ಸಾರಾಂಶ
ಜಂಬಗಿ ಕೆರೆ ತುಂಬಸಬೇಕು ಎಂದು ನಡೆದಿರುವ ಹೋರಾಟ 4ನೇ ದಿನಕ್ಕೆ ಕಾಲಿಟ್ಟಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಜಂಬಗಿ ಕೆರೆ ತುಂಬಸಬೇಕು ಎಂದು ನಡೆದಿರುವ ಹೋರಾಟ 4ನೇ ದಿನಕ್ಕೆ ಕಾಲಿಟ್ಟಿದೆ.ಈ ವೇಳೆ ಮಾತನಾಡಿದ ಪ್ರಗತಪರ ರೈತ ರಾಮಸಿಂಗ ರಜಪೂತ, ಕಳೆದ 3 ದಿನಗಳಿಂದ ಜಂಬಗಿ ಕೆರೆಯನ್ನು ತುಂಬಬೇಕು ಎಂದು ಹಮ್ಮಿಕೊಂಡಿರುವ ಅನಿರ್ದಿಷ್ಟ ಧರಣಿಯ ಕುರಿತು ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಇದರ ಬಗ್ಗೆ ಒಂದಿಷ್ಟು ತಲೆ ಕೆಡೆಸಿಕೊಳ್ಳದೇ ಮೂಕ ಜಾಣತನವನ್ನು ಪ್ರದಶಿಸುತ್ತಿದ್ದಾರೆ. ನಾನು ಒಬ್ಬ ಸಾಮಾನ್ಯ ರೈತನಾಗಿದ್ದು ಕೃಷಿಯನ್ನೇ ಅವಲಂಬಿಸಿದ್ದೇನೆ. ದೊಡ್ಡ ಮಳೆಯಾದರೆ ಮಾತ್ರ ಈ ಕೆರೆ ತುಂಬುತ್ತದೆ. ಕಳೆದ 10 ವರ್ಷಗಳಿಂದ ಈ ಕೆರೆ ತುಂಬಿಲ್ಲ. ಭೀಕರ ಬರಗಾಲದಂತಹ ಪರಿಸ್ಥಿತಿಯಲ್ಲಿ ಆದರೂ ಈ ಕೆರೆ ನೀರು ತುಂಬುವ ಯೋಜನೆಯಡಿ ನೀರು ತುಂಬಿಸಿದರೆ ಅನುಕೂಲವಾಗುವುದು ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಯಸಿಂಗ ರಜಪೂತ, ಚನ್ನಪ್ಪ ವಾಡೇದ, ಸಿದ್ದಪ್ಪ ಮಸೂತಿ, ಶರಣಪ್ಪ ಜಮಖಂಡಿ, ಅನಮೇಶ ಜಮಖಂಡಿ, ರಾಜಾರಾಮಸಿಂಗ ಡೋಣೂರ, ಮುತ್ತಪ್ಪ ನಾಯ್ಕೋಡಿ, ಕಿಸಾನಸಿಂಗ ರಜಪೂತ, ಶ್ರೀಶೈಲ ಮಸೂತಿ, ಭೀಮರಾಯ ಹಚಡದ, ಸಂಗಮೇಶ ಗುದಳೆ, ಲಾಳೇಮಶಾಕ ಮುಲ್ಲಾ, ಮಾಳಪ್ಪ ಪೂಜಾರಿ, ಅಶೋಕಸಿಂಗ ರಜಪೂತ, ಬಸವರಾಜ ಮಾದರ, ಬೀರಪ್ಪ ಗೆರಡೆ, ಭೀಮರಾಯ ಗೊರನಾಳ ಸೇರಿದಂತೆ ಅನೇಕರು ಇದ್ದರು.