ರೋಗಿ ಆರೈಕೆಯಲ್ಲಿ ದಾದಿಯರ ಸೇವೆ ಪ್ರಶಂಸನೀಯ

| Published : May 13 2024, 01:05 AM IST

ಸಾರಾಂಶ

ಬಾಪೂಜಿ ಆರ್ಯುವೇದಿಕ್ ಮೆಡಿಕಲ್ ಕಾಲೇಜ್‌ನಲ್ಲಿ ವಿಶ್ವ ತಾಯಂದಿರ, ಶುಶ್ರೂಷಕಿಯರ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಬಗ್ಗೆ ಗಮನಹರಿಸಿ ಅವನಿಗೆ ಸೂಕ್ತ ಚಿಕಿತ್ಸೆ ನೀಡಿ ಅವನನ್ನು ಗುಣಮುಖನನ್ನಾಗಿ ಮಾಡುವ ವೈದ್ಯರ ಸೇವೆಯ ಜೊತೆಗೆ ದಾದಿಯರೂ ಸಹ ರೋಗಿಗಳ ಆರೈಕೆಯಲ್ಲಿ ಹೆಚ್ಚು ಜಾಗ್ರತೆ ವಹಿಸುತ್ತಾರೆ. ದಾದಿಯರ ಸೇವಾ ಕಾರ್ಯದ ಬಗ್ಗೆ ಸಮಾಜಕ್ಕೆ ಮೆಚ್ಚುಗೆ ಇದೆ ಎಂದು ರೋಟರಿ ಕ್ಲಬ್ ಹಿರಿಯ ಸದಸ್ಯ ಡಾ.ಕೆ.ಎಂ.ಜಯಕುಮಾರ್ ತಿಳಿಸಿದರು.

ನಗರದ ಬಾಪೂಜಿ ಆರ್ಯುವೇದಿಕ್ ಮೆಡಿಕಲ್ ಕಾಲೇಜು ಆವರಣದಲ್ಲಿ ವಿಶ್ವ ತಾಯಂದಿರ ದಿನಾಚರಣೆ ಮತ್ತು ಶುಶ್ರೂಷಕಿಯರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿವರ್ಷ ಈ ಕಾರ್ಯವನ್ನು ಹಮ್ಮಿಕೊಳ್ಳುವ ಮೂಲಕ ದಾದಿಯರ ಸೇವಾ ಕಾರ್ಯವನ್ನು ಪ್ರಶಂಸಿಸಲಾಗುವುದು. ವೈದ್ಯರಷ್ಟೇ ಜವಾಬ್ದಾರಿಯುತವಾಗಿ ದಾದಿಯರು ಕಾರ್ಯನಿರ್ವಹಿಸುತ್ತಾರೆ. ಎಂತಹ ಸಂದರ್ಭದಲ್ಲೂ ಸಹಿತ ಆವೇಷಕ್ಕೆ ಒಳಗಾಗದೆ ರೋಗಿಗಳು ಗುಣಮುಖರಾಗುವ ಕಾರ್ಯವನ್ನು ದಾದಿಯರು ಮಾಡುತ್ತಾ ಬಂದಿದ್ದಾರೆ. ಅವರ ಸೇವಾ ಕಾರ್ಯ ಪ್ರಶಂಸನೀಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿಕ್ಲಬ್ ಅಧ್ಯಕ್ಷ ಕೆ.ನಾಗೇಶ್ ಮಾತನಾಡಿ, ವಿಶ್ವ ತಾಯಂದಿರ ದಿನಾಚರಣೆ ಜೊತೆಯಲ್ಲೇ ದಾದಿಯರ ದಿನಾಚರಣೆ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ದಾದಿಯರು ಮಾಡುವ ಸೇವಾ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಇವರ ಸೇವೆಯನ್ನು ಎಲ್ಲರೂ ಸದಾಸ್ಮರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್.ಜಯಪ್ರಕಾಶ್, ಕೆ.ಎ.ಮೂರ್ತಪ್ಪ, ಡಾ.ನಾಗರಾಜು, ಡಾ.ಎಲ್.ಎಸ್.ವೀರೇಶ್, ಮುರುಗೇಶ್ ಮುಂತಾದವರು ಇದ್ದರು.

----ಪೋಟೋ; ಸಿಎಲ್‌ಕೆ 2

ಚಳ್ಳಕೆರೆ ನಗರದ ಬಾಪೂಜಿ ಆರ್ಯುವೇದಿಕ್ ಮೆಡಿಕಲ್ ಕಾಲೇಜು ಆವರಣದಲ್ಲಿ ವಿಶ್ವ ತಾಯಂದಿರ ದಿನಾಚರಣೆ ಮತ್ತು ಶುಶ್ರೂಷಕಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ದಾದಿಯರನ್ನು ಸನ್ಮಾನಿಸಲಾಯಿತು.