ಬ್ರಾಹ್ಮಣ ಸಮಾಜದ ಸಾಮಾಜಿಕ ಕಾರ್ಯ ಶ್ಲಾಘನೀಯ

| Published : Jan 21 2025, 12:31 AM IST

ಬ್ರಾಹ್ಮಣ ಸಮಾಜದ ಸಾಮಾಜಿಕ ಕಾರ್ಯ ಶ್ಲಾಘನೀಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ವಿಶ್ವಕ್ಕೆ ಧರ್ಮ ಮತ್ತು ಸಂಸ್ಕಾರದ ಬೋಧನೆ ಮಾಡುವ ಮೂಲಕ ಎಲ್ಲರೂ ಗೌರವದಿಂದ ಸಹೋದರತೆಯಿಂದ ಬದುಕುವಂತೆ ಪ್ರೇರೆಪಿಸುವಲ್ಲಿ ಬ್ರಾಹ್ಮಣ ಸಮಾಜದ ಸಾಮಾಜಿಕ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ವಿಶ್ವಕ್ಕೆ ಧರ್ಮ ಮತ್ತು ಸಂಸ್ಕಾರದ ಬೋಧನೆ ಮಾಡುವ ಮೂಲಕ ಎಲ್ಲರೂ ಗೌರವದಿಂದ ಸಹೋದರತೆಯಿಂದ ಬದುಕುವಂತೆ ಪ್ರೇರೆಪಿಸುವಲ್ಲಿ ಬ್ರಾಹ್ಮಣ ಸಮಾಜದ ಸಾಮಾಜಿಕ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅಭಿಪ್ರಾಯಪಟ್ಟರು.

ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿ ವಿಪ್ರ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ಶಿವ ಚಿದಂಬರೇಶ್ವರ, ಗಜಾನನ, ಆಂಜನೇಯ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಾನವ ಕಲ್ಯಾಣಕ್ಕಾಗಿ ಧರ್ಮವನ್ನು ಉಳಿಸಿ ಬೆಳೆಸಬೇಕಾದರೇ ಬ್ರಹ್ಮನನ್ನೇ ಗೆದ್ದವರು ಎಂದರೆ ಬ್ರಾಹ್ಮಣರು ಎಂದು ಉಲ್ಲೇಖಿಸಬಹುದು. ಸಕಲ ವೇದಗಳನ್ನು ಪಾಂಡಿತ್ಯವನ್ನು ಬಲ್ಲವರು ಎಂದರ್ಥ. ಈ ಸಮಾಜದ ಒಳಿತಿಗಾಗಿ ತಮ್ಮ ಮನೆ ಕುಟುಂಬವನ್ನು ತ್ಯಾಗ ಮಾಡಿ ಶಾಂತಿಯ ಮಂತ್ರ ಜಪಿಸುವುದು ಸಾಮಾನ್ಯದ್ದಲ್ಲ. ಮುದ್ದೇಬಿಹಾಳ ಪಟ್ಟಣದ ಬ್ರಾಹ್ಮಣ ಸಮಾಜದ ಮುಖಂಡರು ಒಗ್ಗಟ್ಟಾಗಿ ಶಿವ ಚಿದಂಬರೇಶ್ವರ, ಗಜಾನನ, ಆಂಜನೇಯ ನೂತನ ದೇವಸ್ಥಾನ ನಿರ್ಮಿಸಿ ಭಕ್ತಿ ಮೆರೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂಬರುವ ದಿನಗಳಲ್ಲಿ ಈ ಸಮಾಜದ ದೇವಸ್ಥಾನಕ್ಕೆ ನಮ್ಮ ಸರ್ಕಾರದಿಂದ ವಿಶೇಷ ಅನುದಾನ ಕೊಡಿಸುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಬ್ರಾಹ್ಮಣ ಸಮಾಜ ಜಗತ್ತಿಗೆ ಲೇಸು ಬಯಸಿ ಪ್ರಾರ್ಥಿಸುವ ಮೂಲಕ ಸನಾತನ ಧರ್ಮದ ಕುರಿತು ಎಲ್ಲ ವರ್ಗದವರಿಗೂ ಉಪದೇಶಿಸುವುದರೊಂದಿಗೆ ಬುದ್ದಿವಂತಿಕೆ ಹಾಗೂ ದೂರದೃಷ್ಠಿಯಿಂದ ದೇಶದಕ್ಕೋಸ್ಕರ ಕೊಡುಗೆಗಳನ್ನು ನೀಡಿದೆ ಎಂದರು.

ಹುಣಸಿಹೊಳೆ ಕಣ್ವಮಠದ ಪೀಠಾಧಿಪತಿ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳು, ಮುರುಗೋಡದ ಧಿವಾಕರ ದಿಕ್ಷೀತ, ಶಂಕರ ದಿಕ್ಷೀತ ಇನಾಮದಾರ, ಲೋಕಾಪುರದ ಜ್ಞಾನೇಶ್ವರ ಮಠದ ಶ್ರೀ ಬ್ರಹ್ಮಾನಂದ ಶ್ರೀ, ಅಗಡಿ ಆನಂದವನ ಕ್ಷೇತ್ರದ ಗುರುದತ್ತ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ಎಂ.ಬಿ.ನಾವದಗಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಮುಖಂಡರಾದ ಬಿ ಪಿ ಕುಲಕರ್ಣಿ, ಸತೀಶ ಕುಲಕರ್ಣಿ, ಸಿ ಬಿ ಅಸ್ಕಿ, ಶರಣು ಸಜ್ಜನ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿ ಎನ್ ಕುಲಕರ್ಣಿ, ಬಾಪುರಾಯ ದೇಸಾಯಿ, ಗುಂಡಭಟ್ಟ ಬೋಲಿ, ಡಿ ಜಿ ಕುಲಕರ್ಣಿ, ಸವರ್ವೋತ್ತಮ ದೇಶಪಾಂಡೆ, ಶೇಷಗೀರಿರಾವ ದೇಸಾಯಿ, ವಿನಾಯಯಕರಾಮ ಕುಲಕರ್ಣಿ, ಚಂದ್ರಕಾಂತ ಕುಲಕರ್ಣಿ, ಪ್ರಧೀಪ ಕುಲಕರ್ಣಿ, ಅನೀಲ ಕುಲಕರ್ಣಿ, ರಮಮೇಶ ಜೋಷಿ, ಎಲ್ ಎಸ್ ದೇಶಪಾಂಡೆ, ಪ್ರಮೋದರಾವ ಕುಲಕರ್ಣಿ,ಪುಟ್ಟು ಕುಲಕರ್ಣಿ, ಗುರುರಾಜ ಕುಲಕರ್ಣಿ, ಆನಂದ ಜಂಬ ಗಿ, ಶ್ರೀನಿವಾಸ ಸಾಲೋಟಗಿ ಸೇರಿದಂತೆ ಹಲವರು ಇದ್ದರು.