ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ಧೇಬಿಹಾಳ
ಪಟ್ಟಣದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ದಿ ಬಾಗವಾನ ಅಲ್ಪಸಂಖ್ಯಾತರ ಕೋ-ಆಪ್ ಕ್ರೆಡಿಟ್ ಸೊಸೈಟಿ ಗ್ರಾಹಕರ ಆರ್ಥಿಕ ಸದೃಢತೆಗೆ ಸಹಕಾರಿಯಾಗಿದೆ. ಷೇರುದಾರರು ಬ್ಯಾಂಕಿನ ಆಧಾರ ಸ್ತಂಭಗಳು. ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿಸಿ ಬ್ಯಾಂಕ್‌ನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು ಎಂದು ಬ್ಯಾಂಕ್ ಅಧ್ಯಕ್ಷ ಪಿಂಟು ಸಾಲಿಮನಿ ಹೇಳಿದರು.ಪಟ್ಟಣದ ದಿ ಬಾಗವಾನ ಅಲ್ಪಸಂಖ್ಯಾತರ ಕೋ-ಆಪ್ ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಮಂಗಳವಾರ ನಡೆದ 26ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ವ್ಯಾಪಾರಸ್ಥರು ಮತ್ತು ಗ್ರಾಹಕರ ಹಿತ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಬ್ಯಾಂಕ್ ಕಳೆದ 2023-24 ನೇ ಸಾಲಿನ ಹಣಕಾಸಿನ ವರ್ಷದ ಅಂತ್ಯಕ್ಕೆ ₹ 14.34 ಲಕ್ಷ ನಿವ್ವಳ ಲಾಭ ಗಳಿಸಿದೆ. ಪ್ರಸಕ್ತ ವರ್ಷ ಸುಮಾರು ₹ 15 ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹೊಂದಿದೆ. ಸುಮಾರು ₹ 7 ಕೋಟಿ ಸಾಲ ವಿತರಿಸಿ ಬ್ಯಾಂಕ್ ಸದೃಢವಾಗಿದೆ. ಈ ವರ್ಷದ ಅಂತ್ಯಕ್ಕೆ 1240 ಸದಸ್ಯ ಷೇರುದಾರರನ್ನು ಹೊಂದಿದ್ದು, ಒಟ್ಟು ಷೇರು ಬಂಡವಾಳವು ₹ 41 ಲಕ್ಷ ಹೊಂದಿದೆ. ಇದೇ ಅವಧಿಯಲ್ಲಿ ಒಟ್ಟು ₹ 23.67 ಕೋಟಿ ಠೇವಣಿ ಇದ್ದು ಅದನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.
ಬ್ಯಾಂಕಿನ ನಿರ್ದೇಶಕ ಎಚ್.ಆರ್.ಬಾಗವಾನ ಮಾತನಾಡಿ, ಸ್ಥಳೀಯ ಬ್ಯಾಂಕುಗಳು ಜನರ ಜೀವನಾಡಿಗಳಿದ್ದಂತೆ. ಬ್ಯಾಂಕುಗಳು ಬೆಳೆದರೆ ಮಾತ್ರ ಏಳಿಗೆ ಸಾಧ್ಯ. ಅತ್ಯುತ್ತಮ ಸೇವೆ ಗ್ರಾಹಕರ ಮನಸ್ಸು ಗೆಲ್ಲಲ್ಲು ಸಾಧ್ಯ. ಹೆಚ್ಚಿನ ಸಂಖ್ಯೆಯಲ್ಲಿ ವ್ಯವಹಾರ ನಮ್ಮ ಬ್ಯಾಂಕಿನೊಂದಿಗೆ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ವೈದ್ಯ ರತ್ನ ಪ್ರಶಸ್ತಿ ಪುರಸ್ಕ್ರತ ಹಿರಿಯ ವೈದ್ಯರಾದ ಎ.ಎಂ ಮುಲ್ಲಾ, ಡಾ.ಸರ್ವಪಲ್ಲಿ ರಾಧಾಕೃಷ್ಣ ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತ ಸಾಹಿತಿ ಹಾಗೂ ಶಿಕ್ಷಕರಾದ ಎಚ್.ಆರ್ ಭಾಗವಾನ, ಕಸಾಪ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೊಸೈಟಿ ಉಪಾಧ್ಯಕ್ಷ ಎ.ಡಿ.ಹುಣಶ್ಯಾಳ, ಎಂ.ಎಂ.ಚೌದರಿ, ಯು.ಕೆ.ಮಕ್ತೇದಾರ, ಎಚ್.ಎಸ್.ಚೌದ್ರಿ, ಯು.ಎಂ.ಮಮದಾಪೂರ, ಎ.ಎ.ಮಮದಾಪೂರ, ಎಂ.ಕೆ.ಮಮದಾಪೂರ, ಎಂ.ಕೆ.ಹಳ್ಳೂರ, ಎಚ್.ಡಿ.ಮಮದಾಪೂರ, ಆರ್.ಡಿ.ಮುಜಾವರ, ಎಸ್.ಎ.ಬಾಗವಾನ, ಮಾಬುಬಿ ಬಾಗವಾನ, ಆರ್.ಎ.ಚೌದರಿ ಉಪಸ್ಥಿತರಿದ್ದರು.