ಸಾರಾಂಶ
ನಮ್ಮ ಕೆಲವು ತಪ್ಪುಗಳಿಂದಾಗಿ, ಪಾಶ್ಚಾತ್ಯದ ಪ್ರಭಾವಕ್ಕೆ ಒಳಗಾಗಿ ಕೆಲವು ಕಪ್ಪುಚುಕ್ಕೆ ಬಂದಿವೆ. ಅವುಗಳನ್ನು ಅಳಿಸಿ ಪುನಃ ನಮ್ಮ ಪರಂಪರೆ ಮೆರೆಸುವ ಕಾಲ ಬಂದಿದೆ. ಹಿಂದಿನ ಸಂಪ್ರದಾಯ ಮರೆಯದೇ ಆಚರಿಸುವ ಮೂಲಕ ಹಳೆ ಬೇರಿಗೆ ಈಗಿನ ಮಕ್ಕಳು ಹೊಸ ಚಿಗುರಾಗಿ ಸಂಸ್ಕೃತಿ, ಪರಂಪರೆ ಮುಂದುವರೆಸಿಕೊಂಡು ಹೋಗಬೇಕೆಂದು ನೀಲೂರ ಶಿವಶರಣೆ ನಿಂಬೆಕ್ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಲೋಣಿ ಹೇಳಿದರು.
ಕನ್ನಡಪ್ರಭ ವಾರ್ತೆ ಚವಡಾಪುರ
ಸಾವಿರಾರು ವರ್ಷಗಳ ಇತಿಹಾಸ ಇರುವ ನಮ್ಮ ಹಿಂದೂ ಧರ್ಮಕ್ಕೆ ಯಾವತ್ತೂ ಅವನತಿ ಎನ್ನುವುದಿಲ್ಲ. ಆದರೆ ನಮ್ಮ ಕೆಲವು ತಪ್ಪುಗಳಿಂದಾಗಿ, ಪಾಶ್ಚಾತ್ಯದ ಪ್ರಭಾವಕ್ಕೆ ಒಳಗಾಗಿ ಕೆಲವು ಕಪ್ಪುಚುಕ್ಕೆ ಬಂದಿವೆ. ಅವುಗಳನ್ನು ಅಳಿಸಿ ಪುನಃ ನಮ್ಮ ಪರಂಪರೆ ಮೆರೆಸುವ ಕಾಲ ಬಂದಿದೆ. ಹಿಂದಿನ ಸಂಪ್ರದಾಯ ಮರೆಯದೇ ಆಚರಿಸುವ ಮೂಲಕ ಹಳೆ ಬೇರಿಗೆ ಈಗಿನ ಮಕ್ಕಳು ಹೊಸ ಚಿಗುರಾಗಿ ಸಂಸ್ಕೃತಿ, ಪರಂಪರೆ ಮುಂದುವರೆಸಿಕೊಂಡು ಹೋಗಬೇಕೆಂದು ನೀಲೂರ ಶಿವಶರಣೆ ನಿಂಬೆಕ್ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಲೋಣಿ ಹೇಳಿದರು.ಅಫಜಲ್ಪುರ ತಾಲೂಕಿನ ನಿಲೂರ ಗ್ರಾಮದ ಶಿವಶರಣೆ ನೀಲೂರ ನಿಂಬೆಕ್ಕ ಶಿಕ್ಷಣ ಸಂಸ್ಥೆಯಲ್ಲಿ ಮಕರ ಸಂಕ್ರಾಂತಿ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಪೂರ್ವಜರು ನಿತ್ಯ ಕೃಷಿ ಕಾಯಕ ಮಾಡಿಕೊಂಡು ಬದುಕು ಸಾಗಿಸಿದವರು. ಜೊತೆಗೆ ಪರಂಪರೆ, ಆಚಾರ, ವಿಚಾರ ಮೈಗೂಡಿಸಿಕೊಂಡು ಬದುಕಿದವರು. ಅವರ ಹಾದಿಯಲ್ಲೇ ನಾವೆಲ್ಲರೂ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಬೆಳವಣಿಗೆ ಹಂತದಲ್ಲಿರುವಾಗಲೇ ನಮ್ಮ ಸಂಸ್ಕೃತಿ, ಪರಂಪರೆ ಕುರಿತು ತಿಳಿಹೇಳುವ ಕೆಲಸ ಮಾಡಬೇಕು ಎಂದರು.
ಇನ್ನೂ ನಮ್ಮ ಸಂಸ್ಕೃತಿಯನ್ನು ಜಗದಗಲ ಪರಿಚಯಿಸಿದ ಸಂತಶ್ರೇಷ್ಠ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಕುರಿತು ಅಭಿಪ್ರಾಯ ಹಂಚಿಕೊಂಡರು.ಈ ವೇಳೆ ಮುಖ್ಯಗುರು ಸುನಂದಾ ವಿ ಮಠಪತಿ, ಶಿಕ್ಷಕರಾದ ನಾಗರಾಜ ಮಡಿವಾಳ, ಗೀತಾ ಶರಣು ಹಾಳಮಳ್ಳಿ, ಸ್ವಪ್ನ ಸುರೇಶ ಮುಗದಿ, ಬಸವಲಿಂಗಪ್ಪಾ ಎಸ್ ಹೂಗಾರ, ಸಂಗಯ್ಯ ಸ್ಥಾವರಮಠ, ಸವಿತಾ ಶಂಕ್ರಯ್ಯ ಮಠಪತಿ, ಸಾಯಬಣ್ಣ ಹೂಗಾರ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು.