ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿನೊಂದವರ, ನೆಲೆಯಿಲ್ಲದವರ ಬಾಳಿಗೆ ವೃದ್ಧಾಶ್ರಮಗಳು ಅಶಾಕಿರಣವಾಗಿವೆ. ಅಥಣಿಯಲ್ಲಿ ಸುಖನ್ಯಾ ವೃದ್ಧಾಶ್ರಮವು ನೊಂದವರ ಹೆಗಲಾಗಿ ಕೆಲಸ ಮಾಡುತ್ತಿದ್ದು, ಬಿರಾದಾರ ದಂಪತಿಯ ಸೇವೆ ಮೆಚ್ಚುವಂತಹುದು ಎಂದು ಶಾಸಕ ಲಕ್ಷ್ಮಣ ಸವದಿ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಅಥಣಿ -ಚಮಕೇರಿ ರಸ್ತೆಯ ಭರಮಖೋಡಿಯಲ್ಲಿ ಜೂ.19 ರಂದು ನಡೆಯುವ ಸುಕನ್ಯಾ ವೃದ್ಧಾಶ್ರಮದ ವಾರ್ಷಿಕೋತ್ಸವ ಮತ್ತು ಅಪ್ಪ ಪ್ರಶಸ್ತಿ ಪ್ರದಾನದ ಬಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಚಿತ್ರಕಲಾವಿದ ಮುತ್ತುರಾಜ ಮಾತನಾಡಿ, ಸಾಮಾಜಿಕವಾಗಿ ಧಾರ್ಮಿಕವಾಗಿ ಜನನ-ಮರಣಗಳ ನಡುವಿನ ಜೀವನದಲ್ಲಿ ನೋವು, ನಲಿವೆಂಬ ಮುಳ್ಳುಗಳ ದಾರಿಯಿದೆ. ಅದರಿಂದ ಸಾಗಲು ಸಾಧ್ಯವಿಲ್ಲವೆಂದು ನಾವು ಕೈಕಟ್ಟಿ ಕುಳಿತರೇ ನಮ್ಮಿಂದ ಯಾವ ಕೆಲಸವೂ ನಡೆಯುವುದಿಲ್ಲ. ಹೂವಿನ ಹಾಸಿಗೆ ನಮ್ಮದಾಗುವ ತನಕ ಪ್ರಯತ್ನಪಟ್ಟು, ಶ್ರಮ ವಹಿಸಿ, ಅದೇ ದಾರಿಯಲ್ಲಿ ನಡೆದರೇ ಅದರಿಂದಾಗುವ ಖುಷಿ ಲೆಕ್ಕಾಚಾರಕ್ಕೆ ಸಿಗದು. ಜತೆಗೆ ಈ ಸಾಧನೆಗೆ ಪ್ರತಿಫಲದ ಸನ್ಮಾನವೂ ಸಿಗುತ್ತದೆ. ಆ ನಿಟ್ಟಿನಲ್ಲಿ ಬಿರಾದಾರ ದಂಪತಿ ನೊಂದವರಿಗೆ ಆಶ್ರಯದಾತರಾಗಿದ್ದಾರೆ. ಅವರ ಸೇವೆ ಅಪರೂಪವಾದದ್ದು ಎಂದು ಶ್ಲಾಘಿಸಿದರು.ಈ ಸಂದರ್ಭದಲ್ಲಿ ಈರಣ್ಣ ಅಡಿಗಲ್, ಅಶೋಕ್ ಐಗಳಿ, ಸಂಸ್ಥೆಯ ಸಂಚಾಲಕ ಮಹಾದೇವ ಬಿರಾದಾರ ಉಪಸ್ಥಿತರಿದ್ದರು.