ಸಾರಾಂಶ
ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ 2024-29 ರ ಆಡಳಿತ ಮಂಡಳಿಗೆ ಚುನಾವಣೆಯಲ್ಲಿ ಸಹಕಾರಿ ಧುರೀಣ ಟಿ.ಆರ್.ಶರವಣಕುಮಾರ್ ನೇತೃತ್ವ ತಂಡ ಜಯಭೇರಿ ಗಳಿಸಿದೆ. ಸಾಮಾನ್ಯ ವರ್ಗದಿಂದ ಜೋಸೆಫ್ ವಿಕ್ಟರ್ ಸೋನ್ಸ್ (516), ಎಲ್ ನವೀನ್(513), ಜಿ ಡಿ ನವೀನ್(486), ಎಂ ವಿ ನಾರಾಯಣ (530),ಶರವಣ ಕುಮಾರ್ (562), ಶರತ್ ಕೆ ಪಿ ( 531), ಶಿವಪ್ರಕಾಶ್ ಎನ್ ಈ (501), ಸುರೇಶ್ ಕುಮಾರ್ ಕೆ (472), ಆಯ್ಕೆಯಾಗಿದ್ದಾರೆ. ಸುರೇಶ್ ಕೆ ಎನ್ (523) ಪ್ರಥಮ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ 2024-29 ರ ಆಡಳಿತ ಮಂಡಳಿಗೆ ಚುನಾವಣೆ ನಡೆದು ಅಧಿಕ ಮತಗಳೊಂದಿಗೆ ಸಹಕಾರಿ ಧುರೀಣ ಟಿ.ಆರ್.ಶರವಣಕುಮಾರ್ ನೇತೃತ್ವ ತಂಡ ಜಯಭೇರಿ ಗಳಿಸಿದೆ.ಸಾಮಾನ್ಯ ವರ್ಗದಿಂದ ಜೋಸೆಫ್ ವಿಕ್ಟರ್ ಸೋನ್ಸ್ (516), ಎಲ್ ನವೀನ್(513), ಜಿ ಡಿ ನವೀನ್(486), ಎಂ ವಿ ನಾರಾಯಣ (530),ಶರವಣ ಕುಮಾರ್ (562), ಶರತ್ ಕೆ ಪಿ ( 531), ಶಿವಪ್ರಕಾಶ್ ಎನ್ ಈ (501), ಸುರೇಶ್ ಕುಮಾರ್ ಕೆ (472), ಆಯ್ಕೆಯಾಗಿದ್ದಾರೆ. ಸುರೇಶ್ ಕೆ ಎನ್ (523) ಪ್ರಥಮ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.ವೀಣ, (214), ಭಾಸ್ಕರ (198) ರಜನಿಕಾಂತ್ (206) ಪರಾಭವಗೊಂಡಿದ್ದಾರೆ.
ಸಾಮಾನ್ಯ ಮಹಿಳಾ ಮೀಸಲು ವರ್ಗದಲ್ಲಿ ಸ್ಪರ್ಧಿಸಿದ ಪಿ ಎಂ ಕವಿತಾ (508), ಕೃತಿಕಾ ಪೊನ್ನಪ್ಪ (500) ಮತ ಗಳಿಸಿ ಆಯ್ಕೆಯಾಗಿದ್ದಾರೆ. ಇಂದಿರಾ ರಮೇಶ್ 223 ಮತಗಳಿಸಿ ಪರಾಭವಗೊಂಡಿದ್ದಾರೆ.ಸಾಮಾನ್ಯ ಹಿಂದುಳಿದ ವರ್ಗ ಎ ವಿಭಾಗದಿಂದ ಎಂ.ಎಂ. ಶಾಹೀರ್ 436 ಮತ ಗಳಿಸಿ ಆಯ್ಕೆಯಾಗಿದ್ದಾರೆ ಪೃಥ್ವಿರಾಜ್ 220 ಮತಗಳೊಂದಿಗೆ ಸೋಲು ಕಂಡಿದ್ದಾರೆ.
ಬಿ. ರಾಮಕೃಷ್ಣಯ್ಯ ಅವರು ಪರಿಶಿಷ್ಟ ಜಾತಿ ವರ್ಗದಿಂದ 493 ಮತಗಳಿಂದ ಆಯ್ಕೆಯಾಗಿದ್ದಾರೆ ರಾಮು ಅವರು 162 ಮತ ಗಳಿಸಿದ್ದಾರೆ.ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿ ಆರ್ ಜೆ ಕೀರ್ತಿ ಲಕ್ಷ್ಮಿ ಅವರು 430 ಮತಗಳಿಸಿ ಪ್ರಥಮ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಇವರ ವಿರುದ್ಧ ಸ್ಪರ್ಧಿಸಿದ ಜಗದೀಶ್ ಅವರು 221 ಮತ ಗಳಿಸಿದ್ದಾರೆ.
ಬಸ್ ತಂಗುದಾಣ ಉದ್ಘಾಟನೆ:ಲಯನ್ಸ್ ಕ್ಲಬ್ ಸೋಮವಾರಪೇಟೆ ಹಾಗೂ ಮುಳಿಯ ಆಭರಣ ಮಳಿಗೆ ವತಿಯಿಂದ ಹೊಸತೋಟ ಗ್ರಾಮದ ಜಂಕ್ಷನ್‍ನಲ್ಲಿ ನಿರ್ಮಿಸಿರುವ ನೂತನ ಬಸ್ ತಂಗುದಾಣವನ್ನು ಮುಳಿಯ ಆಭರಣ ಮಳಿಗೆಯ ಮಾಲೀಕ ಕೇಶವ ಪ್ರಸಾದ್, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ನವೀನ್ ಅಂಬೆಕಲ್ ಉದ್ಘಾಟಿಸಿದರು.ಆರ್ಥಿಕವಾಗಿ ಸಬಲರಾದವರು ಒಂದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಕೇಶವ ಪ್ರಸಾದ್ ಹೇಳಿದರು.
ಲಯನ್ಸ್ ಅಧ್ಯಕ್ಷ ಎ.ಎಸ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ವಲಯ ಅಧ್ಯಕ್ಷ ಸಿ.ಕೆ.ರೋಹಿತ್, ಬಸ್ ತಂಗುದಾಣಕ್ಕೆ ಸ್ಥಳ ದಾನಿಗಳಾದ ಕೋದಂಡ ಅಪ್ಪಣ್ಣ ಮತ್ತು ಮುದ್ದಪ್ಪ, ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಪಿ. ಪೊನ್ನಮ್ಮ, ಲಯನ್ಸ್ ಅಧ್ಯಕ್ಷ ಮಧುಕರ್ ಶೇಟ್, ಪ್ರಮುಖರಾದ ಕೆ.ಎಂ. ಜಗದೀಶ್, ಕೆ.ಡಿ. ವೀರಪ್ಪ, ಮೋಹನದಾಸ್, ಸಿ.ಕೆ. ಶಿವಕುಮಾರ್, ಎಸ್.ಎನ್. ಯೋಗೀಶ್, ಸಿ.ಕೆ. ಮಲ್ಲಪ್ಪ ಮತ್ತಿತರರು ಇದ್ದರು.