ಸ್ಮಶಾನ ಮಂಜೂರು ಮಾಡಲು ಸತಾಯಿಸುತ್ತಿರುವ ಅಧಿಕಾರಿಗಳು, ಗ್ರಾಮಸ್ಥರ ಆಕ್ರೋಶ

| Published : Oct 29 2024, 01:01 AM IST

ಸ್ಮಶಾನ ಮಂಜೂರು ಮಾಡಲು ಸತಾಯಿಸುತ್ತಿರುವ ಅಧಿಕಾರಿಗಳು, ಗ್ರಾಮಸ್ಥರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮಸ್ಥರು ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ,

ಕನ್ನಡಪ್ರಭ ವಾರ್ತೆ ಹ್ಯಾಂಡ್ ಪೋಸ್ಟ್ ಸರ್ಕಾರ ಆದೇಶವಿದ್ದರೂ ಸ್ಮಶಾನ ಮಂಜೂರು ಮಾಡಲು ಅಧಿಕಾರಿಗಳು ಅವರಿವರ ಮೇಲೆ ಕೇಳಿಕೊಂಡು ಸತಾಯಿಸುತ್ತಿರುವ ಘಟನೆ ಎಚ್.ಡಿ. ಕೋಟೆ ತಾಲೂಕಿನ ಯರಹಳ್ಳಿಯಲ್ಲಿ ನಡೆದಿದೆ.ಗ್ರಾಮಸ್ಥರು ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಸುಮಾರು ಒಂದು ವರ್ಷಗಳ ಹಿಂದೆ ಸರ್ಕಾರದಿಂದ ಸ್ಮಶಾನ ಮಂಜೂರು ಮಾಡುವಂತೆ ನೆರಹಳ್ಳಿ ಗ್ರಾಮಸ್ಥರು ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಅದರ ಪ್ರಕಾರ ಅಧಿಕಾರಿಗಳು ಯರಹಳ್ಳಿ ಸರ್ವೇ ನಂಬರ್ 75 ರಲ್ಲಿ 30 ಗುಂಟೆ ಸರ್ಕಾರಿ ಭೂಮಿಯನ್ನು ಗುರುತಿಸಿ ಇದಕ್ಕೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳ ವರದಿ, ಆರ್ಐ ವರದಿ, ತಹಸೀಲ್ದಾರ್ ಅವರ ಆದೇಶವನ್ನು ಪಡೆದುಕೊಂಡು ಹುಣಸೂರು ಉಪ ವಿಭಾಗಾಧಿಕಾರಿಗಳಿಗೆ ಜು. 26ರಂದು ಉಪವಿಗಾಧಿಕಾರಿಗಳ ಆದೇಶಕ್ಕೆ ಕಳಿಸಿರುತ್ತಾರೆ. ಆದರೆ ಸ್ಮಶಾನ ಫೈಲ್ ನಲ್ಲಿ ಅಧಿಕಾರಿಗಳು ವರದಿ ಮಾಡುವ ಮಾಡಿ ಚೆಕ್ ಬಂಧಿಯನ್ನು ಹಾಕಿರುವುದಿಲ್ಲ, ಆದ್ದರಿಂದ ಈ ಫೈಲ್ ಅನ್ನು ವಾಪಸ್ ಎಚ್.ಡಿ. ಕೋಟೆ ಕಂದಾಯ ಇಲಾಖೆಗೆ ವಾಪಸ್ ಕಳಿಸಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಉಪವಿಭಾಗ ಅಧಿಕಾರಿಗಳು ಹಲವರ ಕಚೇರಿಗೆ ಗ್ರಾಮಸ್ಥರು ಭೇಟಿ ನೀಡಿ ವಿಚಾರಿಸಿದರೆ, ಕಂದಾಯ ಅಧಿಕಾರಿಗಳು ಹಾಕಿರುವುದಿಲ್ಲ, ಆದ್ದರಿಂದ ವಾಪಸ್ ಕಳಿಸಿರುತ್ತೇವೆ ಎಂದು ತಿಳಿಸಿದ್ದಾರೆ.ತಹಸೀಲ್ದಾರ್ ಶ್ರೀನಿವಾಸ್ ಅವರನ್ನು ಯರಹಳ್ಳಿ ಗ್ರಾಮಸ್ಥರು ಭೇಟಿ ಮಾಡಿ ವಿಚಾರಿಸಿದಾಗ ಅವರು ಚೆಕ್ ಬಂಧಿ ಹಾಕಿರುವುದಿಲ್ಲ ರೆಡಿ ಮಾಡಿ ಉಪವಿಭಾಗ ಅಧಿಕಾರಿಗಳಿಗೆ ಕಳಿಸಲು ತಿಳಿಸಿದ್ದೇನೆ ಎಂದು ಹೇಳುತ್ತಾರೆ. ಇದರ ಬಗ್ಗೆ ತಾಲೂಕು ಸರ್ವೆ ಶಂಭುಲಿಂಗ ಅವರನ್ನು ವಿಚಾರಿಸಿದರೆ ಅವರು ಸರ್ವೆ ನಂಬರ್ 75 ರಲ್ಲಿ ಸ್ಮಶಾನಕ್ಕೆ 30 ಗುಂಟೆ ಗುರುತಿಸಿದ್ದು, ಇದರ ಪಕ್ಕದಲ್ಲಿ ಗ್ರಾಮದವರು ಮನೆ ನಿರ್ಮಿಸಿದ್ದಾರೆ, ಅವರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪಕ್ಕದಲ್ಲಿ ಯರಹಳ್ಳಿ ಗ್ರಾಮದವರು ಜಮೀನು ಮಾಡುತ್ತಿದ್ದು, ಅವರಿಬ್ಬರ ಜೊತೆ ಮಾತನಾಡಿ ಜಾಗ ಬದಲಾವಣೆ ಮಾಡಿಸಿಕೊಂಡು ಮಾಡುತ್ತೇನೆ ಎಂದು ದೂರಿದ್ದಾರೆ. ಆರ್ಐ ವಿಶ್ವನಾಥ್ ಅವರನ್ನು ವಿಚಾರಿಸಿದರೆ ಫೈಲ್ ನಾಳೆ ಕಳಿಸುತ್ತೇವೆ ಎಂದು ಸಬೂಬು ಹೇಳುತ್ತಾರೆ. ಇದರಿಂದ ಗ್ರಾಮಸ್ಥರು ಕಂಗಲಾಗಿದ್ದಾರೆ ಆದ್ದರಿಂದ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಒಂದು ವಾರದೊಳಗೆ ಏನಾದರೂ ಸ್ಮಶಾನ ಮಂಜೂರು ಮಾಡಿಸಿಕೊಳ್ಳದಿದ್ದರೆ ಯಾರಾದರೂ ಮರಣ ಹೊಂದಿದರೆ ಶವ ಇಟ್ಟಿಕೊಂಡು ಗ್ರಾಮಸ್ಥರು ಮತ್ತು ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.