ಬಾಳೆಹೊನ್ನೂರ ರಾಜ್ಯ ಕಾಂಗ್ರೆಸ್ ನಾಯಕರು ನಾಟಕವಾಡುತ್ತಿದ್ದು, ಜನಾದೇಶ ದಿಕ್ಕರಿಸಿದ್ದಾರೆ. ಜನಾದೇಶಕ್ಕೆ ಬೆಲೆ ಕೊಟ್ಟಿಲ್ಲ. ಅವರಿಗೆ ನೈತಿಕತೆ ಇಲ್ಲ. ಇದೊಂದು ಭ್ರಷ್ಟ, ಲಜ್ಜೆಗೆಟ್ಟ, ಮರ್ಯಾದೆಯಿಲ್ಲದ ದೇಶದಲ್ಲಿರುವ ಏಕೈಕ ಸರ್ಕಾರ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
ರಂಭಾಪುರಿ ಪೀಠದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರರಾಜ್ಯ ಕಾಂಗ್ರೆಸ್ ನಾಯಕರು ನಾಟಕವಾಡುತ್ತಿದ್ದು, ಜನಾದೇಶ ದಿಕ್ಕರಿಸಿದ್ದಾರೆ. ಜನಾದೇಶಕ್ಕೆ ಬೆಲೆ ಕೊಟ್ಟಿಲ್ಲ. ಅವರಿಗೆ ನೈತಿಕತೆ ಇಲ್ಲ. ಇದೊಂದು ಭ್ರಷ್ಟ, ಲಜ್ಜೆಗೆಟ್ಟ, ಮರ್ಯಾದೆಯಿಲ್ಲದ ದೇಶದಲ್ಲಿರುವ ಏಕೈಕ ಸರ್ಕಾರ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯನವರಾಗಿದ್ದಾರೆ. ಇವರು ಈ ಹಿಂದೆ ಏನೆಲ್ಲಾ ಸುಳ್ಳು ಹೇಳಿ, ಬಿಜೆಪಿ ಪಾರ್ಟಿ ಹಾಗಾಯಿತು ಹೀಗಾಯಿತು ಎಂದು ಹೇಳಿ ಶೇ.40 ಪರ್ಸೆಂಟ್ ಗೂಬೆ ಕೂರಿಸಿ, ಕೋಟ್ಯಾಂತರ ರು. ತನಿಖಾ ಸಮಿತಿಗಳಿಗೆ ಖರ್ಚು ಮಾಡಿದರೂ ಸಹ ಒಂದೇ ಒಂದು ವರದಿ ಮಂಡನೆ ಮಾಡಲಾಗಿಲ್ಲ ಎಂದು ರಂಭಾಪುರಿ ಪೀಠದಲ್ಲಿ ಸುದ್ದಿಗಾರರಿಗೆ ಹೇಳಿದರು.ಇಂದು ರಾಜ್ಯದಲ್ಲಿ ಶೇ.60, 70 ರಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಸಾರ್ವಜನಿಕ ಹಣ ತಿಂದು ತೇಗುತ್ತಿದ್ದಾರೆ. ಜನರ ಭಾವನೆ ಗಳಿಗೆ ಸ್ವಲ್ಪವೂ ಬೆಲೆ ಕೊಡದೆ ಇರುವ ಲಜ್ಜೆಗೆಟ್ಟ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ಇದರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ.
ಜನಾದೇಶಕ್ಕೆ ಇವರು ಯಾವಾಗ ಬೆಲೆ ಕೊಟ್ಟಿಲ್ಲವೋ ಜನರು ಇವರ ವಿರುದ್ಧ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಜಾಸ್ತಿ ದಿನ ಕಾಯುವುದು ಬೇಡ, ಕೆಲವೇ ದಿನಗಳಲ್ಲಿ ಸರ್ಕಾರ ಪತನವಾಗಲಿದೆ. ಇವರ ಪಾಪದ ಕೊಡ ತುಂಬಿ ಹೋಗಿದ್ದು, ಅದಕ್ಕೆ ಪ್ರಾಯಶ್ಚಿತವೂ ಆಗಬೇಕಿದೆ.ರಾಜ್ಯ ಸರ್ಕಾರಕ್ಕೆ ಆಡಳಿತ ನಡೆಸಬೇಕು ಎಂಬ ಮನಸ್ಸು ಇದ್ದರೆ, ರಾಜ್ಯ, ಜಿಲ್ಲೆ, ತಾಲೂಕು ಅಭಿವೃದ್ಧಿ ಯಾಗಬೇಕೆಂದಿದ್ದರೆ ಒಂದು ಹದಿನೈದು ದಿನ ನಮ್ಮ ನಾಯಕರಾದ ನರೇಂದ್ರ ಮೋದಿ ಆಡಳಿತದ ಕಾರ್ಯವೈಖರಿಯನ್ನು, ರಾಷ್ಟ್ರಕ್ಕೆ ಅವರು ಕೊಟ್ಟ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಎಂದು ನಾನು ನೂರು ಸಲ ಹೇಳಿದ್ದೇನೆ. ಬಂದು ನೋಡುವುದು ಇರಲಿ, ಅದನ್ನು ನೋಡಿ ಕಲಿತುಕೊಳ್ಳಲು ಇವರಿಗೆ ಯೋಗ್ಯತೆಯಿಲ್ಲ.
ಜನ ಯಾವ ರೀತಿ ತೊಂದರೆ ಅನುಭವಿಸಿದ್ದೇನೆ ಎಂಬುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಸಾವಿರಾರು ಜನ ತಿರುಗುವ ಪ್ರಸಿದ್ಧ ಯಾತ್ರಾ ಕ್ಷೇತ್ರ ರಂಭಾಪುರಿ, ಶೃಂಗೇರಿ ಪೀಠ, ಬೇರೆ ಬೇರೆ ಪವಿತ್ರ ಸ್ಥಳಗಳಿರುವ ರಸ್ತೆ ನೋಡಿದರೆ ನಮಗೆ ಬೇಜಾರಾಗುತ್ತದೆ. ಈ ಬಗ್ಗೆ ರಾಜೇಗೌಡರ ಬಳಿಯೂ ಹೇಳಿದ್ದು, ಇದನ್ನು ನ್ಯಾಷನಲ್ ಹೈವೇಗೆ ಸೇರಿಸಲು ಪತ್ರ ಕೇಳಿದ್ದೇನೆ ಎಂದರು.ಅಭಿವೃದ್ಧಿ ಅಂದರೆ ಮೋದಿಯವರು. ಅವರಲ್ಲಿನ ಒಂದೇ ಒಂದು ಗುಣ ಅಳವಡಿಸಿಕೊಂಡಿದ್ದರೆ ಇವರಿಗೆ ಗೌರವ ಸಿಗು ತಿತ್ತು. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಎಷ್ಟು ಜೋತು ಬೀಳಬಹುದು ಎಂಬುದಕ್ಕೆ ಸಾಕ್ಷಿ ಯಾಗಿದ್ದಾರೆ. ನಾನು, ಸಿದ್ದರಾಮಯ್ಯ ಒಟ್ಟಿಗೆ ಮಂತ್ರಿಗಳಾದವರು. ಇಷ್ಟೊಂದು ಬಲಹೀನ, ಲಫಂಗ, ಲಜ್ಜೆಗೆಟ್ಟ ಸರ್ಕಾರವನ್ನು ನಾನು ಎಲ್ಲೂ ನೋಡಿಲ್ಲ ನನ್ನ ಅನುಭವದಲ್ಲಿ. ಜನರಿಗೆ ತಕ್ಕ ಬುದ್ಧಿ ಕಲಿಸುತ್ತಾರೆ.
ಡಿಕೆಶಿ ಮುಖ್ಯಮಂತ್ರಿಯಾದರೆ ಬಿಜೆಪಿಯವರು ಕೈಜೋಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಏನಕ್ಕೆ ಬೇಕು ಇದೆಲ್ಲ. ಅವರನ್ನು ಕಟ್ಟಿಕೊಂಡು ನಾವು ಏನು ಮಾಡೋಣ? ಅವರಿಗೆ ಧೈರ್ಯವಿದ್ದರೆ ಜನಾದೇಶಕ್ಕೆ ಹೋಗೋಣ. ಧೈರ್ಯವಿದ್ದರೆ ಸರ್ಕಾರ ವಿಸರ್ಜನೆ ಮಾಡಲಿ. ಚುನಾವಣೆಗೆ ಹೋಗೋಣ. ಬಿಜೆಪಿ ಬಲಾಢ್ಯವಾಗಿದ್ದು, ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ನಾಯಕತ್ವದ ಮೇಲೆ ನಿಂತಿದೆ. ರಾಷ್ಟ್ರಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬುದು ನಮ್ಮ ಆಶಯ.ಜನ ಶಾಂತಿಯಿಂದ ಬದುಕಬೇಕು. ಬೇರೆ ಬೇರೆ ರಾಷ್ಟ್ರದ ನಾಯಕರು ಸಹ ವಿಶ್ವದಲ್ಲಿ ನಾಯಕರಿದ್ದರೆ ನರೇಂದ್ರ ಮೋದಿ ಯಂತಹ ನಾಯಕರು ಇರಬೇಕು ಎಂದು ಹೇಳುತ್ತಾರೆ. ಕಾಂಗ್ರೆಸ್ಸಿನ ಅವಶ್ಯಕತೆ ನಮಗಿಲ್ಲ. ಎಷ್ಟು ಬೇಗ ಈ ಸರ್ಕಾರ ತೊಲಗು ತ್ತೋ ಅಷ್ಟು ಬೇಗ ಜನರಿಗೆ ನೆಮ್ಮದಿ ಸಿಗಲಿದೆ. ಅತೀ ಹೆಚ್ಚು ಮಳೆ ರಾಜ್ಯದಲ್ಲಿ ಆಗಿದ್ದು, ಜನರ ಸತ್ತಿದ್ದಾರೋ, ಬದುಕಿ ದ್ದಾರೋ ಎಂದು ಕೇಳುವವರು ಇಲ್ಲ. ಸಾರ್ವಜನಿಕರು ತೆರಿಗೆ ರೂಪದಲ್ಲಿ ಕೊಡುವ ಹಣ ಮಜಾ ಮಾಡುತ್ತಿದ್ದಾರೆ. ಅವರಿಗೆ ಸ್ವಲ್ಪವಾದರೂ ಸ್ವಾಭಿಮಾನ, ಚಿಂತನೆ ಇದೆಯೇ ಎಂದು ಕೇಳಿದರು.೨೭ಬಿಹೆಚ್‌ಆರ್ ೪:
ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಆಗಮಿಸಿದ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.