ವೈಭವದ ಗ್ರಾಮದೇವಿ ಉಡಿ ತುಂಬುವ ಕಾರ್ಯ

| Published : May 18 2024, 12:32 AM IST

ವೈಭವದ ಗ್ರಾಮದೇವಿ ಉಡಿ ತುಂಬುವ ಕಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಳಕಲ್ಲ: ನಗರದ ಕಿಲ್ಲಾ ಒಣಿಯಲ್ಲಿರುವ ಗ್ರಾಮ ದೇವಿ ದ್ಯಾಮವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಇಳಕಲ್ಲ: ನಗರದ ಕಿಲ್ಲಾ ಒಣಿಯಲ್ಲಿರುವ ಗ್ರಾಮ ದೇವತೆ ದ್ಯಾಮವ್ವ ದೇವರಿಗೆ ಉಡಿ ತುಂಬುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಗ್ರಾಮ ದೇವಿಗೆ ಬೆಳಗಿನ ಜಾವ ವಿಶೇಷ ಪೂಜೆ ನಂತರ ಅಲಂಕಾರ ಮಾಡಲಾಯಿತು. ಕಿಲ್ಲಾ ಒಣಿಯ ಮುಖ್ಯಸ್ಥ ಹಾಗೂ ದೇವಸ್ಥಾನದ ಧರ್ಮದರ್ಶಿ ಎಂ.ಎಸ್. ಪಾಟೀಲ ಅವರ ಮನೆಯಿಂದ ಗ್ರಾಮ ದೇವತಿಗೆ ಉಡಿ ತುಂಬುವ ಪೂಜಾ ಸಾಮಾನುಗಳನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು. ನಂತರ ಎಂ.ಎಸ್.ಪಾಟೀಲ ಅವರು ಗ್ರಾಮ ದೇವಿಗೆ ಉಡಿ ತುಂಬಿ ಮಹಾ ಮಂಗಳಾರತಿ ಮಾಡಿದರು. ನಂತರ ನಗರದ ಜನರು ದೇವಿಗೆ ಉಡಿ ತುಂಬಿ ಹರಕೆ ಸಲ್ಲಿಸಿದರು. ಈ ವೇಳೆ ಎಂ.ಎಸ್. ಪಾಟೀಲ, ವಿಜು ಪಾಟೀಲ, ಶರಣಗೌಡ ಪಾಟೀಲ, ಸಿದ್ದಪ್ಪ ಹೇಮ್ಮವಾಡಗಿ, ಶರಣಪ್ಪ ಹೋದ್ನೂರ, ಮಲ್ಲಿಕಾರ್ಜುನ ಪಾಟೀಲ, ಮುತ್ತು ಬುನಾದಿಪಾಟೀಲ, ಮುತ್ತುಮ್ಮ ಮಾಗಿ, ಮಲಕಾಜಗೌಡ ಪಾಟೀಲ, ಹಳ್ಳೂರಪ್ಪ ಹನಸಿ, ಲಕ್ಷ್ಮಣ ಬಡಿಗೇರ, ಅಯ್ಯಪ್ಪ ಬಡಿಗೇರ, ಪರಸಪ್ಪ ವಾಲಿಕಾರ, ಬಸನಗೌಡ ಮೇಗಲಪೇಟಿ, ಚನ್ನು ಕೌದಿ, ಮಹಾಂತೇಶ ಹೋಳಿ, ರಾಮನಗೌಡ ಅಗ್ನಿ, ಬಸಪ್ಪ ಚಿನ್ನಾಪುರ, ರುದ್ರಪ್ಪ ಕರಡಿ ಹಾಗೂ ಇತರರು ಉಪಸ್ಥಿತರಿದ್ದರು.