ಶ್ರೀರಾಮನ ವಿಗ್ರಹ ಕೆತ್ತಿದ ಶಿಲೆಯಲ್ಲೇ ಕೊಪ್ಪಳದಲ್ಲಿ ಆಂಜನೇಯನ ಮೂರ್ತಿ

| Published : Jan 18 2024, 02:00 AM IST

ಶ್ರೀರಾಮನ ವಿಗ್ರಹ ಕೆತ್ತಿದ ಶಿಲೆಯಲ್ಲೇ ಕೊಪ್ಪಳದಲ್ಲಿ ಆಂಜನೇಯನ ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕಾಶ ಶಿಲ್ಪಿ ಬೇರೊಂದು ಮೂರ್ತಿಯನ್ನು ನಿರ್ಮಾಣ ಮಾಡಲು ಗುರುತಿಸಿದ್ದ ಶಿಲೆಯನ್ನು ನಂತರ ಶ್ರೀರಾಮನ ಬಾಲಮೂರ್ತಿ ಮಾಡಲು ತೆಗೆದುಕೊಂಡು ಹೋಗಲಾಯಿತು. ಖ್ಯಾತ ಶಿಲ್ಪಿ ಮೈಸೂರಿನ ಅರುಣ ಯೋಗಿರಾಜ್ ಇದೇ ಶಿಲೆಯಲ್ಲಿ ಕೆತ್ತಿದ ಮೂರ್ತಿ ಈಗ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.

ಕೊಪ್ಪಳ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಸ್ಥಾಪನೆಯಾಗಲಿರುವ ಬಾಲರಾಮನನ್ನು ಕೆತ್ತಿದ ಶಿಲೆಯ ಉಳಿದ ಭಾಗದ ಶಿಲೆಯಲ್ಲಿ ಆಂಜನೇಯನ ಮೂರ್ತಿ ಸಿದ್ಧವಾಗಲಿದೆ. ಎಚ್.ಡಿ. ಕೋಟೆಯಲ್ಲಿ ಉಳಿದಿದ್ದ ಶಿಲೆಯನ್ನು ಶಿಲ್ಪಿ ಪ್ರಕಾಶ ಕೊಪ್ಪಳಕ್ಕೆ ತರಲು ಬುಧವಾರ ಎಚ್.ಡಿ. ಕೋಟೆ ತಾಲೂಕಿನ ಹಾರೋಹಳ್ಳಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರಕಾಶ ಶಿಲ್ಪಿ ಬೇರೊಂದು ಮೂರ್ತಿಯನ್ನು ನಿರ್ಮಾಣ ಮಾಡಲು ಗುರುತಿಸಿದ್ದ ಶಿಲೆಯನ್ನು ನಂತರ ಶ್ರೀರಾಮನ ಬಾಲಮೂರ್ತಿ ಮಾಡಲು ತೆಗೆದುಕೊಂಡು ಹೋಗಲಾಯಿತು. ಖ್ಯಾತ ಶಿಲ್ಪಿ ಮೈಸೂರಿನ ಅರುಣ ಯೋಗಿರಾಜ್ ಇದೇ ಶಿಲೆಯಲ್ಲಿ ಕೆತ್ತಿದ ಮೂರ್ತಿ ಈಗ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.ಹೀಗಾಗಿ, ಈ ಶಿಲೆಯಲ್ಲಿ ಉಳಿದಿರುವ ಭಾಗದಲ್ಲಿ ಆಂಜನೇಯನ ಮೂರ್ತಿಯನ್ನು ಮಾಡಲು ಕೊಪ್ಪಳದ ಪ್ರಕಾಶ ಶಿಲ್ಪಿ ತೀರ್ಮಾನ ಮಾಡಿ, ಶಿಲೆಯನ್ನು ಕೊಪ್ಪಳಕ್ಕೆ ತರುತ್ತಿದ್ದಾರೆ. ಬಾಲರಾಮನಷ್ಟೇ ಎತ್ತರ ಆಂಜನೇಯನ ಮೂರ್ತಿಯನ್ನು ಮಾಡುವುದಾಗಿ ಶಿಲ್ಪಿ ತಿಳಿಸಿದ್ದಾರೆ.