ಸಾರಾಂಶ
19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ ಶಿವಮೊಗ್ಗಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಭಾಷೆಯನ್ನು ಹೊರದಬ್ಬಲಾಗುತ್ತಿದ್ದು, ಕನ್ನಡ ಭಾಷೆ ಎಲ್ಲಿದೆ ಎಂದು ಸಂಶೋಧಿಸುವಂತಹ ಹೊತ್ತು ಈಗ ಬಂದಿದೆ ಎಂದು 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜಿ.ಕೆ.ರಮೇಶ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಗೋಪಿಶೆಟ್ಟಿಕೊಪ್ಪದ ಚಾಲ್ಯಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಗುರುವಾರ ಏರ್ಪಡಿಸಿರುವ 19ನೇ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷರ ಭಾಷಣ ಮಾಡಿ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಇಂದಿಗೂ ಮುಂದುವರೆಯುತ್ತಿದ್ದರೂ ವಿಸ್ತರಗೊಳ್ಳಬೇಕಾದ ಭಾಷೆ ನಿರಾಶದಾಯಕ ಸ್ಥಿತಿ ತಲುಪಿದೆ ಎಂದರು.ಕನ್ನಡ ಭಾಷೆಗೆ ಒಂದು ಮೌಖಿಕ ಪರಂಪರೆಯಿತ್ತು. ಹೇಳುವ, ಕೇಳುವ ಪರಂಪರೆಯಿತ್ತು. ಕೋಟಿ ಕೋಟಿ ಭಾರತದ ಜನರು ಸಾಮಾಜಿಕ ಜಾಲತಾಣಕ್ಕೆ ದಾಸರಾಗಿದ್ದಾರೆ. ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ನಾವೀಗ ಕಾಲಿಟ್ಟಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿ.ಕೆ.ರಮೇಶ್ ಅವರ ಇಂಡಿಯಾದ ಹೊರಗೊಂದು ಹಣಕು, ಮಲೆಸೀಮೆಯ ಕತೆಗಳು, ಬಿ.ಚಂದ್ರೇಗೌಡರ ದೇಶಾಂತರ ಕಾದಂಬರಿ, ಪ್ರೊ. ಸತ್ಯನಾರಾಯಣ ಅವರ ಅಂತರಂಗದ ಸುತ್ತ ಹನಿಗವನ ಸಂಕಲನ, ಡಾ.ಶ್ರೀಪತಿ ಹಳಗುಂದ ಅವರ ಚಿತ್ರಚಿಂತನ, ವಿಲೋಚನ ಪುಸ್ತಕಗಳು ಲೋಕಾರ್ಪಣೆಗೊಂಡವು.ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಛಾಯಾಗ್ರಹಕ ಶಿವಮೊಗ್ಗ ನಾಗರಾಜ್ ರವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಗಮನ ಸೆಳೆಯಿತು. ಸಚಿವ ಮಧು ಬಂಗಾರಪ್ಪ ಈ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗಮನಸೆಳೆದ ಪುಸ್ತಕ ಮಳಿಗೆ:19ನೇ ಯ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳು ಪ್ರಮುಖ ಆಕರ್ಷಣೆಯ ಕೇಂದ್ರಗಳಾಗಿದ್ದವು. ಇದರ ಜೊತೆಗೆ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನಗಳು ಕೂಡ ನೋಡುಗರನ್ನು ಆಕರ್ಷಿಸಿದವು.ಸಮ್ಮೇಳನದಲ್ಲಿ ಪ್ರಜ್ಞಾ ಬುಕ್ ಹೌಸ್ ಸೇರಿದಂತೆ ಸುಮಾರು 6ಕ್ಕೂ ಹೆಚ್ಚು ಪುಸ್ತಕದ ಅಂಗಡಿಗಳಿದ್ದವು. ಇದರ ಜೊತೆಗೆ ಕರಕುಶಲ ವಸ್ತುಗಳು, ಬ್ಯಾಗಗಳು, ಬಟ್ಟೆಗಳ ವ್ಯಾಪಾರ ಕೂಡ ಜೋರಾಗಿತ್ತು. ಪೊಲೀಸ್ ಇಲಾಖೆ ಕೂಡ ಸಾರ್ವಜನಿಕರಿಗೆ ಸಂದೇಶ ನೀಡುವ ಮಳಿಗೆಯನ್ನೇ ತೆರೆದಿತ್ತುಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ನುಡಿಗಳನ್ನಾಡಿದರು. ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಡಾ.ಎಸ್.ಪಿ.ಪದ್ಮಪ್ರಸಾದ್ ಸೇರಿದಂತೆ ಜಿಲ್ಲೆಯ ತಾಲೂಕು ಅಧ್ಯಕ್ಷರು ಹಾಗೂ ಆಹ್ವಾನಿತ ಗಣ್ಯರು ಹಾಜರಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನಷ್ಟು ಪರಿಹಾರ ಕಾಣದ ಆತಂಕಗಳು ತಲ್ಲಣಗಳಿವೆ. ಅವುಗಳಲ್ಲಿ ಮುಖ್ಯವಾದವು. ಮಲೆನಾಡಿನ ರೈತರಿಗೆ ಸಂಬಂಧಿಸಿದ ಶರಾವತಿ ಚಕ್ರವರಾಹಿ ಮುಳುಗಡೆ ಸಮಸ್ಯೆಗಳು, ಪ್ರವಾಹ ಆಡಳಿತ ಶಾಹಿಯ ಕಿರುಕುಳ ಹೀಗೆ ಇನ್ನೇನೋ ಸಮಸ್ಯೆಗಳ ಸುಳಿಯಲ್ಲಿ ರೈತ ನರಳುತ್ತಿದ್ದಾನೆ.ಡಾ.ಜಿ.ಕೆ.ರಮೇಶ್, 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ.
ಕನ್ನಡಿಗರು ಎಚ್ಚರದಿಂದಿರಬೇಕುಕನ್ನಡಿಗರು ಅತ್ಯಂತ ಎಚ್ಚರದಿಂದ ಇರಬೇಕಾದ ಸಂದರ್ಭ ಬಂದಿದೆ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಇಲ್ಲಿನ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ. ನಾವು ಈಗ ಸಾಮಾಜಿಕ ಜಾಲತಾಣದ ಲೋಕದಲ್ಲಿದ್ದೇವೆ. ಕೋಟಿ ಕೋಟಿ ಭಾರತದ ಜನರು ಸಾಮಾಜಿಕ ಜಾಲತಾಣಕ್ಕೆ ದಾಸರಾಗಿದ್ದಾರೆ. ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ನಾವೀಗ ಕಾಲಿಟ್ಟಿದ್ದೇವೆ. ದೃಶ್ಯ ಮಾಧ್ಯಮಗಳು ನಮ್ಮನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹೊರಟಿವೆ ಎಂದು ಕಳವಳ ವ್ಯಕ್ತಪಡಿಸಿದರು.ಪರಿಷತ್ ಚಟುವಟಿಕೆಗೆ ₹5 ಲಕ್ಷ ನೆರವು
ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪರಿಷತ್ ಕಟ್ಟಡದ ಮುಂದುವರಿದ ಕಾಮಗಾರಿಗಳಿಗಾಗಿ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ನೀಡುವುದರ ಜತೆಗೆ ವೈಯಕ್ತಿಕವಾಗಿ 5 ಲಕ್ಷ ರು. ಅನ್ನು ಪರಿಷತ್ ಚಟುವಟಿಕೆಗಳಿಗಾಗಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕನ್ನಡಿಗರ ಹೆಮ್ಮೆಯ ಅಸ್ಮಿತತೆಯ ಪ್ರತೀಕವಾಗಿರುವ ಹಾಗೂ ಕನ್ನಡಿಗರ ಪ್ರಾತಿನಿಧಿಕ ಏಕೈಕ ಸಂಸ್ಥೆಯಾಗಿರುವ ಸಾಹಿತ್ಯ ಪರಿಷತ್ತು ಕನ್ನಡದ ಉಳಿವು, ವಿಕಾಸದ ಕುರಿತು ನಿರಂತರ ಕಾರ್ಯಕ್ರಮಗಳನ್ನು ಆಯೋಜನೆಗೆ ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.