೨ನೇ ದಿನಕ್ಕೆ ಕಾಲಿಟ್ಟ ಶಿರಗುಂಪಿ ದಲಿತರ ಹೋರಾಟ

| Published : Sep 07 2024, 01:33 AM IST

ಸಾರಾಂಶ

ದಲಿತರಿಗೆ ಸೇರಬೇಕಾದ ಈ ಜಮೀನನ್ನು ಯಲಬುರ್ಗಾದ ಮಠಾಧೀಶರೊಬ್ಬರ ಪ್ರಭಾವದಿಂದ ತಮ್ಮ ಸಹೋದರರ ಹೆಸರಿನಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನು ಕೂಡಲೇ ರದ್ದುಪಡಿಸಿ ನಮಗೆ ಬಿಟ್ಟು ಕೊಡುವವರಿಗೊ ಧರಣಿ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಯಲಬುರ್ಗಾ:

ಪಟ್ಟಣದ ತಹಸೀಲ್ದಾರ್‌ ಕಚೇರಿ ಎದುರು ಶಿರಗುಂಪಿ ಗ್ರಾಮದ ದಲಿತರು ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಮೂಲಕ ಗ್ರಾಮದ ಸರ್ವೇ ನಂ. ೫೭ ವಿಸ್ತೀರ್ಣ ೧೪.22 ಎಕರೆ ಜಮೀನಿನಲ್ಲಿ 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದ ದಲಿತ ಸಮುದಾಯಗಳನ್ನು ಒಕ್ಕಲೆಬ್ಬಿಸಬಾರದೆಂದು ಒತ್ತಾಯಿಸಿವೆ.

ದಲಿತರಿಗೆ ಸೇರಬೇಕಾದ ಈ ಜಮೀನನ್ನು ಪಟ್ಟಣದ ಮಠಾಧೀಶರೊಬ್ಬರ ಪ್ರಭಾವದಿಂದ ತಮ್ಮ ಸಹೋದರರ ಹೆಸರಿನಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನು ಕೂಡಲೇ ರದ್ದುಪಡಿಸಿ ನಮಗೆ ಬಿಟ್ಟು ಕೊಡುವವರಿಗೊ ಧರಣಿ ನಿಲ್ಲಿಸುವುದಿಲ್ಲ. ಗುರುವಾರದಿಂದ ಧರಣಿ ಆರಂಭಿಸಿದರೂ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಆಲಿಸಿಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ರಾತ್ರಿ ಧರಣಿ ನಿರತರಿಗೆ ಪಟ್ಟಣದ ಚಲವಾದಿ ಸಮಾಜದ ಶಂಕರ ಜಕ್ಕಲಿ, ಶಶಿಧರ ಹೊಸ್ಮನಿ, ಛತ್ರೆಪ್ಪ ಚಲವಾದಿ, ಸಿದ್ದಪ್ಪ ಕಟ್ಟಿಮನಿ, ಕುಕನೂರಿನ ಲಕ್ಷ್ಮಣ ಕಾಳಿ, ವಿಜಯ ಜಕ್ಕಲಿ ಪ್ರತಿಭಟನಾಕಾರರಿಗೆ ಆಹಾರ ಸಾಮಾಗ್ರಿ, ಕಟ್ಟಿಗೆ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿಕೊಟ್ಟು ಹೋರಾಟಕ್ಕೆ ಬೆಂಬಲಿಸಿದರು.

ಚಳಿಯಲ್ಲಿಯೇ ಪ್ರತಿಭಟನಾನಿರತ ವೃದ್ಧರು, ಮಹಿಳೆಯರು, ಮಕ್ಕಳು ರಾತ್ರಿ ಕಳೆದರು.

ಭೀಮ್ ವಾದ ಸಂಘಟನೆ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಚೌಡ್ಕಿ, ರಾಜ್ಯ ಮುಖಂಡ ಹನುಮಂತಪ್ಪ ದೊಡ್ಮನಿ, ಜಿಲ್ಲಾಧ್ಯಕ್ಷ ಪ್ರಕಾಶ ಹೊಳಿಯಪ್ಪನವರ, ಗಾಳೆಪ್ಪ ಪೂಜಾರ, ಶಿವಾನಂದ ಬಣಕಾರ ಮತ್ತಿತರರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮುಖಂಡರಾದ ಬಸವರಾಜ ನಡುವಲಮನಿ, ಅಶೋಕ ಮಾದರ, ಹನುಮಂತಪ್ಪ ಹೊಸಳ್ಳಿ, ಶರಣಪ್ಪ ಹಿರೇಮನಿ, ಕರಿಯಪ್ಪ ಮಣ್ಣಿನವರ, ನಾಗರಾಜ ಯಡಿಯಾಪೂರ, ಬಲವಂತ ಪೂಜಾರ, ಯಲ್ಲಪ್ಪ ಸಣ್ಣಿಗನೂರು, ಯಮನೂರಪ್ಪ ಶಿರಗುಂಪಿ, ಸಾವಕ್ಕ ಚಲವಾದಿ, ರೇಣುಕಾ ಚಲವಾದಿ, ಈರವ್ವ, ಶಾಂತವ್ವ, ಹುಲಿಗೆವ್ವ, ಮಂಜುವ್ವ, ಶರಣವ್ವ, ದುರ್ಗವ್ವ ಹನಮವ್ವ, ಕಳಕಪ್ಪ ಹರಿಜನ, ಪರಸಪ್ಪ,ಯಲ್ಲಪ್ಪ ಇದ್ದರು. ೦6ವೈಎಲ್‌ಬಿ2

ತಹಸೀಲ್ದಾರ್‌ ಕಚೇರಿ ಎದುರು ಶಿರಗುಂಪಿ ಗ್ರಾಮದ ದಲಿತರು ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.