ರಾಜ್ಯದ ೧೪ ಜಿಲ್ಲೆಗಳು ನನ್ನ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ, ಜನಸಾಮಾನ್ಯರು ನನ್ನನ್ನು ಭೇಟಿ ಮಾಡಲು ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಲು ನಾನೇ ಪ್ರತಿಯೊಂದು ಜಿಲ್ಲೆ ತಾಲೂಕುಗಳಿಗೆ ಬಂದು ಸಾರ್ವಜನಿಕರ ಕೆಲಸಗಳು ವಿವಿಧ ಇಲಾಖೆಗಳಲ್ಲಿ ಬಾಕಿಯಿರುವುದನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ

ಕನ್ನಡಪ್ರಭ ವಾರ್ತೆ ಮುಳಬಾಗಿಲುದೇಶಕ್ಕೆ ಸ್ವಾತಂತ್ರ್ಯ ಬಂದು ೭೯ ವರ್ಷವಾಗುತ್ತಿದ್ದರು ಜನತೆ ತಮ್ಮ ಹಕ್ಕುಗಳಿಗೆ ಹೋರಾಟ ನಡೆಸುವ ಪರಿಸ್ಥಿತಿ ಜೀವಂತವಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಆತಂಕ ವ್ಯಕ್ತಪಡಿಸಿದರು.ನಗರದ ಇಂಡಿಯನ್ ಪ್ಯಾಲೇಸ್‌ನಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಂವಿಧಾನದಡಿ ನಾವೆಲ್ಲರೂ ಸಮಾನರು. ಗೌರವದಿಂದ ಬದುಕಬೇಕೆಂದು ಹೇಳಿದರು.ಜಿಲ್ಲೆ, ತಾಲೂಕಿಗೆ ಭೇಟಿ

ರಾಜ್ಯದ ೧೪ ಜಿಲ್ಲೆಗಳು ನನ್ನ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ, ಜನಸಾಮಾನ್ಯರು ನನ್ನನ್ನು ಭೇಟಿ ಮಾಡಲು ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಲು ನಾನೇ ಪ್ರತಿಯೊಂದು ಜಿಲ್ಲೆ ತಾಲೂಕುಗಳಿಗೆ ಬಂದು ಸಾರ್ವಜನಿಕರ ಕೆಲಸಗಳು ವಿವಿಧ ಇಲಾಖೆಗಳಲ್ಲಿ ಬಾಕಿಯಿರುವುದನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ದಾಳಿ ನಡೆಸಿ ಬಾಕಿ ಕಡತಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಂಡಿದೆ, ಸಮಪಾಲು ಸಮಬಾಳು ಪ್ರತಿಯೊಬ್ಬ ಪ್ರಾಣಿ ಪಕ್ಷಿ ಗೌರವದಿಂದ ಬದುಕಬೇಕು, ಸಂವಿಧಾನ ನೀಡಿರುವ ಕರ್ತವ್ಯ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ತಾಕೀತು ಮಾಡಿದರು.ಲೋಕಾಯುಕ್ತ ಉತ್ತಮ ನಿರ್ವಹಣೆ

ಭಾರತ ದೇಶದಲ್ಲಿ ಹಿಮಾಚಲ ಪ್ರದೇಶ ಬಿಟ್ಟರೆ ಕರ್ನಾಟಕ ಲೋಕಾಯುಕ್ತ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ, ದೇಶದಲ್ಲಿ ಎಲ್ಲಾ ಅಧಿಕಾರಿಗಳು ಒಳ್ಳೆಯವರು ಅಲ್ಲ ಕೆಟ್ಟವರು ಅಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಒಳ್ಳೆಯವರ ಸಂಖ್ಯೆ ಕಡಿಮೆ ಆಗುತ್ತಿದೆ, ಸಂಘ ಸಂಸ್ಥೆಗಳು ಸಹ ಅಷ್ಟೇ ಎಂದರಲ್ಲದೆ ಕೆಲವರು ಸಮಾಜಘಾತಕರು ಒಳ್ಳೆಯ ಅಧಿಕಾರಿಗಳಿಗೆ ಹಿಂಸಿಸಿ ಬೆದರಿಸುತ್ತಿದ್ದಾರೆ ಎಂದರು.

ಅಧಿಕಾರಿಗಳಿಂದ ರೋಲ್‌ಕಾಲ್‌ಗೆ ಒತ್ತಡ ಹಾಕುತ್ತಿದ್ದಾರೆ. ಪ್ರೆಸ್ ಎಂದು ಹೇಳಿಕೊಂಡು ಅಧಿಕಾರಿಗಳ ಬಳಿ ಬ್ಲಾಕ್ಲ್‌ಮೇಲ್ ಮಾಡಿ ರೋಲ್‌ಕಾಲ್ ಇಳಿದಿದ್ದಾರೆ ಇದಕ್ಕೆಲ್ಲ ಅಧಿಕಾರಿಗಳು ಹೆದರಬೇಡಿ, ಸೈನಿಕರು ತಮ್ಮ ಪ್ರಾಣ ಅಂಗೈಯಲ್ಲಿಟ್ಟುಕೊಂಡು ದೇಶದ ರಕ್ಷಣೆಗೆ ಕಾವಲು ಕಾಯುತ್ತಿದ್ದಾರೆ ಹೀಗಿರುವಾಗ ನೀವ್ಯಾಕೆ ಹೆದರುತ್ತೀರಿ ಪ್ರಶ್ನಿಸಿದ ಅವರು, ನಿಷ್ಠಾವಂತ ಅಧಿಕಾರಿಗಳಿಗೆ ತೊಂದರೆಯಾಗಲು ನಾನು ಬಿಡೋಲ್ಲ ಸುಳ್ಳು ಕೇಸುಗಳನ್ನು ಹಾಕಿದರೆ ನಾನು ಸುಮ್ಮನಿರಲ್ಲ ಎಂದು ಗುಡುಗಿದರು.೨೫,೦೦೦ ಪ್ರಕರಣ ಬಾಕಿ

ರಾಜ್ಯದಲ್ಲಿ ೨೫,೦೦೦ ಪ್ರಕರಣಗಳು ಬಾಕಿ ಉಳಿದಿದ್ದು ತ್ವರಿತವಾಗಿ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗಿದೆ, ಇತ್ತೀಚಿಗೆ ಸುಳ್ಳು ದೂರುಗಳೇ ಜಾಸ್ತಿಯಾಗಿದ್ದು ಸಮಾಜ ಬದಲಾಗಬೇಕಾದರೆ ರಾಜಕಾರಣಿಗಳಿಂದ ಹಣ ಪಡೆದು ಮತ ಚಲಾಯಿಸುವುದು ಎಲ್ಲಿವರೆಗೂ ಮುಂದುವರೆಯುತ್ತದೆಯೋ ಅಲ್ಲಿವರೆಗೂ ಈ ದೇಶ ಉದ್ದಾರವಾಗೋಲ;ಲವೆಂದು ಅಭಿಪ್ರಾಯಪಟ್ಟರು.ರಾಜ್ಯದ ೧೭೦ ತಾಲೂಕುಗಳಲ್ಲಿ ಸುಮೋಟೋ ಕೇಸ್‌ಗಳನ್ನು ದಾಖಲಿಸಿದ್ದೇನೆ ೧೫೦ ಜನ ಸ್ವಾತಂತ್ರ ಹೋರಾಟಗಾರರಿಗೆ ಮಾಸಾಸನ ಕೊಡಿಸಿದ್ದೇನೆ ಶಾಲಾ ಬಸ್‌ಗಳಿಗೆ ವಿಮೆ ಮತ್ತು ಎಫ್‌ಸಿ ಇತರೆ ದಾಖಲೆಗಳನ್ನು ಕೊಡಿಸಿದ್ದೇನೆ, ಅಧಿಕಾರಗಳನ್ನು ಯಾರಾದರೂ ಹಣಕ್ಕಾಗಿ ಬೆದರಿಸಿ ಬ್ಲಾಕ್‌ಮೇಲ್ ಮಾಡಿದರೆ ಆರು ತಿಂಗಳಿಂದ ಮೂರು ವರ್ಷ ಜೈಲಿಗೆ ಕಳಿಸುತ್ತೇನೆ ಎಂದು ಎಚ್ಚರಿಸಿದರು.ಗಿಂಬಳ ಸರಿಯಲ್ಲ:

ಜಲ್ಲಿ ಕ್ರಷರ್‌ಗಳನ್ನು ಕಾನೂನು ಪ್ರಕಾರ ನಡೆಸಿ ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ, ಅಧಿಕಾರಿಗಳು ಅವರವರ ಸಂಬಳದಲ್ಲಿ ಜೀವನ ನಡೆಸಿದರೆ ಚೆನ್ನಾಗಿರುತ್ತದೆ ಗಿಂಬಳ ಸರಿಯಲ್ಲ ಎಂದು ಕಿವಿಮಾತು ಹೇಳಿದರು. ಈಗಾಗಲೇ ಸಾರ್ವಜನಿಕರು ವಿವಿಧ ಇಲಾಖೆಗಳಲ್ಲಿ ಅವರವರ ಕೆಲಸಗಳಿಗೆ ಅರ್ಜಿ ನೀಡಿರುವ ಕುರಿತು ದೂರುದಾರರು ಮತ್ತು ಅಧಿಕಾರಗಳ ವಿಚಾರಣೆ ನಡೆಸಿ ತ್ವರಿತ ಇತ್ಯರ್ತಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಎಂ.ಆರ್.ರವಿ, ಎಸ್‌ಪಿ ಬಿ.ನಿಖಿಲ್, ಜಿಪಂ ಸಿಇಓ ಪ್ರವೀಣ್ ಬಾಗೇವಾಡಿ, ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್, ಎಸಿ ಮೈತ್ರಿ, ನ್ಯಾಯಾಧೀಶರಾದ ಅರವಿಂದ್, ನಟೇಶ್, ತಹಸೀಲ್ದಾರ್ ವಿ.ಗೀತಾ, ಎಎಸ್‌ಪಿ ಮನೀಷಾ, ತಾ.ಪಂ ಇಒ ರವಿಚಂದ್ರ, ನಗರಸಭೆ ಪೌರಾಯುಕ್ತ ವಿ.ಶ್ರೀಧರ್ ಇದ್ದರು.