ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣರು

| Published : Jul 26 2025, 01:30 AM IST

ಸಾರಾಂಶ

ಮೌಢ್ಯತೆ ಹಾಗೂ ಅಸಮಾನತೆ ಹೋಗಲಾಡಿಸಲು ೧೨ನೇ ಶತಮಾನದ ಬಸವಾದಿ ಶರಣರು ಸಮರ ಸಾರಿ, ಐಕ್ಯತೆಗೆ ಶ್ರಮಿಸಿದ ಇತಿಹಾಸ ನಿಜಕ್ಕೂ ರೋಚಕವಾಗಿದೆ. ಶರಣರ ಚಿಂತನೆಗಳನ್ನು ಮನನ ಮಾಡಿಕೊಳ್ಳುವ ಮೂಲಕ ನಮ್ಮಲ್ಲಿರುವ ಮಲಿನತೆ ಕಳೆದುಕೊಳ್ಳಬೇಕು.

ಯಲಬುರ್ಗಾ:

ಅಸಮಾನತೆ ತೊಲಗಿಸಿ ಸಮ ಸಮಾಜ ನಿರ್ಮಿಸುವಲ್ಲಿ ಕ್ರಾಂತಿ ನಡೆಸಿದ ಶರಣರ ಆದರ್ಶ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಡಿಡಿಪಿಐ ಶಂಕ್ರಪ ಗಾಂಜಿ ಹೇಳಿದರು.

ಪಟ್ಟಣದ ಸಾಯಿ ಪ್ಯಾಲೇಸ್‌ನಲ್ಲಿ ಬಸವ ಶಿವಯೋಗ ಸಮಿತಿಯಿಂದ ಆಯೋಜಿಸಿದ್ದ ನಿಜಸುಖಿ ಹಡಪದ ಅಪ್ಪಣ್ಣ, ಶಂಕರ ದಾಸಿಮಯ್ಯ, ಅಕ್ಕನಾಗಮ್ಮ ಅವರ ಶರಣೋತ್ಸವ ಹಾಗೂ ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೌಢ್ಯತೆ ಹಾಗೂ ಅಸಮಾನತೆ ಹೋಗಲಾಡಿಸಲು ೧೨ನೇ ಶತಮಾನದ ಬಸವಾದಿ ಶರಣರು ಸಮರ ಸಾರಿ, ಐಕ್ಯತೆಗೆ ಶ್ರಮಿಸಿದ ಇತಿಹಾಸ ನಿಜಕ್ಕೂ ರೋಚಕವಾಗಿದೆ. ಶರಣರ ಚಿಂತನೆಗಳನ್ನು ಮನನ ಮಾಡಿಕೊಳ್ಳುವ ಮೂಲಕ ನಮ್ಮಲ್ಲಿರುವ ಮಲಿನತೆ ಕಳೆದುಕೊಳ್ಳಬೇಕು. ಬದುಕನ್ನು ಪಾವಿತ್ರ‍್ಯತೆಯಿಂದ ಕಟ್ಟಿಕೊಂಡು ಶರಣರ ಆಶಯ ಪೂರೈಸಬೇಕು ಎಂದರು.ಬಸವ ಶಿವಯೋಗ ಸಮಿತಿ ಅಧ್ಯಕ್ಷ ಸಂಗಣ್ಣ ತೆಂಗಿನಕಾಯಿ ಮಾತಮಾಡಿ, ಶರಣರ ವಚನ ಮನನ ಮಾಡಿಕೊಳ್ಳಬೇಕು. ಸಮಾಜದಲ್ಲಿ ಕೀಳರಿಮೆ ತೊಲಗಿ ಸಮ ಸಮಾಜ ಕಟ್ಟಿಕೊಂಡಾಗ ಮಾನವರಾಗಿ ಹುಟ್ಟಿದ್ದು ಸಾರ್ಥಕವಾಗುತ್ತದೆ ಎಂದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಮುಖಂಡರಾದ ಅಮರೇಶ ಸೋಮನಾಳ, ರುದ್ರಪ್ಪ ಹಳ್ಳಿ, ಶಿಕ್ಷಕ ಬಸವರಾಜ ಕೊಂಡಗುರಿ ಮಾತನಾಡಿದರು. ಇದೇ ವೇಳೆ ಶಾಲಾ ಮಕ್ಕಳು ವಚನ ಗಾಯನಕ್ಕೆ ನೃತ್ಯಗೈದರು.

ಈ ವೇಳೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಗಣ್ಯರಾದ ಶಿವಪ್ಪ ಶಾಸ್ತ್ರಿ ಹಡಪದ, ಸಿದ್ದಲಿಂಗಪ್ಪ ಶ್ಯಾಗೋಟಿ, ವಿರೂಪಾಕ್ಷಪ್ಪ ಹಡಪದ, ಪರುಶರಾಮ, ಮಲ್ಲನಗೌಡ ಪಾಟೀಲ್, ಶಿವಶರಣಯ್ಯ ಮ್ಯಾಗಳಮಠ, ಅಶೋಕ ಪಾಟೀಲ್, ರುದ್ರಗೌಡ ಗೋಣಿ, ವೀರೇಶ ಸಂಗನಾಳ, ವೀರೇಶ ಮಾರನಾಳ, ದೇವಪ್ಪ ವಾಲ್ಮೀಕಿ, ಅನ್ನಪೂರ್ಣ ಟೆಂಗಿನಕಾಯಿ, ಶರಣಪ್ಪ ಹವಳದ, ಮಲ್ಲಣ್ಣ ತೆಂಗಿನಕಾಯಿ, ಹನುಮಂತಪ್ಪ ದಾನಕೈ, ವೀರೇಶ ತೆಂಗಿನಕಾಯಿ, ಬಸವರಾಜ ಹಳ್ಳಿ, ಫಕೀರಪ್ಪ ಗಾಣಗೇರ, ಸಿದ್ದಯ್ಯ ಕೊಣ್ಣೂರ ಸೇರಿದಂತೆ ಮತ್ತಿತರರು ಇದ್ದರು.