ಸಾರಾಂಶ
ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿರುವ ಬಂಜಾರ ಜನಾಂಗದ ಚಿಂತನೆಯು ಅನುಕರಣೀಯವಾಗಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.
ಗಜೇಂದ್ರಗಡ: ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿರುವ ಬಂಜಾರ ಜನಾಂಗದ ಚಿಂತನೆಯು ಅನುಕರಣೀಯವಾಗಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.
ಸಮೀಪದ ದಿಂಡೂರು ಗ್ರಾಮದ ದಿಂಡೂರ ತಾಂಡಾದಲ್ಲಿನ ಸಂತ ಸೇವಾಲಾಲ್ ದೇವಸ್ಥಾನ ಆವರಣದಲ್ಲಿ ನಡೆದ ೨೮೬ನೇ ಸಂತ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಟ್ಟಿಗೆ ಹೊತ್ತು ಅಡವಿಗಳಲ್ಲಿ, ಕೃಷಿ ಜಮೀನುಗಳಲ್ಲಿ ದುಡಿಯುವ ಬುಡಕಟ್ಟು ಜನಾಂಗದ ಬಂಜಾರರು ಶ್ರಮಿಕರಾಗಿದ್ದಾರೆ. ಸಂತ ಸೇವಾಲಾಲ್ ಮಹಾರಾಜರು ತಮ್ಮ ಅನುಭವದ ಮೂಲಕ ಸತ್ಯ, ಅಹಿಂಸಾ ಹಾಗೂ ಸೇವಾ ಮಾರ್ಗಗಳನ್ನು ಪ್ರಕಾಶಗೊಳಿಸಿದ್ದು, ಯುವ ಸಮೂಹ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.ಮುಖಂಡ ಎಚ್.ಎಸ್.ಸೋಂಪುರ ಮಾತನಾಡಿ, ಬಂಜಾರ ಸಮುದಾಯದ ಕಲೆ ಹಾಗೂ ಸಂಸ್ಕೃತಿಗೆ ಮಹತ್ವದ ಸ್ಥಾನಮಾನವಿದೆ. ಹೀಗಾಗಿ ಸಮುದಾಯವು ಸಂಸ್ಕೃತಿ ಹಾಗೂ ಪರಂಪರೆ ರಕ್ಷಣೆ ಜತೆಗೆ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣವನ್ನು ಕೊಡಿಸುವತ್ತ ಹೆಚ್ಚಿನ ಗಮನವನ್ನು ನೀಡಬೇಕು ಎಂದರು.ಗಜೇಂದ್ರಗಡ ಪುರಸಭೆ ನಾಮ ನಿರ್ದೇಶಿತ ಸದಸ್ಯ ಉಮೇಶ ರಾಠೋಡ ಮಾತನಾಡಿದರು. ರೋಣ ಪುರಸಭೆಉಪಾಧ್ಯಕ್ಷ ಮಿಥುನ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಕೊಪ್ಪಳದ ಬಹದ್ದೂರ ಬಂಡಾ ಗೋರ ಬಂಜಾರ ದೀಕ್ಷಾಗುರು ಗೋಸಾವಿ ಬಾವನವರು ಸಾನಿಧ್ಯ ವಹಿಸಿದ್ದರು. ಡಿ.ಎಸ್. ಘೋರ್ಪಡೆ ಅಧ್ಯಕ್ಷತೆ ವಹಿಸಿದ್ದರು.ಮುಖಂಡರಾದ ಬಾಣಪ್ಪ ರಾಠೋಡ, ಕೃಷ್ಣಪ್ಪ ಪಮ್ಮಾರ, ಶಾಂತಪ್ಪ ಮಾಳೋತ್ತರ, ಪ್ರವೀಣ ಚವ್ಹಾಣ, ಶಿವಾನಂದ ಲಮಾಣಿ, ಧರ್ಮಪ್ಪ ರಾಠೋಡ, ಗ್ರಾಪಂ ಸದಸ್ಯ ಸುರೇಶ ಪಮ್ಮಾರ, ಅಂದಪ್ಪ ಬಿಚ್ಚೂರ, ಚಿದಾನಂದ ಪಾಟೀಲ, ಶಾಂತಪ್ಪ ರಾಠೋಡ, ಬಸಣ್ಣ ಆಡಿನ, ಸುರೇಶಗೌಡ ಪಾಟೀಲ, ಶರಣಪ್ಪ ಸಜ್ಜನ, ಶರಣಪ್ಪ ಹಾದಿಮನಿ, ಪುರಸಭೆ ಮಾಜಿ ಸದಸ್ಯೆ ಶಾರದಾ ರಾಠೋಡ, ಮಂಜುಳಾ ರೇವಡಿ, ಚಿನ್ನಪ್ಪ ಜಾಲಿಹಾಳ, ಪ್ರವೀಣ ಮಾಳೊತ್ತರ, ಕಳಕಪ್ಪ ಕಂಬಳಿ, ಶಿವಕುಮಾರ ಜಾಠೋತ್ತರ, ಷರೀಪ ಸೌದಾಗರ, ಮಲ್ಲಪ್ಪ ಹಾದಿಮನಿ ಸೇರಿ ಇತರರು ಇದ್ದರು.