ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಇಂದಿನ ದಿನಗಳಲ್ಲಿ ವೈದ್ಯರ, ಪತ್ರಕರ್ತರ ಮತ್ತು ಲೆಕ್ಕಪರಿಶೋಧಕರ ಸೇವೆ ಅಮೂಲ್ಯವಾದ್ದು, ಈ ಮೂವರು ಇಂದು ಸಮಾಜದ ಪ್ರಮುಖ ಭಾಗಗಳಾಗಿದ್ದಾರೆ ಎಂದು ಹಜಾರೆ ಫೌಂಡೇಶನನ ಪದ್ಮಾವತಿ ಅಂತಾರಾಷ್ಟ್ರೀಯ ಶಾಲೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಇಂದಿನ ದಿನಗಳಲ್ಲಿ ವೈದ್ಯರ, ಪತ್ರಕರ್ತರ ಮತ್ತು ಲೆಕ್ಕಪರಿಶೋಧಕರ ಸೇವೆ ಅಮೂಲ್ಯವಾದ್ದು, ಈ ಮೂವರು ಇಂದು ಸಮಾಜದ ಪ್ರಮುಖ ಭಾಗಗಳಾಗಿದ್ದಾರೆ ಎಂದು ಹಜಾರೆ ಫೌಂಡೇಶನನ ಪದ್ಮಾವತಿ ಅಂತಾರಾಷ್ಟ್ರೀಯ ಶಾಲೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ತಿಳಿಸಿದರು.ಹೊಸೂರನ ಪದ್ಮಾವತಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ, ವೈದ್ಯರ ಮತ್ತು ಲೆಕ್ಕ ಪರಿಶೋಧರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರು ತಮ್ಮ ವೃತ್ತಿಯ ಮೂಲಕ ಜನರ ಆರೋಗ್ಯ ಕಾಪಾಡಿದರೆ, ಲೆಕ್ಕ ಪರಿಶೋಧಕರು ದೇಶದ ಆರ್ಥಿಕ ಪರಿಸ್ಥಿತಿ ನಿರ್ಹಹಿಸುವ ಮಹತ್ವದ ಹೊಣೆ ಹೊತ್ತಿದ್ದಾರೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಂವಿಧಾನದ 3 ಅಂಗಗಳಾದರೆ ಪತ್ರಿಕಾರಂಗ 4ನೇ ಅಂಗವಾಗಿದೆ. ಸಾಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಮತ್ತು ಕಾರ್ಯಾಂಗ ಮತ್ತು ಶಾಸಕಾಂಗದ ಕನ್ನಡಿಯಾಗಿ ಪತ್ರಿಕೆಗಳು ಕಾರ್ಯ ಮಾಡುತ್ತವೆ ಎಂದರು.ಪ್ರಾಂಶುಪಾಲ ಬಸವರಾಜ ಕಲಾದಗಿ ಮಾತನಾಡಿ, ವೈದ್ಯರನ್ನು, ಲೆಕ್ಕ ಪರಿಶೋಧಕರನ್ನು ಮತ್ತು ಪತ್ರಕರ್ತರನ್ನು ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜತೆಗೆ ಅವರು ಸಲ್ಲಿಸುತ್ತಿರುವ ಸೇವೆ ಮಹತ್ವನ್ನು ತಿಳಿಸುವುದು ದಿನಾಚರಣೆ ಉದ್ದೇಶವಾಗಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ ಕುಂಬಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಡಿದರು.ವೈದ್ಯರಾದ ಡಾ.ಎಸ್.ಡಿ.ಮಾಳಿ, ಡಾ.ಮಹಾಲಿಂಗಪ್ಪ ಪೂಜೇರಿ, ಶಿವಾಣಿ ಕರಿಜಾಡರ, ಡಾ.ಅಭಿಲಾಷ ಜುಂಜಪ್ಪನವರ, ಡಾ.ಚೈತ್ರಾ ಜುಂಜಪ್ಪನವರ, ಪತ್ರಕರ್ತರಾದ ಮಲ್ಲಿಕಾರ್ಜುನ ತುಂಗಳ, ಯಶವಂತ ವಾಜಂತ್ರಿ, ಕಿರಣ ಆಳಗಿ ಮತ್ತು ಶಾಲೆ ಶಿಕ್ಷಕರು ಇದ್ದರು.
ಸಮಾರಂಭದಲ್ಲಿ ಮಕ್ಕಳು ಛದ್ಮ ವೇಷಧಾರಿಗಳಾಗಿ ಗಮನ ಸೆಳೆದರು.