ಸದಾಶಿವಪೇಟೆಯ ಶರಣಬಸವೇಶ್ವರ ದಾಸೋಹಮಠದ ಸೇವೆ ಅನನ್ಯ

| Published : Apr 04 2024, 01:00 AM IST

ಸದಾಶಿವಪೇಟೆಯ ಶರಣಬಸವೇಶ್ವರ ದಾಸೋಹಮಠದ ಸೇವೆ ಅನನ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಠ, ಮಾನ್ಯಗಳು ಭಕ್ತರಿಗೆ ಸನ್ಮಾರ್ಗ ತೋರುವ ಕೇಂದ್ರಗಳಾಗಿದ್ದು, ಭಕ್ತಿಯಿಂದ ಬಾಗಿ ನಡೆವ ಭಕ್ತನ ಸಂಕಷ್ಟಗಳನ್ನು ದೂರಮಾಡುವ ಶಕ್ತಿ ಗುರು ಕಾರುಣ್ಯಕ್ಕಿದೆ ಎಂದು ಸದಾಶಿವಪೇಟೆ ವಿರಕ್ತಮಠದ ಶ್ರೀ ಗದಿಗೇಶ್ವರ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಶ್ರೀ ಶರಣಬಸವೇಶ್ವರ ದಾಸೋಹಮಠದಲ್ಲಿ ೪೪ ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ, ಲಿಂಗದೀಕ್ಷೆ, ಅಯ್ಯಾಚಾರ, ನಿತ್ಯ ಅನ್ನದಾಸೋಹ ನಡೆಸಿಕೊಂಡು ಬರುತ್ತಿರುವುದು ಶಿವದೇವ ಶರಣರ ಸೇವಾ ಮನೋಭಾವನೆಗೆ ಹಿಡಿದ ಕೈ ಗನ್ನಡಿಯಾಗಿದೆ ಎಂದು ಸದಾಶಿವಪೇಟೆ ವಿರಕ್ತಮಠದ ಶ್ರೀ ಗದಿಗೇಶ್ವರ ಮಹಾಸ್ವಾಮಿಗಳು ನುಡಿದರು. ತಾಲೂಕಿನ ಸದಾಶಿವಪೇಟೆಯ ಶರಣಬಸವೇಶ್ವರ ದಾಸೋಹಮಠದಲ್ಲಿ ನಡೆದ ಪುರಾಣ ಮಹಾಮಂಗಲ, ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಮ್ಮುಖ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಠ, ಮಾನ್ಯಗಳು ಭಕ್ತರಿಗೆ ಸನ್ಮಾರ್ಗ ತೋರುವ ಕೇಂದ್ರಗಳಾಗಿದ್ದು, ಭಕ್ತಿಯಿಂದ ಬಾಗಿ ನಡೆವ ಭಕ್ತನ ಸಂಕಷ್ಟಗಳನ್ನು ದೂರಮಾಡುವ ಶಕ್ತಿ ಗುರು ಕಾರುಣ್ಯಕ್ಕಿದೆ ಎಂದು ಹೇಳಿದರು

ಮಠದ ಪೀಠಾಧಿಪತಿ ಶ್ರೀ ಶಿವದೇವ ಶರಣರು ಮಾತನಾಡಿ, ಲಿಂ. ಕತೃ ಶ್ರೀ ರೇವಣಸಿದ್ಧ ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಭಕ್ತಸಮೂಹವನ್ನು ಕೊಂಡೊಯ್ಯುತ್ತಿದ್ದು, ಭಕ್ತಸಮೂಹದ ಶ್ರೇಯೋಭಿವೃದ್ಧಿಯೇ ಶ್ರೀ ಮಠದ ಅಪೇಕ್ಷೇಯಾಗಿದೆ. ಭಕ್ತರೇ ಶ್ರೀ ಮಠಕ್ಕೆ ಶಕ್ತಿಯಾಗಿ ನಿಂತು ಮಠದ ಕಾರ್ಯಗಳನ್ನು ಮುಂದುವರಿಸಿಕೋಂಡು ಬರುತ್ತಿರುವುದಕ್ಕೆ ಲಿಂಗೈಕ್ಯ ರೇವಣಸಿದ್ಧ ಶರಣರ ಪ್ರೇರಣಾ ಶಕ್ತಿಯೇ ಕಾರಣವಾಗಿದೆ ಎಂದು ಹೇಳಿದರು.

ಹಿರೇಮ್ಯಾಗೇರಿ ಬೆಟದಯ್ಯ ಶಾಸ್ತ್ರೀ ಹಿರೇಮಠ ಅವರಿಂದ ತಿಂಗಳ ಪರ್ಯಂತರ ನಡೆದ ಶ್ರೀ ಶರಣಬಸವೇಶ್ವರ ಪುರಾಣ ಮಹಾ ಮಂಗಲದೊಂಡಿತು. ಗದಿಗಯ್ಯ ಮಹಾಂತಿನಮಠ ಸಾಮೂಹಿಕ ವಿವಾಹ ನಡೆಸಿಕೋಟ್ಟರು. ಮುಖಂಡರಾದ ಚನಬಸಪ್ಪ ಕುರಗೋಡಿ, ಶಶಿಧರ ಹೊನ್ನಣ್ಣವರ, ರಮೇಶ ಕಲಿವಾಳ, ಶಂಭು ಕಿವುಡನವರ, ಪುಟ್ಟಪ್ಪ ಬಾಗಣ್ಣವರ, ಸಂಗಪ್ಪ ವಡವಿ, ಉಮೇಶ ಅಂಗಡಿ, ಚಂದ್ರಶೇಖರ ಸದಾಶಿವಪೇಟೆಮಠ, ಚನಬಸಪ್ಪ ಗುಳೇದಕೇರಿ, ಕಲ್ಲಪ್ಪ ಆಜೂರ, ಎಸ್.ಜಿ. ಹಿರೇಮಠ ಸೇರಿದಂತೆ ಇತರರು ಇದ್ದರು. ಸಿ.ಬಿ. ಕಿವುಡನವರ ನಿರೂಪಿಸಿದರು.