ಸಾರಾಂಶ
ಹಳೇಬೀಡಿನ ಹೊಯ್ಸಳ ದೇವಸ್ಥಾನದ ವೃತ್ತದಲ್ಲಿ ಬಿಜೆಪಿ ಪಕ್ಷದವರು ಹಾಗೂ ಸ್ಥಳೀಯ ನಾಗರಿಕರು ಸೇರಿ ಮೇಣದಬತ್ತಿ ಹಚ್ಚುವ ಮೂಲಕ ಹುತಾತ್ಮರಿಗೆ ನಮನ ಸಲ್ಲಿಸಿ ಅವರ ಕುಟುಂಬಸ್ಥರಿಗೆ ಆತ್ಮಸ್ಥೈರ್ಯವನ್ನು ನೀಡುತ್ತಾ ಮಾಧ್ಯಮದೊಂದಿಗೆ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಯಲ್ಲಿ ದೇಶದ ಪ್ರವಾಸಿಗಳಿಗೆ ಈ ರೀತಿ ಹೀನಾಯವಾಗಿ ಗುಂಡಿಕ್ಕಿ ಕೊಂದಂತಹ ಪಾಪಿಗಳು ಮನುಷ್ಯನ ಜನ್ಮಕ್ಕೆ ನಾಚಿಕೆಯಾಗಬೇಕು. ಹಿಂದೂ ಧರ್ಮವೆಂದು ತಿಳಿದು ಹತ್ಯೆ ಮಾಡಿದ ಅವರನ್ನು ಹುಡುಕಿ ಅವರನ್ನು ಕೊಲ್ಲಲೇಬೇಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಳೇಬೀಡು
ಕಾಶ್ಮೀರದ ಪೆಹಲ್ಗಾಂನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಭಯೋತ್ಪಾದಕರು ಹತ್ಯೆ ಮಾಡಿರುವುದನ್ನು ಖಂಡಿಸಿ ಪ್ರಧಾನಿಮಂತ್ರಿಗಳು ತಕ್ಕಶಾಸ್ತಿ ಮಾಡಲೇಬೇಕೆಂದು ಬೇಲೂರು ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ್ ಕೌರಿ ಒತ್ತಾಯಿಸಿದರು.ಹಳೇಬೀಡಿನ ಹೊಯ್ಸಳ ದೇವಸ್ಥಾನದ ವೃತ್ತದಲ್ಲಿ ಬಿಜೆಪಿ ಪಕ್ಷದವರು ಹಾಗೂ ಸ್ಥಳೀಯ ನಾಗರಿಕರು ಸೇರಿ ಮೇಣದಬತ್ತಿ ಹಚ್ಚುವ ಮೂಲಕ ಹುತಾತ್ಮರಿಗೆ ನಮನ ಸಲ್ಲಿಸಿ ಅವರ ಕುಟುಂಬಸ್ಥರಿಗೆ ಆತ್ಮಸ್ಥೈರ್ಯವನ್ನು ನೀಡುತ್ತಾ ಮಾಧ್ಯಮದೊಂದಿಗೆ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಯಲ್ಲಿ ದೇಶದ ಪ್ರವಾಸಿಗಳಿಗೆ ಈ ರೀತಿ ಹೀನಾಯವಾಗಿ ಗುಂಡಿಕ್ಕಿ ಕೊಂದಂತಹ ಪಾಪಿಗಳು ಮನುಷ್ಯನ ಜನ್ಮಕ್ಕೆ ನಾಚಿಕೆಯಾಗಬೇಕು. ಹಿಂದೂ ಧರ್ಮವೆಂದು ತಿಳಿದು ಹತ್ಯೆ ಮಾಡಿದ ಅವರನ್ನು ಹುಡುಕಿ ಅವರನ್ನು ಕೊಲ್ಲಲೇಬೇಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ತಿಳಿಸಿದರು.
ಹಳೇಬೀಡಿನ ಕಲಾವಿದ ರಾಜು ಮಾತನಾಡುತ್ತಾ, ನಮ್ಮ ದೇಶದಲ್ಲಿ ಸನಾತನ ಧರ್ಮದ ಬಗ್ಗೆ ಗೌರವ ಇಲ್ಲದ ಜನತೆ ದೇಶದಲ್ಲಿ ಏಕೆ ಇರಬೇಕು. ನಮ್ಮ ದೇಶದ ಗಾಳಿ, ಬೆಳಕು, ದುಡ್ಡು ಬೇಕು. ಆದರೆ ಈ ಕೃತ್ಯಕ್ಕೆ ಸಹಕಾರ ನೀಡದ ವ್ಯಕ್ತಿಯನ್ನ ಹುಡುಕಿ ಗಲ್ಲಿಗೆ ಏರಿಸಬೇಕು ಎಂದು ಆಗ್ರಹಿಸಿದ್ದಾರೆ.ಬೇಲೂರು ತಾಲೂಕಿನ ಬೇಡ ಜಂಗಮರ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಯ್ಯ ಮಾತನಾಡುತ್ತಾ, ಕೃತ್ಯ ಎಸಗಿದ ಭಯೋತ್ಪಾದಕರನ್ನು ಹುಡುಕಿ ನಿರ್ದಾಕ್ಷಿಣ್ಯವಾಗಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಾವಗಲ್ ರಮೇಶ್, ನವೀನ್ ಮತ್ತು ಪ್ರಸನ್ನ, ಗ್ರಾಪಂ ಅಧ್ಯಕ್ಷ ಧರ್ಮಪ್ಪ, ವಿನಯ್, ಶಿವನಾಗ್, ಶಂಕರ್‌ನಾಗ್, ಚೇತನ್, ರಂಜಿತ್, ಮೋಹನ್‌ರಾವ್, ಕಟ್ಟೇಸೋಮನಹಳ್ಳಿ ರಮೇಶ್, ಪರಮೇಶ್, ಬಾಬು,ಈಶ್ವರ್ ಇನ್ನು ಹಲವಾರು ಸಂಘಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.