ಇ-ಸ್ವತ್ತು ನೀಡಲು ಅಗತ್ಯ ಕ್ರಮಕ್ಕೆಶಾಸಕ ಜಿ.ಎಚ್.ಶ್ರೀನಿವಾಸ್ ಸೂಚನೆ

| Published : Sep 07 2024, 01:33 AM IST

ಇ-ಸ್ವತ್ತು ನೀಡಲು ಅಗತ್ಯ ಕ್ರಮಕ್ಕೆಶಾಸಕ ಜಿ.ಎಚ್.ಶ್ರೀನಿವಾಸ್ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಇ-ಸ್ವತ್ತು ನೀಡಲು ಅಗತ್ಯ ಕ್ರಮ ವಹಿಸಬೇಕೆಂದು ಶಾಸಕ ಜೆ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಜನವಸತಿ ಪ್ರದೇಶಗಳ ದಾಖಲೆ ರಹಿತರಿಗೆ ಇಸ್ವತ್ತು ಮಾಹಿತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ತರೀಕೆರೆ

ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಇ-ಸ್ವತ್ತು ನೀಡಲು ಅಗತ್ಯ ಕ್ರಮ ವಹಿಸಬೇಕೆಂದು ಶಾಸಕ ಜೆ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಕಂದಾಯ ಗ್ರಾಮ, ಉಪ ಗ್ರಾಮ ರಚನೆ ಹಾಗೂ ಗ್ರಾಮಟಠಾಣ ವಿಸ್ತರಣೆ ಕುರಿತಂತೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ತರೀಕೆರೆ ಮತ್ತು ಅಜ್ಜಂಪುರ ಭಾಗದಲ್ಲಿ ಸುಮಾರು 15,000 ಕುಟುಂಬಗಳಿಗೆ ಇ-ಸ್ವತ್ತು ದೋರಕಬೇಕು. ಮೂಲಗ್ರಾಮದಿಂದ ಹೊರಗಡೆ ಬರುವಂತೆ, ಸರ್ಕಾರಿ ಹಾಗೂ ಖಾಸಗಿ

ಜಮೀನುಗಳಲ್ಲಿ ಜನವಸತಿ ನಿರ್ಮಾಣವಾಗಿದೆ, ಈ ರೀತಿಯಲ್ಲಿ ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ ತಮ್ಮ ಆಸ್ತಿ ಹಕ್ಕು ದೊರೆತಿಲ್ಲ. ಹಾಗಾಗಿ ಇಂತಹ ಪ್ರದೇಶಗಳನ್ನು ಕಂದಾಯ ಗ್ರಾಮದ ಭಾಗವಾಗಿ ಉಪಗ್ರಾಮಗಳನ್ನು ರಚಿಸಿ ಅವರಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಹೇಳಿದರು.ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಅಪ್ತ ಸಹಾಯಕ ಡಿ.ಶ್ರೀನಿವಾಸ್ ಮಾತನಾಡಿ ಕಂದಾಯ, ಉಪ ಗ್ರಾಮ ರಚನೆ ಹಾಗೂ ಗ್ರಾಮಠಾಣ ವಿಸ್ತರಣೆ ಕುರಿತಂತೆ ಪ್ರಾತ್ಯಕ್ಷತೆ ಮೂಲಕ ಮಾಹಿತಿ ನೀಡಿದರು.ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್, ತರೀಕೆರೆ ತಹಸೀಲ್ದಾರ್ ರಾಜೀವ್, ಅಜ್ಜಂಪುರ ತಹಸೀಲ್ದಾರ್ ಶಿವ ಶರಣಪ್ಪ ಕಟೋಳಿ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ.ದೇವೇಂದ್ರಪ್ಪ, ಎಡಿಎಲ್, ಆರ್. ಮಂಜುನಾಥ್, ಗ್ರಾಪಂ ಅಭಿವೃದ್ಧಿ ಅಧಿಕಾರಿ, ರಾಜಸ್ವ ನಿರೀಕ್ಷಕರು, ಗ್ರಾಮಾಡಳಿತ ಅಧಿಕಾರಿ ಭಾಗವಹಿಸಿದ್ದರು.6ಕೆಟಿಆರ್.ಕೆ.12ಃ

ತರೀಕೆರೆ ತಾಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್, ತರೀಕೆರೆ ತಹಸೀಲ್ದಾರ್ ರಾಜೀವ್, ಶಾಸಕರ ಆಪ್ತ ಸಹಾಯಕ ಡಿ.ಶ್ರೀನಿವಾಸ್, ಅಜ್ಜಂಪುರ ತಹಸೀಲ್ದಾರ್ ಶಿವಶರಣಪ್ಪ ಕಟೋಳಿ ಮತ್ತಿತರರು ಇದ್ದರು.