ಸಾರಾಂಶ
ದೊಡ್ಡಬಳ್ಳಾಪುರ: ಚಂದ್ರಯಾನದ ಯಶಸ್ಸು ಮತ್ತು ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳು ಭಾರತದ ಅನನ್ಯ ವೈಜ್ಞಾನಿಕ ಪ್ರಗತಿಯ ಧ್ಯೋತಕ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ-ಇಸ್ರೋದ ಮಾಜಿ ನಿರ್ದೇಶಕ ಪ್ರೊ.ಪಿ.ಬಲರಾಮ್ ಹೇಳಿದರು.
ದೊಡ್ಡಬಳ್ಳಾಪುರ: ಚಂದ್ರಯಾನದ ಯಶಸ್ಸು ಮತ್ತು ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳು ಭಾರತದ ಅನನ್ಯ ವೈಜ್ಞಾನಿಕ ಪ್ರಗತಿಯ ಧ್ಯೋತಕ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ-ಇಸ್ರೋದ ಮಾಜಿ ನಿರ್ದೇಶಕ ಪ್ರೊ.ಪಿ.ಬಲರಾಮ್ ಹೇಳಿದರು.
ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಇರುವ ಕ್ರಿಸ್ತು ಜಯಂತಿ ಸಿ.ಎಂ.ಐ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ವೈಜ್ಞಾನಿಕ ಆಲೋಚನೆಗಳನ್ನು ಬಿತ್ತು ಕೆಲಸ ಆಗಬೇಕು. ಶಾಲಾ ಹಂತದಲ್ಲಿ ಧನಾತ್ಮಕ ಚಿಂತನೆಗಳನ್ನು ವೃದ್ದಿಸುವ ಕೆಲಸ ಆಗಬೇಕು. ಭಾಷೆ ಹಾಗೂ ಸಹಪಠ್ಯ ವಿಚಾರಗಳಿಗೆ ಸಮಾನ ಆದ್ಯತೆ ನೀಡಿ ಪರಿಪೂರ್ಣ ಶೈಕ್ಷಣಿಕ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ದೇಶಿ ಮತ್ತು ವಿದೇಶಿ ಸಾಂಸ್ಕೃತಿಕ ವೈಭವ, ಮಂಗಳೂರಿನ ಯಕ್ಷಗಾನ, ಕೇರಳದ ವಸ್ತ್ರಾಲಂಕಾರ, ನಾಟಕ, ದೇಶಭಕ್ತಿ ಸಾರುವ ಕಾರ್ಯಕ್ರಮಗಳು ನಡೆದವು.ಪ್ರಾಂಶುಪಾಲ ಫಿಲಿಪ್ ಜೊಸೆಫ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಆಡಳಿತಾಧಿಕಾರಿ ಲಿಯೋ.ಪಿ.ಥಾಮಸ್, ನಿರ್ದೇಶಕ ಸಬಾಸ್ಟೀಯನ್ ಎಲಿಜಿಂಕಲ್, ಕ್ರಿಸ್ತು ಜಯಂತಿ ಕಾಲೇಜಿನ ಪ್ರಾಂಶುಪಾಲ ಡಾ.ಅಗಸ್ಟೀನ್ ಜಾಜ್೯ ಮತ್ತಿತರರು ಉಪಸ್ಥಿತರಿದ್ದರು.26ಕೆಡಿಬಿಪಿ9-
ದೊಡ್ಡಬಳ್ಳಾಪುರ ತಾಲೂಕಿನ ಕನ್ನಮಂಗಲದ ಬಳಿ ಇರುವ ಕ್ರಿಸ್ತು ಜಯಂತಿ ಶಾಲೆಯಲ್ಲಿ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.