ಸಾರಾಂಶ
ಗುಂಡ್ಲುಪೇಟೆ ಪಟ್ಟಣದ ಜೋಡಿ ರಸ್ತೆಗಳಲ್ಲಿ ಬೀದಿ ದೀಪಗಳಲ್ಲಿದೆ ಕಗ್ಗತ್ತಲಲ್ಲಿ ಮುಳುಗಿದ್ದ ರಸ್ತೆಯಲ್ಲಿ ಈಗ ಬೀದಿ ದೀಪಗಳು ಜಗಮಗಿಸುತ್ತಿವೆ. ಗುಂಡ್ಲುಪೇಟೆ ಪಟ್ಟಣದ ಜೋಡಿ ರಸ್ತೆಯಲ್ಲಿ ಬೀದಿ ದೀಪ ಉರಿಯುವ ಮೂಲಕ ಸಾರ್ವಜನಿಕರು, ವಾಯು ವಿಹಾರಿಗಳು, ಪಾದಚಾರಿಗಳು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರಿಗೆ ಧನ್ಯವಾದ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಜೋಡಿ ರಸ್ತೆಗಳಲ್ಲಿ ಬೀದಿ ದೀಪಗಳಲ್ಲಿದೆ ಕಗ್ಗತ್ತಲಲ್ಲಿ ಮುಳುಗಿದ್ದ ರಸ್ತೆಯಲ್ಲಿ ಈಗ ಬೀದಿ ದೀಪಗಳು ಜಗಮಗಿಸುತ್ತಿವೆ.ಸ್ವಾತಂತ್ರ್ಯ ಮಹೋತ್ಸವ ಹಾಗೂ ವರ ಮಹಾಲಕ್ಷ್ಮಿ ಹಬ್ಬದ ಸಮಯದಲ್ಲಾದರೂ ಬೀದಿ ದೀಪಗಳು ಜಗಮಗಿಸಲು ಶುರುವಾಗಿರುವುದನ್ನು ಕಂಡು ಸಾರ್ವಜನಿಕರು ಅಚ್ಚರಿ ಪಟ್ಟಿದ್ದಾರೆ. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಶಾಸಕರಾದ ಬಳಿಕವೂ ಪಟ್ಟಣದ ಜೋಡಿ ರಸ್ತೆಗಳ ಬೀದಿ ದೀಪ ಉರಿಯದ ಬಗ್ಗೆ ಕನ್ನಡ ಪ್ರಭ ಪತ್ರಿಕೆ ಮೊದಲು ವರದಿ ಪ್ರಕಟಿಸಿ ಗಮನ ಸೆಳೆದಿತ್ತು.ಈಗ ಕಾಲ ಕೂಡಿ ಬಂದು ಗುಂಡ್ಲುಪೇಟೆ ಪಟ್ಟಣದ ಜೋಡಿ ರಸ್ತೆಯಲ್ಲಿ ಬೀದಿ ದೀಪ ಉರಿಯುವ ಮೂಲಕ ಸಾರ್ವಜನಿಕರು, ವಾಯು ವಿಹಾರಿಗಳು, ಪಾದಚಾರಿಗಳು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರಿಗೆ ಧನ್ಯವಾದ ಹೇಳಿದ್ದಾರೆ.ಪಟ್ಟಣದ ಜೋಡಿ ರಸ್ತೆಯಲ್ಲಿ ಬೀದಿ ದೀಪ ಉರಿಯದ ಬಗ್ಗೆ ಕನ್ನಡಪ್ರಭ ಕಳೆದೊಂದು ವರ್ಷದಿಂದ ವರದಿ ಪ್ರಕಟಿಸಿ ಶಾಸಕರು ಹಾಗೂ ತಾಲೂಕು ಆಡಳಿತವನ್ನು ಗಮನ ಸೆಳೆದಿತ್ತು.
ನಾನು ಶಾಸಕನಾದ ಮುಂಚೆಯೂ ಪಟ್ಟಣದ ಜೋಡಿ ರಸ್ತೆ ಬೀದಿ ದೀಪಗಳು ಉರಿಯುತ್ತಿರಲಿಲ್ಲ. ಅಧಿಕಾರಿಗಳ ಗಮನಕ್ಕೆ ತಂದ ಬಳಿಕವೂ ವಿಳಂಬವಾಗಿತ್ತು. ಸ್ವಾತಂತ್ರ್ಯ ಮಹೋತ್ಸವದ ಸಮಯದಲ್ಲಿ ಸ್ಟ್ರೀಟ್ ಲೈಟ್ ಆನ್ ಆಗಿರುವುದು ಖುಷಿ ತಂದಿದೆ.-ಎಚ್.ಎಂ.ಗಣೇಶ್ ಪ್ರಸಾದ್