ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಡಾನ್ ಬಾಸ್ಕೋ ಕಾಲೇಜಿನಲ್ಲಿ ಸರ್ಕಾರದ ಹಲವು ಇಲಾಖೆಗಳಗೆ ಸಂಬಂಧಿಸಿದ ಸಮಸ್ಯೆಗಳಿಗೆ ವಿದ್ಯಾರ್ಥಿಗಳಿಂದಲೇ ಪರಿಹಾರ ಹುಡುಕುವ ಮೂಲಕ ಅವರನ್ನು ಉದ್ಯಮಿ ಅಥವಾ ಸಂಶೋಧಕರಾಗಿ ರೂಪುಗೊಳ್ಳುವಂತೆ ಮಾಡಲಾಗುತ್ತಿದೆ ಎಂದು ಡಾನ್ ಬಾಸ್ಕೋ ಕಾಲೇಜ್ ಪ್ರಾಂಶುಪಾಲ ಡಾ.ಬಿ.ಎಸ್.ನಾಗಭೂಷಣ್ ತಿಳಿಸಿದರು.ನಗರದ ಮೈಸೂರು ರಸ್ತೆಯಲ್ಲಿರುವ ಡಾನ್ ಬಾಸ್ಕೋ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ಕಾಲೇಜು ಮಟ್ಟದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2024 ತಂತ್ರಾಂಶ ಆವಿಷ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕ್ಷಮತೆ, ಜ್ಞಾನ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಅವಕಾಶ ಕಲ್ಪಿಸಲಾಗಿದೆ. ನಾವೀನ್ಯತೆ ವಿಭಾಗದಲ್ಲಿ ತಮ್ಮದೇ ಆದ ಆಲೋಚನೆಗಳನ್ನು ಯೋಜನೆ ಮೂಲಕ ಸಲ್ಲಿಸಲು ಅವಕಾಶವಿದೆ. ಸಚಿವಾಲಯ, ಇಲಾಖೆಗಳು ಹಾಗೂ ಕೈಗಾರಿಕೆಗಳು ನೀಡಿದ ವಿಷಯಗಳ ಮೇಲೆ ಜಲ ಶಕ್ತಿ ನೈರ್ಮಲ್ಯ, ಸ್ವಚ್ಚತೆ, ಉನ್ನತಿಕರಣ ವಿಷಯಾಧಾರಿತ ಕುರಿತು ಯೋಜನೆ ರೂಪಿಸಲು 16 ತಂಡಗಳನ್ನು ರಚಿಸಿದ್ದು, 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಎಐಸಿಟಿಇ ನಿರ್ದೇಶಕ ನರೇಶ್ ಕುಮಾರ್ ಗ್ರೋವರ್ ಅವರು ಉದ್ಘಾಟಿಸಿದರು. ನಾವೀನ್ಯತೆ ಅಧಿಕಾರಿ ಪೂಜಾ ರಾವತ್, ಐಐಸಿ ನೋಡೆಲ್ ಅಧಿಕಾರಿ ಡಿಕಿನ್ ಡ್ಯಾನಿ, ವಯನಮಾಕ್ ಸಂಸ್ಥೆಯ ಅಧ್ಯಕ್ಷ ಬೈರಪ್ಪ, ಉಪಾಧ್ಯಕ್ಷ ಬಿ.ಮಂಜುನಾಥ್, ಕಾರ್ಯದರ್ಶಿ ರಾಘವ ಬೈಲಪ್ಪ, ಡಾ.ಕೆ.ಆರ್.ನಟರಾಜ್, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರಧಾನಿ ಮೋದಿ ಕನಸಿನ ಕೂಸು: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಕಾರ್ಯಕ್ರಮದ ಏಳನೇ ಗ್ರ್ಯಾಂಡ್ ಫಿನಾಲೆ ರಾಷ್ಟ್ರವ್ಯಾಪಿ 17ವಿಷಯಗಳ ಕುರಿತು 51ನೊಡೆಲ್ ಸೆಂಟ್ರಲ್‌ನಲ್ಲಿ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಹಾಗೂ ಎಐಸಿಟಿಇ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೆಹಲಿಯಲ್ಲಿ ಉದ್ಘಾಟಿಸಿದರು.