು ಅದು ನಂತರ ಶಾಲೆಯಾಗಿ ಪರಿವರ್ತನೆಯಾಯಿತು. ಆದರೆ ಇಂದು ಶಾಖಾಮಠವಾಗಿ ನೆಲೆ ನಿಲ್ಲಲಿಕ್ಕೆ ಭಕ್ತರ ಕೊಡುಗೆ ಅಪಾರ. ಜೊತೆಗೆ ಕುಕನೂರಿನ ಶ್ರೀಗಳ ಕಾರ್ಯಶೀಲತೆ ಮೆಚ್ಚಬೇಕು ಎಂದರು.
ಕುಕನೂರು ಬೆಟಗೇರಿ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ಭಕ್ತರ ಸಹಕಾರವು ಅಭಿವೃದ್ಧಿಗೆ ಕಾರಣ. ಭಕ್ತರು ಜಾತಿ, ಮತ, ಪಂಥ ಬಿಟ್ಟು ಒಂದಾಗಬೇಕು. ನಾವೆಲ್ಲ ಅನ್ನದಾನೀಶ್ವರನ ನೆರಳಲ್ಲಿ ಬದುಕು ಕಟ್ಟಿಕೊಂಡಾಗ ಮಾತ್ರ ನಮ್ಮ ಬದುಕಿಗೆ ಅರ್ಥ ಬರುತ್ತದೆ ಎಂದರು.ಬೆಳಗ್ಗೆ ಮೈನಳ್ಳಿ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಸೊರಟೂರಿನ ಶಿವಯೋಗಿಶ್ವರ ಸ್ವಾಮೀಜಿ, ನರಸಾಪುರದ ವೀರೇಶ್ವರ ಸ್ವಾಮೀಜಿ, ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ ಅನ್ನದಾನೀಶ್ವರ ಗದ್ದುಗೆ ಸ್ಥಾಪನೆ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭ ಮಲ್ಲಿನಕೇರಿ ಚನ್ನಬಸವ ಸ್ವಾಮೀಜಿ, ಹಿರೇಸಿಂದೋಗಿಯ ಚಿದಾನಂದ ಸ್ವಾಮೀಜಿ, ವೀರೇಶ ಸಜ್ಜನ, ಶೇಕರಪ್ಪ ಲಕ್ಷ್ಯಾಣಿ, ಬಸವರಾಜ ಕಡಹಳ್ಳಿ, ಈರಪ್ಪ ಕೊಪ್ಪಳ, ಪ್ರಭು ಶಿವಶಿಂಪರ, ಶಂಭು ಹೀರೇಮಠ, ಶೇಖರಪ್ಪ ಆರೇರ, ಬಸವರಾಜ ನಾಗರೆಡ್ಡಿ, ವೀರುಪಾಕ್ಷಪ್ಪ ಡಾವನಗೇರಿ, ಗುರುಶಾಂತ ಅಬ್ಬಿಗೇರಿ, ಕುಮಾರಸ್ವಾಮಿ ಹಿರೇಮಠ, ಪ್ರಭು ಕುಕನೂರ, ಆನಂದ ಕುಕನೂರ ಮತ್ತು ಇತರರಿದ್ದರು.