ಬಾವಿಗೆ ಬಿದ್ದಿದ್ದ ನರಿ ರಕ್ಷಿಸಿದ ಸಿಬ್ಬಂದಿ

| Published : Apr 28 2024, 01:15 AM IST

ಸಾರಾಂಶ

ದೇವರಹಿಪ್ಪರಗಿ: ಆಯತಪ್ಪಿ ನೂರು ಅಡಿ ಆಳದ ಬಾವಿಯಲ್ಲಿ ಬಿದ್ದಿದ್ದ ನರಿಯನ್ನು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ತಾಲೂಕಿನ ಕೆರೂಟಗಿ ಗ್ರಾಮದ ಸಿದ್ರಾಮಪ್ಪ ಬಿರಾದಾರ ಅವರ ತೋಟದ ಬಾವಿಯಲ್ಲಿ ನರಿ ಬಿದ್ದಿರುವುದನ್ನು ಗುರುವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ತಿಳಿಸಿದ್ದರು.

ದೇವರಹಿಪ್ಪರಗಿ: ಆಯತಪ್ಪಿ ನೂರು ಅಡಿ ಆಳದ ಬಾವಿಯಲ್ಲಿ ಬಿದ್ದಿದ್ದ ನರಿಯನ್ನು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ತಾಲೂಕಿನ ಕೆರೂಟಗಿ ಗ್ರಾಮದ ಸಿದ್ರಾಮಪ್ಪ ಬಿರಾದಾರ ಅವರ ತೋಟದ ಬಾವಿಯಲ್ಲಿ ನರಿ ಬಿದ್ದಿರುವುದನ್ನು ಗುರುವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ತಿಳಿಸಿದ್ದರು.ಕೂಡಲೇ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಬಾವಿಯಲ್ಲಿದ್ದ ನರಿ ರಕ್ಷಿಸಲು ರಕ್ಷಣಾ ಕಾರ್ಯ ನಡೆಯಿತು. ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಬಾವಿಯಿಂದ ಸುರಕ್ಷಿತವಾಗಿ ನರಿಯನ್ನು ಜೀವಂತವಾಗಿ ರಕ್ಷಿಸಿ ಇಲಾಖೆಗೆ ಒಪ್ಪಿಸುವ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು.

ರಕ್ಷಣಾ ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ರಾಜು ಬಿರಾದಾರ, ಉಪವಲಯ ಅರಣ್ಯ ಅಧಿಕಾರಿ ಎಸ್.ಎಸ್.ಬಿರಾದಾರ, ಗಸ್ತು ಅರಣ್ಯ ಪಾಲಕ ಎಂ.ಬಿ.ಕಂಟಿಕರ, ಅಗ್ನಿಶಾಮಕ ದಳದ ಅಧಿಕಾರಿಗಳಾದ ಮಚೇಂದ್ರ, ಮಾಂತೇಶ, ವಿ.ಟಿ.ಪರಸಪ್ಪಗೋಳ, ಎಸ್.ಎಸ್.ಮಠ, ಸಿದ್ದಣ್ಣ ರೋಡಗಿ, ಅಶೋಕ ರಾಠೋಡ, ಸಂತೋಷ ರಾಠೋಡ, ಶ್ರೀಧರ ರತ್ನಪ್ಪಗೋಳ ಸೇರಿದಂತೆ ಗ್ರಾಮಸ್ಥರು ಇದ್ದರು.