ಸಾರಾಂಶ
ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ದೇಶದಲ್ಲಿ ಮೊದಲ ಬಾರಿಗೆ ಭೂ ಸುಧಾರಣೆ ಕಾಯ್ದೆ ಜಾರಿ ಮೂಲಕ ಉಳುವವನೆ ಭೂ ಒಡೆಯ ಕಾನೂನು ಜಾರಿಗೆ ತಂದವರು ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರು ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದರ ಹೇಳಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ದೇಶದಲ್ಲಿ ಮೊದಲ ಬಾರಿಗೆ ಭೂ ಸುಧಾರಣೆ ಕಾಯ್ದೆ ಜಾರಿ ಮೂಲಕ ಉಳುವವನೆ ಭೂ ಒಡೆಯ ಕಾನೂನು ಜಾರಿಗೆ ತಂದವರು ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರು ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದರ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಟಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, 8 ವರ್ಷ ಕಾಲ ಮುಖ್ಯಮಂತ್ರಿಯಾಗಿ ಜನ ಮಾನಸದಲ್ಲಿ ಉಳಿಯುವಂತಹ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದರು. ಭೂ ಸುಧಾರಣೆ ಕಾನೂನು ಜಾರಿಗೆ ತಂದು ರೈತರಿಗೆ ಉಳುವವನೆ ಭೂ ಒಡೆಯ ಪಟ್ಟವನ್ನು ಒದಗಿಸಿಕೊಟ್ಟರು. ಬಿಸಿಎಂ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ರಾಜ್ಯದ ಮೈಸೂರು ಹೆಸರನ್ನು ಕರ್ನಾಟಕ ಎಂದು ಬದಲಿಸಿ ಇತಿಹಾಸ ನಿರ್ಮಿಸಿದರು ಎಂದರು.
ಹಿಂದೂಳಿದ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿನ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಇದೇ ಸಮಯದಲ್ಲಿ ಸನ್ಮಾನಿಸಿದರು. ಶಿಕ್ಷಕಿ ಮುರ್ತುಜಾಬೇಗಂ ಕೊಡಗಲಿ, ಉಪನ್ಯಾಸ ನೀಡಿದರು. ಭೂ ನ್ಯಾಯ ಮಂಡಳಿತ ಸದಸ್ಯ ಅಮರೇಶ ನಾಗೂರ, ತಾಲೂಕು ಹಿಂದೂಳಿದ ಕಲ್ಯಾಣಾಧಿಕಾರಿ ಸಂಗಮೇಶ ಗಡೇದ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಎಂ.ಎಚ್.ಕಟ್ಟಿಮನಿ, ಸಿಡಿಪಿಒ ವಿ.ಎ.ಗಿರಿತಿಮ್ಮಣ್ಣನವರ, ಕ್ಷೇತ್ರ ಸಮನ್ವಯಾಧಿಕಾರಿ ಗುಡಗುಂಟಿ, ಅರಣ್ಯಾಧಿಕಾರಿ ಪಿ.ಎಂ. ಪುರಾಣಿಕಮಠ, ಗ್ರೇಡ್ 2 ತಹಸೀಲ್ದಾರ ಮಹೇಶ ಸಂದಿಗವಾಡ, ಶಿರಸ್ಥೆದಾರ ಎಚ್.ಎಂ.ಶಿವಣಗಿ, ಶ್ರವಣ ಮುಂಡೇವಾಡಿ,, ಕಂದಾಯ ನಿರೀಕ್ಷಕ ಲಿಂಗರಾಜ ಹುನಗುಂಡಿ, ವಿನೋಕುಮಾರ ಭೋವಿ, ಸಿಬ್ಬಂದಿಗಳಾದ ಸೇರಿದಂತೆ ಇನ್ನಿತರರು ಇದರು.